Monday, December 23, 2024

ಹಿಂದಿಯಲ್ಲಿ 3ನೇ ದಿನವೂ ‘ಕಾಂತಾರ’ ಹೌಸ್​ಫುಲ್

ದೇಶಾದ್ಯಂತ ಇರುವ ಸಿನಿಪ್ರಿಯರು ‘ಕಾಂತಾರ’ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ. ಈ ಚಿತ್ರ ಸೃಷ್ಟಿ ಮಾಡಿರುವ ಹೈಪ್​ ಅಷ್ಟಿಷ್ಟಲ್ಲ. ಕನ್ನಡದಲ್ಲಿ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಈ ಚಿತ್ರ ಧೂಳೆಬ್ಬಿಸುತ್ತಿದೆ.

ರಿಷಬ್​ ಶೆಟ್ಟಿ ನಟನೆಯನ್ನು ಎಲ್ಲರೂ ಹೊಗಳುತ್ತಿದ್ದಾರೆ. ಎಲ್ಲೆಡೆಯಿಂದ ಉತ್ತಮ ವಿಮರ್ಶೆ ಸಿಕ್ಕಿದ್ದರಿಂದ ಬೇರೆ ಭಾಷೆಗಳಿಗೂ ಡಬ್​ ಮಾಡಿ ಅಕ್ಟೋಬರ್​ 14ರಂದು ರಿಲೀಸ್​ ಮಾಡಲಾಯ್ತು. ಮುಂಬೈನಲ್ಲಿ ಸತತ ಮೂರು ದಿನ ಅನೇಕ ಶೋಗಳು ಹೌಸ್​ಫುಲ್​ ಆಗಿವೆ. 3ನೇ ದಿನವಾದ ಭಾನುವಾರ ಜನರು ಈ ಚಿತ್ರವನ್ನು ಮುಗಿಬಿದ್ದು ನೋಡಿದ್ದಾರೆ.

‘ಕಾಂತಾರ’ ಚಿತ್ರದ ಬಾಕ್ಸ್​ ಆಫೀಸ್​ ಕಲೆಕ್ಷನ್​ ನೋಡಿ ಬಾಲಿವುಡ್​ ಮಂದಿ ಕೂಡ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹಿಂದಿ ಪ್ರೇಕ್ಷಕರು ಈ ಸಿನಿಮಾ ಮೇಲೆ ಹೆಚ್ಚು ಆಸಕ್ತಿ ತೋರಿಸಿದರು. ಹಿಂದಿಯಲ್ಲಿ ಮೊದಲ ದಿನ 1.27 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಎರಡನೇ ದಿನ 2.75 ಕೋಟಿ ರೂಪಾಯಿಗೆ ಏರಿಕೆ ಆಯಿತು. ಭಾನುವಾರ ಕೂಡ ಭರ್ಜರಿ ಕಲೆಕ್ಷನ್​ ಆಗಿದ್ದು, ಅಧಿಕೃತ ಲೆಕ್ಕ ಎಷ್ಟು ಎಂಬುದು ಸದ್ಯದಲ್ಲೇ ರಿವೀಲ್​ ಆಗಲಿದೆ. ಸಲ್ಮಾನ್​ ಖಾನ್​ ಮತ್ತು ಚಿರಂಜೀವಿ ನಟಿಸಿದ್ದ ‘ಗಾಡ್​ ಫಾದರ್​’ ಚಿತ್ರ ಕೂಡ ಹಿಂದಿಗೆ ಡಬ್​ ಆಗಿತ್ತು. ಹಿಂದಿ ವರ್ಷನ್​ನಲ್ಲಿ ಆ ಸಿನಿಮಾ ಒಟ್ಟಾರೆ ಗಳಿಸಿದ್ದು 9.03 ಕೋಟಿ ರೂಪಾಯಿ ಮಾತ್ರ.. ಆ ಕಲೆಕ್ಷನ್​ ಅನ್ನು ‘ಕಾಂತಾರ’ ಸಿನಿಮಾ ಅನಾಯಾಸವಾಗಿ ಹಿಂದಿಕ್ಕಲಿದೆ.

RELATED ARTICLES

Related Articles

TRENDING ARTICLES