Wednesday, January 22, 2025

ಕೆಪಿಸಿಸಿ ಕಚೇರಿಯಲ್ಲಿ ಮತದಾನ ಮಾಡಿದ ಡಿಕೆಶಿ

ಬೆಂಗಳೂರು : ಎಐಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ನಡೆಯುತ್ತಿರುವ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತದಾನ ಮಾಡಿದರು.

ಕೆಪಿಸಿಸಿ ಕಚೇರಿಯಲ್ಲಿ ಬೂತ್ ನಂಬರ್ 3 ರಲ್ಲಿ ಡಿಕೆಶಿ ಮತದಾನ ಮಾಡಿದರು. ಡಿಕೆಶಿ ಬಳಿಕ ರಾಜ್ಯಸಭಾ ಸದಸ್ಯ ನಝೀರ್ ಅಹ್ಮದ್ ಹಾಗೂ ಇನ್ನಿತರರು ಮತದಾನ ಮಾಡುತ್ತಿದ್ದಾರೆ. ಮತದಾನಕ್ಕೆ ಮೊದಲು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್,ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಿಂದ ಭಾರತದಲ್ಲೇ ಪರಿಣಾಮವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷ ಸ್ಥಾನದ ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯುತ್ತಿದೆ ಎಂದರು. ಚುನಾವಣೆಯಲ್ಲಿ ಹಿರಿಯ ನಾಯಕರು ಸ್ಪರ್ಧೆ ಮಾಡಿದ್ದಾರೆ. ನಿಷ್ಠಾವಂತ ಕಾರ್ಯಕರ್ತನ ಕಡೆ ಗಾಳಿ ಬೀಸುತ್ತಿದೆ. ಕರ್ನಾಟಕಕ್ಕೆ ಇದು ಒಳ್ಳೆಯದಾಗಲಿದೆ. ಖರ್ಗೆ ಆಯ್ಕೆ ಇಡೀ ಭಾರತದಲ್ಲೇ ಪರಿಣಾಮ ಆಗಲಿದೆ. ನಾನೂ ಕೂಡ ಗಾಂಧಿ ಕುಟುಂಬ ಇರಬೇಕು ಅಂತ ಒತ್ತಾಯ ಮಾಡಿದವನು. ಆದರೆ ಅವರೇ ಬೇರೆಯವರಿಗೆ ಅವಕಾಶ ಕೊಡೋಣ ಎಂದಿದ್ದಾರೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES