ಚಿತ್ರದುರ್ಗ : ಸಿಎಂ ಬೊಮ್ಮಾಯಿ, ಬಿಎಸ್‌ವೈ ಸೂಚನೆಯಂತೆ ಪೀಠಾಧಿಪತಿ ಆಯ್ಕೆಯಾಗಿದ್ದು, ನೂತನ ಪೀಠಾಧಿಪತಿ ಆಯ್ಕೆ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಮುರುಘಾ ಮಠಕ್ಕೆ ನೂತನ ಪೀಠಾಧಿಪತಿ ಆಯ್ಕೆ ಬಹುತೇಕ ಖಚಿತವಾಗಿದ್ದು, ಮಲ್ಲಿಕಾರ್ಜುನ ದೇವರು ಸ್ವಾಮೀಜಿ ಮುರುಘಾ ಮಠದ ನೂತನ ಪೀಠಾಧಿಪತಿಯಾಗಲಿದ್ದಾರೆ. ಸರ್ಪಭೂಷಣ ಮಠ, ದೊಡ್ಡಮಠಕ್ಕೂ ಪೀಠಾಧ್ಯಕ್ಷರಾಗಿರುವ ಮಲ್ಲಿಕಾರ್ಜುನ ದೇವರು, ಶರಣ ಪರಂಪರೆಗೆ ಚ್ಯುತಿ ಬಾರದಂತೆ ಸರಳ ಸಜ್ಜನಿಕೆಯ ಸ್ವಾಮೀಜಿಯನ್ನು ಆಯ್ಕೆ ಮಾಡಲಾಗಿದೆ.
ಇನ್ನು, 44 ವರ್ಷಗಳಿಂದ ಬಸವಣ್ಣನ ಸಂದೇಶ ಸಾರಿರುವ ಮಲ್ಲಿಕಾರ್ಜುನ ಸ್ವಾಮೀಜಿ, ದೇಶ ವಿದೇಶಗಳಲ್ಲಿ ಬಸವಣ್ಣನ ಸಂದೇಶ ಸಾರಿರುವ ಮಲ್ಲಿಕಾರ್ಜುನ ಸ್ವಾಮೀಜಿ, 1976ರಲ್ಲಿ ಮುರುಘಾ ಮಠದ ಹಿರಿಯ ಸ್ವಾಮೀಜಿಯಿಂದ ದೀಕ್ಷೆ ಪಡೆದಿದ್ದರು. ಹಾಸನ ಜಿಲ್ಲೆಯ ಅರಕಲಗೂಡಿನ ದೊಡ್ಡಮಠದಲ್ಲಿ ಶರಣ ದೀಕ್ಷೆ ಪಡೆದಿದ್ದು, ಬಳಿಕ 1985ರಲ್ಲಿ ಸರ್ಪಭೂಷಣ ಮಠದ ಪೀಠಾಧಿಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ವೇದ, ಸಂಸ್ಕೃತ, ಸಾಹಿತ್ಯ, ವಚನ ಸಾಹಿತ್ಯ, ವೀರಶೈವ, ಜಂಗಮ ವಿಚಾರದಲ್ಲಿ ಅಪಾರ ಜ್ಞಾನ ಹೊಂದಿದ್ದಾರೆ.
ವೀರಶೈವ-ಲಿಂಗಾಯತ ಒಂದೇ ಎಂದು ಪ್ರತಿಪಾದಿಸಿದ ಮಲ್ಲಿಕಾರ್ಜುನ ದೇವರು ಸ್ವಾಮೀಜಿ, ನ್ಯೂಜಿಲೆಂಡ್ನಲ್ಲಿ ಮೊದಲ ಬಾರಿಗೆ ಬಸವ ಸಮಿತಿ ಸ್ಥಾಪಿಸಿದ ಕೀರ್ತಿ ಮಲ್ಲಿಕಾರ್ಜುನ ದೇವರದ್ದು. ಸರ್ಪಭೂಷಣ ಮಠ, ದೊಡ್ಡಮಠಕ್ಕೂ ಪೀಠಾಧ್ಯಕ್ಷರಾಗಿದ್ದಾರೆ.