ಬೆಂಗಳೂರು : ಕೆಲಸ ಮಾಡಿ, ಇಲ್ಲಾಂದ್ರೆ ನಿಮ್ಮ ಬದಲು ಬೇರೊಬ್ಬರನ್ನು ಕೂರಿಸೋದು ಗೊತ್ತು ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಕೆಲಸ ಮಾಡಿ, ಇಲ್ಲಾಂದ್ರೆ ನಿಮ್ಮ ಬದಲು ಬೇರೊಬ್ಬರನ್ನು ಕೂರಿಸೋದು ಗೊತ್ತು, ಮಳೆ ಅವಾಂತರಕ್ಕೆ ಸಮರ್ಪಕ ಪರಿಹಾರ ವಿತರಣೆಯಲ್ಲಿ ಲೋಪ ಉಂಟಾಗುತ್ತಿದೆ. ಪರಿಹಾರ ಹಂಚಿಕೆಯಲ್ಲಿ ವಿಳಂಬವಾಗ್ತಿದೆ. ಈ ಲೋಪಕ್ಕೆ ನೀವೇ ಹೊಣೆ. ಡಿಸಿ ಕಚೇರಿಯಲ್ಲಿ ಕೂತು ಕೆಲಸ ಮಾಡಿದ್ರೆ ಆಗಲ್ಲ. ತಾಲೂಕು ಕೇಂದ್ರಕ್ಕೇ ಹೋಗಿ ಕೆಲಸ ಮಾಡಿ ಎಂದರು.
ಇನ್ನು, ಬಹುತೇಕರು ತಾಲ್ಲೂಕು ಕೇಂದ್ರಕ್ಕೆ ಭೇಟಿ ಕೊಡ್ತಿಲ್ಲ. ಜಾನುವಾರುಗಳ ಚರ್ಮ ಗಂಟು ರೋಗ ಹಬ್ಬತ್ತಿದೆ. ರೋಗ ತಡೆಯಲು ಯಾವ ಕ್ರಮ ಕೈಗೊಂಡಿದ್ದೀರಿ? ಲಸಿಕೆ ಹಾಕುವುದು, ಪರಿಹಾರ ವಿತರಿಸುವ ಕೆಲಸ ಚುರುಕು ಪಡೆದಿಲ್ಲ. ನಿಮ್ಮ ನಿಮ್ಮ ಅಧಿಕಾರ, ಜವಾಬ್ದಾರಿ ಅರಿತು ಕೆಲಸ ಮಾಡಿ. ಸಭೆಯಲ್ಲಿ ಡಿಸಿಗಳಿಗೆ ಸಿಎಂ ಬೊಮ್ಮಾಯಿ ತಾಕೀತು ಮಾಡಿದರು.