ಬೆಂಗಳೂರು : ನಿಷೇಧಿತ ಸಂಘಟನೆ PFIನ 15 ಆರೋಪಿಗಳನ್ನ ಈಗಾಗ್ಲೇ ಕೆಜಿ ಹಳ್ಳಿ ಪೊಲೀಸ್ರು ವಿಚಾರಣೆ ನಡೆಸಿ, ಮಹತ್ತರ ಮಾಹಿತಿಗಳನ್ನ ಕಲೆಹಾಕಿದ್ದರು. ವಾಟ್ಸಾಪ್, ಮೆಸ್ಸೆಂಜರ್, ಟೆಲಿಗ್ರಾಂ ಸೇರಿದಂತೆ ಕೆಲ ಆ್ಯಪ್ಗಳ ಮೂಲಕ ಹಲವು ವ್ಯಕ್ತಿಗಳ ಜೊತೆ ನಂಟನ್ನ ಹೊಂದಿದ್ದ ಬಂಧಿತರ ಬಗೆಗೆ ಸಾಕಷ್ಟು ಟೆಕ್ನಿಕಲ್ ಎವಿಡೆನ್ಸ್ಗಳನ್ನ ಕಲೆ ಹಾಕುವಲ್ಲಿ ಪೊಲೀಸ್ರು ಯಶಸ್ವಿಯಾಗಿದ್ದರು. ಇದೀಗ ಸೀಕ್ರೆಟ್ ವಿಚಾರವನ್ನ ತನಿಖಾಧಿಕಾರಿಗಳಿಂದ ಪಡೆದಿರೋ ಪೊಲೀಸ್ ಆಯುಕ್ತರು ನೆಕ್ಸ್ಟ್ ಲೆವೆಲ್ನಲ್ಲಿ ಯಾವ ರೀತಿ ಕಾರ್ಯಾಚರಣೆಗೆ ಇಳಿಬೇಕು ಎಂಬುದನ್ನ ಹೇಳಿದ್ದಾರಂತೆ.
ನಿನ್ನೆ ತನಿಖಾಧಿಕಾರಿಗಳ ಜೊತೆ ರಿವ್ಯೂವ್ ಮೀಟಿಂಗ್ ನಡೆಸಿರೋ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹಳೇ ಆರೋಪಿಗಳು ನಮಗೆ ಬೇಡ ಹೊಸ ಆರೋಪಿಗಳ ಬಗ್ಗೆ ಮಾಹಿತಿ ಕಲೆಹಾಕಿ ಎಂದಿದ್ದಾರಂತೆ. 15 ಆರೋಪಿಗಳ ಜೊತೆ ನಿಕಟ ಸಂಪರ್ಕದಲ್ಲಿದ್ದವರ ಹೆಡೆಮುರಿ ಕಟ್ಟೋಕೆ ಸಿದ್ದತೆ ನಡೆಸುವಂತೆ ಸೂಚಿಸಿದ್ದಾರಂತೆ. ಅದಕ್ಕಾಗಿ ಈಗಾಗ್ಲೇ ಕೆಜಿ ಹಳ್ಳಿ ಉಪವಿಭಾಗದ ಪೊಲೀಸ್ರು ಮತ್ತೊಂದು ದಾಳಿಗೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದ್ದಾರೆ. ಸೋಮವಾರವೇ PFI ಬಂಧಿತರ ಜೊತೆಯಲ್ಲಿ ಕೈಜೋಡಿಸಿರುವ ವ್ಯಕ್ತಿಗಳನ್ನ ಹುಡುಕಿ ಬೇಟೆಯಾಡೋಕೆ ಸಕಲ ತಯಾರಿ ಮಾಡಿಕೊಂಡಿದ್ದಾರೆ ಪೊಲೀಸರು.
ಸದ್ಯ ಫಸ್ಟ್ ಇನ್ನಿಂಗ್ಸ್ನಲ್ಲಿ ಕೆಜಿ ಹಳ್ಳಿ ಪೊಲೀಸ್ರು ಆರೋಪಿಗಳ ಆಳ, ಉದ್ದ, ಅಗಲವನ್ನ ಅಳೆದಿದ್ದಾರೆ. ಇನ್ನುಳಿದಿರೋದು ಸೆಕೆಂಡ್ ಇನ್ನಿಂಗ್ಸ್ ಶಾರ್ಟ್ ಲಿಸ್ಟ್. ಹೀಗಾಗಿ ಸದ್ಯದಲ್ಲೇ ಮತ್ತೆ ಫೀಲ್ಡಿಗಿಳಿಯಲು ಖಾಕಿ ತಂಡ ಸಜ್ಜಾಗಿದೆ.
ಅಶ್ವಥ್ ಎಸ್. ಎನ್.ಕ್ರೈಂ ಬ್ಯೂರೋ ಪವರ್ ಟಿವಿ