ಬೆಂಗಳೂರು : ಈಗಾಗಲೇ ಡಾ.ಶಿವರಾಮ ಕಾರಂತ ಬಡಾವಣೆಯನ್ನ ನಿರ್ಮಾಣ ಮಾಡೋಕೆ ಒದ್ದಾಡ್ತಿರೋ ಬಿಡಿಎಗೆ, ಭೂ ದಾಹ ಕಮ್ಮಿಯಾದಂತೆ ಕಾಣ್ತಿಲ್ಲ.. ಯಾಕೆಂದರೆ ಮತ್ತೆ ಭೂಸ್ವಾಧೀನಪಡಿಸಿಕೊಳ್ಳಕ್ಕೆ ಮುಂದಾಗಿದೆ. ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಮಾಡಲು ಪ್ಲಾನ್ ರೂಪಿಸಿದೆ. ಸುಮಾರು 2095 ಎಕರೆ ಪ್ರದೇಶ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಈ ಬಗ್ಗೆ ಬಿಡಿಎ ಬೋರ್ಡ್ ಮೀಟಿಂಗ್ನಲ್ಲಿ ತೀರ್ಮಾನ ಮಾಡಲಾಗಿದ್ದು, ಸರ್ಕಾರಕ್ಕೆ ವರದಿ ಸಲ್ಲಿಸಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ಸಿದ್ದತೆ ನಡೆಸಿದೆ.
ಶಿವಕಾರಂತ ಬಡಾವಣೆಗೆ ಅಂತ ಈಗಾಗಲೇ 3567 ಎಕರೆಯನ್ನ ಭಾಗವನ್ನು ಅಂತಿಮ ಅಧಿಸೂಚನೆ ಹೊರಡಿಸಿದೆ. ಸುಪ್ರೀಂ ಕೋರ್ಟ್ ಕೂಡಲೇ ಶಿವಕಾರಂತ ಬಡಾವಣೆ ನಿರ್ಮಿಸಿ ಅಂತ ಹೇಳಿದ್ರೂ ಲೇಔಟ್ ನಿರ್ಮಾಣ ಮಾಡೋಕೆ ಆಗ್ತಿಲ್ಲ. ಆದ್ರೂ ಇದೀಗ ಮತ್ತೆ ಶಿವರಾಮ್ ಕಾರಂತ ಮುಂದುವರೆದ ಬಡಾವಣೆ ಮಾಡೋಕೆ ಹೊರಟಿದೆ.. ಈ ಬಡಾವಣೆಗೆ ಯಲಹಂಕ ಬಳಿಯ ಆವಲಹಳ್ಳಿ, ಜಾರಕಬಂಡೆ, ಲಿಂಗರಾಜಪುರ, ದೊಡ್ಡಬೆಳ್ಳಕೆರೆ, ಕೆಂಪಾಪುರ, ಚಿಕ್ಕಬಾಣವಾರ, ಸೋಲದೇವನಹಳ್ಳಿ ಸೇರಿದಂತೆ 13 ಗ್ರಾಮಗಳಲ್ಲಿ 2095 ಎಕರೆ ಜಾಗವನ್ನ ಭೂಸ್ವಾಧೀನಕ್ಕೆ ಪ್ಲಾನ್ ರೂಪಿಸಲಾಗಿದೆ. ಸರ್ಕಾರ ಒಪ್ಪಿಗೆ ನೀಡಿದ್ರೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ತೀರ್ಮಾನಿಸಿದೆ.
ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಸದ್ಯದಲ್ಲೇ ಭೂಸ್ವಾಧೀನ ಪ್ರಕ್ರಿಯೆ ಶುರು ಆಗಲಿದೆ. ಆದ್ರೆ ಇತ್ತ ಸರ್ಕಾರ ಇದಕ್ಕೆ ಗ್ರೀನ್ ಸಿಗ್ನಲ್ ನೀಡುತ್ತಾ ಅನ್ನೋ ಕುತೂಹಲ ಮೂಡಿದೆ. ಆದ್ರೆ ಬಿಡಿಎ ನಿರ್ಮಾಣ ಮಾಡಲು ಹೊರಟಿರುವ ಶಿವರಾಮ ಕಾರಂತ ಮುಂದುವರೆದ ಬಡಾವಣೆಗೆ 13 ಗ್ರಾಮಗಳ ರೈತರು ಭಾರಿ ವಿರೋಧ ವ್ಯಕ್ತಪಡಿಸುತ್ತಾರೆ.
ಸದ್ಯ ಬಿಡಿಎ ಅಧಿಕಾರಿಗಳು ಇರೋದನ್ನ ನೆಟ್ಟಿಗೆ ಮಾಡ್ತಿಲ್ಲ. ಇದೀಗ ಮತ್ತೊಂದು ಲೇಔಟ್ ಬೇಕಾ ಎನ್ನುತ್ತಿದ್ದಾರೆ ರೈತರು. ಹೊಸ ಲೇಔಟ್ಗೆ ಜೀವ ನೀಡ್ತಿರೋದಕ್ಕೆ ರೈತರ ಜೀವ ಬಲಿಯಾಗುತ್ತೆ ಅಂತ ಸ್ಥಳೀಯರಿಂದಲೂ ಇದಕ್ಕೆ ವಿರೋಧ ವ್ಯಕ್ತವಾಗ್ತಿದೆ. ಆದ್ರೂ ಬಿಡಿಎ ಮಾತ್ರ ಶಿವರಾಮ ಕಾರಂತ ಮುಂದುವರೆದ ಬಡಾವಣೆ ಮಾಡೇ ತಿರುತ್ತೇವೆ ಎಂದು ಬಿಡಿಎ ಹೊರಟಿರೋದು ಮುಂದೆ ಏನೆಲ್ಲಾ ತಿರುವುಗಳನ್ನ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ.
ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು.