Saturday, December 28, 2024

ಜೀವಂತವಾಗಿದ್ದ ವೃದ್ಧೆಯನ್ನ ತಿಂದು ಹಾಕಿದ ಬೀದಿ ನಾಯಿಗಳು.!

ಕಲಬುರಗಿ; ನಾಯಿಗಳು ಹಂದಿಗಳನ್ನ, ಹುಳುಗಳನ್ನ ತಿಂದು ಹಾಕುವ ಅದೆಷ್ಟೋ ವಿಡಿಯೋ ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿರುತ್ತದೆ. ಆದರೆ, ಜಿವಂತವಾಗಿದ್ದ ಇಲ್ಲೊಬ್ಬ ಅಜ್ಜಿಯನ್ನ ಬೀದಿ ನಾಯಿಗಳು ತಿಂದು ಹಾಕಿದ ಮನಕಲಕುವ ಘಟನೆ ನಡೆದಿದೆ.

ಕಲಬುರರ್ಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ದೇವಲಗಾಣಗಾಪುರದ ಗಾಂಧಿ ನಗರದ ಕಳೆದ ರಾತ್ರಿ ಮಲಗಿದ್ದ ವೃದ್ದೆಯನ್ನ ಬೀದಿ ನಾಯಿಗಳು ಹರಿದು ತಿಂದಿದ್ದಾವೆ. ಮೂರು ದಿನಗಳ ಹಿಂದೆ ವೃದ್ದೆಗೆ ಟಂಟಂ ಗೂಡ್ಸ್​ ವಾಹನ ಡಿಕ್ಕಿ ಹೊಡೆದು ವೃದ್ಧೆ ಗಾಯಗೊಂಡಿದ್ದಳು.

ಆಸ್ಪತ್ರೆಗೆ ತೋರಿಸಿ ದೇವಲಗಾಣಗಾಪುರದ ಗಾಂಧಿ ನಗರದ ರಸ್ತೆ ಪಕ್ಕದಲ್ಲಿ ಟಂಟಂ ಚಾಲಕ ಹಾಕಿ ಹೋಗಿದ್ದ, ಬಳಿಕ ಬೀದಿ ನಾಯಿ ಹರಿದು ತಿಂದ ಹಿನ್ನಲೆ ವೃದ್ದೆ ಮೃತಪಟ್ಟಿದ್ದಾಳೆ. ಇನ್ನು ವೃದ್ಧೆ ಮೃತ ಪಟ್ಟ ಹಿನ್ನಲೆಯಲ್ಲಿ ಗ್ರಾಮಸ್ಥರು ಹಾಗೂ ಪೊಲೀಸರು ಸೇರಿ ವೃದ್ದೆಯ ಅಂತ್ಯಸಂಸ್ಕಾರ ನೆರೆವೆರಿಸಿದರು. ವೃದ್ದೆ ಮೂಲ ಹೆಸರು ಹಾಗೂ ಯಾವ ಊರು ಎಂದು ತಿಳಿದು ಬಂದಿಲ್ಲ.

RELATED ARTICLES

Related Articles

TRENDING ARTICLES