Wednesday, January 22, 2025

T-20 ವಿಶ್ವಕಪ್​; ಮೊದಲ ಅರ್ಹತಾ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನ ಸದೆಬಡೆದ ನಮೀಬಿಯಾ.!

ಆಸ್ಟೇಲಿಯಾ: ಇಂದಿನಿಂದ ಟಿ-20 ವಿಶ್ವಕಪ್​ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಿದ್ದು, ಗೀಲಾಂಗ್‌ನ ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಶ್ರೀಲಂಕಾ ತಂಡ ಮುಗ್ಗರಿಸಿದೆ.

ಮೊದಲು ಶ್ರೀಲಂಕಾ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ನಮೀಬಿಯಾ ಮೊದಲಿಗೆ ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 163 ರನ್​ ಸೇರಿಸಿತು.

ಈ ಸವಾಲು ಸ್ವೀಕರಿಸಿದ ಶ್ರೀಲಂಕಾ ತಂಡ 19 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದು ಕೊಂಡು 108 ರನ್​​ ಕಲೆಹಾಕುವಲ್ಲಿ ಸಶಕ್ತವಾಯಿತು. ಈ ಮೂಲಕ ಶ್ರೀಲಂಕಾ ತಂಡದ ವಿರದ್ಧ ನಮೀಬಿಯಾ 55 ರನ್​ಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿತು.

ಇನ್ನು ನಮೀಬಿಯಾ ತಂಡ ಆಡಿದ ಮೊದಲ ವಿಶ್ವಕಪ್‌ಕಪ್‌ ಟಿ-20 ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದೆ. ಅರ್ಹತಾ ಸುತ್ತಿನಲ್ಲಿರುವ ತಂಡಗಳನ್ನು ತಲಾ ನಾಲ್ಕು ತಂಡಗಳ ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿದ್ದು ತಮ್ಮ ಗುಂಪಿನಲ್ಲಿರುವ ಇತರ ಮೂರು ತಂಡಗಳ ಜೊತೆಗೆ ಒಂದೊಂದು ಪಂದ್ಯಗಳನ್ನು ಆಡಿ ಮುಂದಿನ ಹಂತಕ್ಕೇರುವ ಪ್ರಯತ್ನ ನಡೆಸಲಿದೆ.

ವಿಶ್ವಕಪ್​ ನ ಅರ್ಹತಾ ಸುತ್ತಿನಲ್ಲಿ ನಮೀಬಿಯಾ, ಶ್ರೀಲಂಕಾ, ನೆದರ್ಲೆಂಡ್ಸ್ ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಗ್ರೂಪ್ A ನಲ್ಲಿ ಸ್ಪರ್ಧಿಸಲಿದ್ದರೆ ಐರ್ಲೆಂಡ್, ಸ್ಕಾಟ್‌ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಜಿಂಬಾಬ್ವೆ ತಂಡಗಳು ಗ್ರೂಪ್‌ B ನಲ್ಲಿವೆ. ಈ ಎಂಟು ತಂಡಗಳ ಪೈಕಿ ಅಂಕಪಟ್ಟಿಯಲ್ಲಿ ಎರಡು ಗುಂಪುಗಳಲ್ಲಿಯೂ ಅಗ್ರಸ್ಥಾನವನ್ನು ಪಡೆದುಕೊಂಡ ತಲಾ ಎರಡು ತಂಡಗಳು ಮಾತ್ರ ಮುಂದಿನ ಹಂತಕ್ಕೇರಲು ಯಶಸ್ವಿಯಾಗಲಿದೆ.

 

RELATED ARTICLES

Related Articles

TRENDING ARTICLES