Wednesday, January 22, 2025

ಜಿ.ಪಂ ಮಾಜಿ ಸದಸ್ಯನಿಗೆ ಹಲ್ಲೆ ಮಾಡಿದ್ರಾ ಶಾಸಕ ಎಂ.ಪಿ ರೇಣುಕಾಚಾರ್ಯ.?

ದಾವಣಗೆರೆ; ಹೊನ್ನಾಳಿಯಲ್ಲಿ ಗಣಪತಿ ವಿಚಾರಕ್ಕೆ ಸಂಬಂಧಿಸಿದ ವಿಚಾರಕ್ಕೆ ಎಂಪಿ ರೇಣುಕಾಚಾರ್ಯ ಹಾಗೂ ಎಂ.ಆರ್ ಮಹೇಶ್ ನಡುವೆ ವಾಗ್ವಾದ ನಡೆದು ಹಲ್ಲೆಗೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.

ಗಣಪತಿ ವಿಚಾರಕ್ಕೆ ಜಿ.ಪಂ ಮಾಜಿ ಸದಸ್ಯ, ಬಿಜೆಪಿ ಎಂಎಲ್​​ಎ ಟಿಕೆಟ್ ಆಕಾಂಕ್ಷಿ ಎಂಆರ್ ಮಹೇಶ್ ಹಾಗೂ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ನಡುವೆ ವಾಗ್ವಾದ ಆಗಿದೆ. ಈ ವೇಳೆ ವೇದಿಕೆ ಮೇಲೆ ಇದ್ದ ಮಹೇಶ್ ಅವರ ಮೇಲೆ ರೇಣುಕಾಚಾರ್ಯ ಹಲ್ಲೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಬಳಿಕ ಮಹೇಶ್ ರನ್ನ ಪೊಲೀಸರು ವಶಕ್ಕೆ ಪಡೆದಿದಿದ್ದು, ಠಾಣೆ ಬಿಟ್ಟು ಹೋಗದೇ ಪೊಲೀಸ್ ಠಾಣೆಯಲ್ಲೇ ಪ್ರತಿಭಟನೆ ಮಾಡಿ ಕುರುಬ ಸಮಾಜದ ಮೇಲೆ ದಬ್ಬಾಳಿಕೆ ಮಾಡಲಾಗುತ್ತಿದೆ ಎಂದು ಮಹೇಶ್ ಆರೋಪ ಮಾಡಿದರು.

ಈ ಬಗ್ಗೆ ಹೊನ್ನಾಳಿಯಲ್ಲಿ ಎಂಪಿ ರೇಣುಕಾಚಾರ್ಯ ಸ್ಪಷ್ಟನೆ ನೀಡಿ, ಹತ್ತಾರು ಜನ ಸೇರಿ ನನ್ನ ಕೊಲೆಗೆ ಯತ್ನ ಮಾಡಿದ್ದಾರೆ. ಗಣಪತಿ ವಿಸರ್ಜನೆ ಹಾಳು ಮಾಡಬೇಕು ಎಂದು ಗಲಾಟೆ ಮಾಡಿದ್ದಾರೆ. ನಾನು ಯಾರಿಗೂ ಹೆದರೋಲ್ಲ, ಕುರುಬ ಸಮಾಜಕ್ಕೆ ನಾನು ಬೈದಿಲ್ಲ. ಅವನೇ ಠಾಣೆಯಲ್ಲಿ ಕೂತು ಕುರುಬ ಸಮಾಜಕ್ಕೆ ಅಪಮಾನ ಮಾಡಿದ್ದಾರೆ ಎಂದು ಸುಳ್ಳು ಹೇಳಿಕೆ ನೀಡಿದ್ದಾನೆ ಎಂದರು.

RELATED ARTICLES

Related Articles

TRENDING ARTICLES