Sunday, December 22, 2024

ಮಂಡ್ಯದ ತ್ರಿವೇಣಿ ಸಂಗಮದಲ್ಲಿ ಅದ್ದೂರಿ ಕುಂಭಮೇಳ

ಮಂಡ್ಯ : ಪವಾಡ ಪುರುಷ ಮಲೆ ಮಹದೇಶ್ವರರ ಮೂಲ ಪವಾಡ ಸ್ಥಳ ಹಾಗೂ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಮಹಾ ಸಂಗಮದ ಸ್ಥಳವಾದ ಮಂಡ್ಯ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ‌ ಮಹಾ ಕುಂಭಮೇಳದ ಸಂಭ್ರಮ ಭಕ್ತರಲ್ಲಿ ಮನೆ ಮಾಡಿದೆ. ಕುಂಭ ಮೇಳದ ಮೂರನೇ ದಿನವಾದ ಶುಕ್ರವಾರ ಬೆಳಗ್ಗೆ 5 ಗಂಟೆಯಿಂದಲೇ ಕಳಸ ಪೂಜೆ, ಗಣಪತಿ, ನವಗ್ರಹ, ಮೃತ್ಯುಂಜಯ, ಸಹಸ್ರ, ಮೋದಕ ಹೋಮಗಳು ನೆರವೇರಿದವು. ಇದೇ ವೇಳೆ 154 ಕುಂಭ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಮಾಡಲಾಯಿತು. ಇದಲ್ಲದೇ ನವಗ್ರಹ, ಮೃತ್ಯುಂಜಯ, ಅಷ್ಟದಿಕ್ಪಾಲಕರು, ಸಪ್ತ ನದಿ, ಮಾತೃಕೆಯರು, ಏಕಾದಶ ರುದ್ರ, ದ್ವಾದಶ, ಆದಿತ್ಯರ ಯಾಗ ಮಾಡಲಾಯಿತು.

ಇನ್ನೂ ನಾಗಮಲೆ ವೇದಿಕೆಯಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ರಾಜ್ಯದ ನಾನಾ ಮೂಲೆಗಳಿಂದ ಹಲವು ಮಂದಿ ಸ್ವಾಮೀಜಿಗಳು ಆಗಮಿಸಿದ್ರು. ಈ ಸಮ್ಮೇಳನಕ್ಕೆ ಸುತ್ತೂರು ಶ್ರೀಗಳು ಹಾಗೂ ಆದಿಚುಂಚನಗಿರಿ ಶ್ರೀಗಳು ಚಾಲನೆ ನೀಡಿದರು. ಬಳಿಕ ಸ್ವಾಮೀಜಿಗಳು ನೆರದಿದ್ದ ಭಕ್ತರಿಗೆ ಆಶೀರ್ವಚನ ನೀಡಿದ್ರು. ಅಲ್ಲದೇ, ಕುಂಭ ಮೇಳದ ಮಹತ್ವವನ್ನು ಸಾರಿ ಜನರು ಶನಿವಾರ ನಡೆಯುವ ಕುಂಭ ಸ್ನಾನದಲ್ಲಿ ಭಾಗಿಯಾಗಿ ತಾವು ಮಾಡಿರುವ ಪಾಪಗಳನ್ನು ಪರಿಹಾರ ಮಾಡಿ ಪುಣ್ಯ ಪ್ರಾಪ್ತಿ ಮಾಡಿಕೊಳ್ಳಬೇಕೆಂದು ಮನವಿ ಮಾಡಿಕೊಂಡ್ರು.

ಇನ್ನೂ ಶನಿವಾರ ತ್ರಿವೇಣಿ ಸಂಗಮದಲ್ಲಿ ಕುಂಭ ಸ್ನಾನವಿದ್ದು, ಈ ಕಾರ್ಯಕ್ರಮಕ್ಕೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಆಗಮಿಸಬೇಕಾಗಿತ್ತು. ಆದ್ರೆ, ಉತ್ತರ ಪ್ರದೇಶದಲ್ಲಿ ಪ್ರವಾಹ ಇರುವ ಕಾರಣ ಅವರು ತಮ್ಮ ಪ್ರವಾಸವನ್ನು ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಸಿಎಂಗೆ ಸುಧೀರ್ಘ ಪತ್ರವನ್ನು‌ ಸಹ ಯೋಗಿ ಆದಿತ್ಯನಾಥ್ ಬರೆದಿದ್ದಾರೆ. ಪತ್ರದಲ್ಲಿ ಕುಂಭ ಮೇಳಕ್ಕೆ‌ ಆಹ್ವಾನಿಸಿದ್ದಕ್ಕೆ ನಾನು ಕೃತಜ್ಞ. ಗಂಗಾ, ಯಮುನಾ, ಸರಸ್ವತಿ ನದಿಗಳ ಸಂಗಮದಲ್ಲೂ‌ ಕುಂಭ ಮೇಳ ಆಯೋಜನೆ ಮಾಡಲಾಗುತ್ತದೆ. ಅದೇ ರೀತಿ ಕಾವೇರಿ, ಹೇಮಾವತಿ ಹಾಗೂ ಲಕ್ಷ್ಮಣತೀರ್ಥ ನದಿಗಳ ಸಂಗಮದಲ್ಲೂ ಕುಂಭ ಮೇಳ ಮಾಡುತ್ತಿರುವುದು ಖುಷಿಯಾಗಿದೆ. ಈ ಕುಂಭ ಮೇಳವೂ ಸಾಮಾಜಿಕ ಸಾಮರಸ್ಯ ಮತ್ತು ಐಕ್ಯತೆಯನ್ನು‌ ಸಾಧಿಸಲಿ. ಜನರು ಈ ಕುಂಭಮೇಳದಲ್ಲಿ‌ ಹೆಚ್ಚಿನ ಸಂಖ್ಯೆಯಲ್ಲಿ‌ ಭಾಗಿಯಾಗಲಿ ಎಲ್ಲರಿಗೂ ಒಳಿತಾಗಲಿ ಎಂದು ಆಶಿಸುತ್ತೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು ಹಾಸನಾಂಬೆ ವಾರ್ಷಿಕ ಜಾತ್ರೆಯ 2ನೇ ದಿನ ದೇವಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು.
ಬೆಳಗ್ಗೆ 6 ಗಂಟೆಯಿಂದ ಮ.1.30 ರವರೆಗೆ ಹಾಗೂ ಮ.3.30 ರಿಂದ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು

 ಸಚಿನ್ ಶೆಟ್ಟಿ ಹಾಸನ

RELATED ARTICLES

Related Articles

TRENDING ARTICLES