Wednesday, December 25, 2024

ಸಿದ್ದರಾಮಯ್ಯನವರು PFI, SDPI ಯನ್ನು ಬೆಳೆಸಿದರು : ಕೆ.ಎಸ್​ ಈಶ್ವರಪ್ಪ

ಯಾದಗಿರಿ: ಕೊಡಗಿನ ಮೇಲೆ ಪೆಟ್ರೋಲ್ ಬಾಂಬ್ ಹಾಕಿ ಹಿಂದೂಗಳ ನರಮೇಧ ಮಾಡುವ ಆಡಿಯೋ ಪ್ರಕರಣದ ವಿಚಾರವಾಗಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ಮಾಡಿದ್ದಾರೆ.

ಇನ್ನು, ರಾಷ್ಟ್ರದ್ರೋಹಿಗಳನ್ನು ಬೆಳಸಿದವರು ಯಾರು..? ಸಿದ್ದರಾಮಯ್ಯನವರ ಕಾಂಗ್ರೆಸ್​ ಸರ್ಕಾರ ಇದ್ದಾಗ ಗೋವುಗಳನ್ನು ಕಳ್ಳತನ ಮಾಡಿದರು. ಗೋವುಗಳನ್ನು ಕಳ್ಳತನ ಮಾಡುವವರನ್ನ ಹಿಂದು ಯುವಕರು ಹಿಡಿದರು. ಅಂತಹ ಹಿಂದು ಯುವಕರ ಕಗ್ಗೊಲೆಯಾಯಿತು. ಗೋವು ಕರುವಿನ ಮಾಂಸ ಬಹಳ ಚೆನ್ನಾಗಿರುತ್ತೆ ಅಂತ ಅದನ್ನು ಕಳ್ಳತನ ಮಾಡಿದರು. ಕಳ್ಳತನ ಮಾಡಿದವದರನ್ನ ಹಿಡಿದ ಯುವಕರನ್ನು ಮುಸಲ್ಮಾನರು ಕೊಲೆ ಮಾಡಿದರು. ಮುಸಲ್ಮಾನ ಗುಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕಿತ್ತು ಎಂದರು.

ಅದಲ್ಲದೇ, ಸಿದ್ದರಾಮಯ್ಯನವರು PFI, SDPI ಯನ್ನು ಬೆಳೆಸಿದರು. ಸಿದ್ದರಾಮಯ್ಯ ಮುಸಲ್ಮಾನರ ವೋಟಿಗಾಗಿ ರಾಷ್ಟ್ರಭಕ್ತರನ್ನ ಜೈಲಿಗೆ ಕಳುಹಿಸಿದರು, ರಾಷ್ಟ್ರದ್ರೋಹಿಗಳನ್ನ ಬಿಡುಗಡೆ ಮಾಡಿದರು. ಇದಕ್ಕೆ ಬಾಂಬ್ ತಯಾರಿಕೆ, ಭಯೋತ್ಪಾದನೆ ಚಟುವಟಿಕೆ, ಹಿಜಾಬ್ ಗಲಾಟೆ ಕಾರಣ. ಮುಸಲ್ಮಾನ ರಾಷ್ಟ್ರದಲ್ಲಿ ಹೆಣ್ಣುಮಕ್ಕಳು ನಾವು ಹಿಜಾಬ್ ಹಾಕಲ್ಲ ಅಂತಿದ್ದಾರೆ. ಇಂತಹ ರಾಷ್ಟ್ರದ್ರೋಹಿಗಳನ್ನು ಮಟ್ಟ ಹಾಕೋದು ಮೋದಿಗೆ ಗೊತ್ತಿದೆ ಎಂದು ಶಹಾಪುರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಇನ್ನು, ಮಾಜಿ ಸಿಎಂ ಬಿ.ಎಸ್.ವೈ ವಿರುದ್ಧ ಯತ್ನಾಳ್ ವಾಗ್ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯತ್ನಾಳ್ ಹಿಂದುತ್ವವಾದಿ ಅದರಲ್ಲೇನು ಅನುಮಾನ ಇಲ್ಲ. ಅವರು ಬಾಯಿ ಬಿಟ್ರೆ ಹಿಂದುತ್ವದ ಬಗ್ಗೆ ಮಾತಾಡ್ತಾರೆ. ಆದ್ರೆ ಅವರ ಮಾತಿಗೆ ತುಂಬಾ ಬೆಲೆ ಕೊಡಬೇಡಿ ಅಂತ ರಾಷ್ಟ ನಾಯಕರು ಹೇಳಿದ್ದಾರೆ. ಹಾಗಾಗಿ ಅವರ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳಬಾರದು ಎಂದರು.

RELATED ARTICLES

Related Articles

TRENDING ARTICLES