Thursday, December 19, 2024

‘ಹೆಡ್ ಬುಷ್’ ಟ್ರೇಲರ್ ರಿಲೀಸ್​; ಡಾನ್​ ಜಯರಾಜ್ ಆಗಿ ಎಂಟ್ರಿ ಕೊಟ್ಟ ಡಾಲಿ.!

ಬೆಂಗಳೂರು: ಪತ್ರಕರ್ತ ಅಗ್ನಿ ಶ್ರೀಧರ್ ಕಥಾ ಹಂದರದ, ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಹೆಡ್ ಬುಷ್ ಚಿತ್ರದ ಟ್ರೇಲರ್ ಇಂದು ಬಿಡುಗಡೆ ಆಗಿದೆ.

ರಿಲೀಸ್​ ಆದ ಟ್ರೇಲರ್​ನಲ್ಲಿ ನಟ ಧನಂಜಯ್​ ಅವರು ಬೆಂಗಳೂರಿನ ಭೂಗತ ಲೋಕದ ಡಾನ್ ಆಗಿದ್ದ ಜಯರಾಜ್ ಪಾತ್ರವನ್ನ ತುಂಬಿದ್ದಾರೆ. ರಿಲೀಸ್ ಆಗಿರುವ ಟ್ರೇಲರ್​​ನಲ್ಲಿ ಡಾಲಿ ಪಕ್ಕಾ ರೌಡಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಜತೆಗೆ ಲೂಸ್​ ಮಾದ ಯೋಗಿ ಕೂಡ ರೌಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಡಾಲಿ ಪಿಕ್ಚರ್ಸ್ ಮತ್ತು ಸೋಮಣ್ಣ ಟಾಕೀಸ್ ಜಂಟಿಯಾಗಿ ಹೆಡ್​ ಬುಷ್​ ಸಿನಿಮಾವನ್ನ ನಿರ್ಮಾಣ ಮಾಡಿದೆ. ಅಗ್ನಿ ಶ್ರೀಧರ್ ಕಥೆ ಆಧಾರಿತವಾದ ದಾದಾಗಿರಿಯ ದಿನಗಳು ಪುಸ್ತಕವನ್ನ ಆಧರಿಸಿ ಈ ಚಿತ್ರವಿದೆ.

ಕ್ರೇಜಿಸ್ಟಾರ್‌ ರವಿಚಂದ್ರನ್‌, ಲೂಸ್‌ಮಾದ ಯೋಗಿ, ವಸಿಷ್ಠ ಸಿಂಹ, ದೇವರಾಜ್‌, ಶೃತಿ ಹರಿಹರನ್‌, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ.

RELATED ARTICLES

Related Articles

TRENDING ARTICLES