Saturday, May 18, 2024

ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ ಹೆಚ್‌ ಡಿ ಕುಮಾರಸ್ವಾಮಿ.!

ರಾಮನಗರ; 2023 ರಲ್ಲಿ ತಂದೆ ತಾಯಿ, ದೇವರ ಆಶೀರ್ವಾದದಿಂದ‌ ನೂರಕ್ಕೆನೂರು ಜೆಡಿಎಸ್​ ಪಕ್ಷ ಸರ್ಕಾರ ರಚನೆ ಮಾಡುತ್ತದೆ ಎಂದು ಕನಕಪುರದಲ್ಲಿ ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಅವರು ಹೇಳಿದರು.

ಕನಕಪುರದಲ್ಲಿ ಮಾತನಾಡಿದ ಹೆಚ್​​ಡಿಕೆ, ಕಳೆದ ನಾಲ್ಕೈದು ವರ್ಷಗಳಿಂದ ರಾಜಕೀಯದಲ್ಲಿ ಜೆಡಿಎಸ್​ ಪಕ್ಷದಲ್ಲಿ ವ್ಯತ್ಯಾಸವಾಗಿದೆ. ನನ್ನ ಕಾರ್ಯಕರ್ತರು ಸಾಕಷ್ಟು ನೋವು ತಿಂದಿದ್ದೀರಾ, ಅದೆಲ್ಲಾ ಇದ್ರೂ ಇಂದು ಉತ್ಸಾಹದಿಂದ‌ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ನಾವೆಲ್ಲಾ ಬದುಕಿದ್ದೇವೆ ಎಂದು ತೋರಿಸಿಕೊಟ್ಟಿದ್ದೀರಿ ಎಂದು ಅಲ್ಲಿ ನೆರೆದಿದ್ದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮುಂಬರುವ ಚುನಾವಣೆಯಲ್ಲಿ ನಮ್ಮನ್ನ‌ ಉಳಿಸಿಕೊಳ್ತೀರೋ‌ ಇಲ್ಲವೋ ಎನ್ನುವ ಪ್ರಶ್ನೆಯೊಂದಿಗೆ ನಿರ್ಧಾರದ ಸಂದೇಶ ನೀಡಲಿಕ್ಕೆ ಇಷ್ಟು ಪ್ರಮಾಣದಲ್ಲಿ ಜನರು ಸೇರಿದ್ದೀರಿ, ಪ್ರಥಮವಾಗಿ‌ ನಿಮ್ಮಲ್ಲಿ ಕ್ಷಮೆ‌ ಕೋರುತ್ತೇನೆ. ನನಗೆ ಇಷ್ಟವಿಲ್ಲದೆಯೂ ಕಳೆದ ಬಾರಿ ರಾಷ್ಟ್ರ ರಾಜಕಾರಣದ ಹಿನ್ನಲೆಯಲ್ಲಿ ಅನಿವಾರ್ಯ ಕಾರಣದಿಂದ ಒಪ್ಪಿಗೆ ಇಲ್ಲದ ಕೆಲಸ ಮಾಡಿದ್ದೀವಿ. ಇದರಿಂದ ರಾಜ್ಯದಲ್ಲೂ ತುಂಬಾ ಸಮಸ್ಯೆ ಆಯಿತು. ಕನಕಪುರದಲ್ಲಿ ನಮ್ಮನ್ನ ನಂಬಿದ್ದ ಕಾರ್ಯಕರ್ತರು ಅನಾಥರಾಗುವಂತಾಯಿತು. ಅದಕ್ಕೆ ಕ್ಷಮೆ ಕೋರುತ್ತೇನೆ ಎಂದರು.

ಮುಂದಿನ ದಿನಗಳಲ್ಲಿ ನಮ್ಮ ಕಾರ್ಯಕರ್ತರಿಗೆ ಆದ ಅನ್ಯಾಯದ ಋಣ ತೀರಿಸುತ್ತೇನೆ. ನನ್ನ ಮೇಲೆ ನಂಬಿಕೆ ಇಡಿ. ನಮ್ಮ‌ ತಂದೆಯನ್ನ ರಾಜಕೀಯವಾಗಿ ಕಾಪಾಡೀದ್ದೀರಿ. ಅವರನ್ನ ನಂಬಿ ಹಾಳಾಗಿದ್ದೇವೆ ಎನ್ನುವ ಭಾವನೆ ನಿಮ್ಮ‌ ಕುಟುಂಬದಲ್ಲಿ‌ ಬರದಂತೆ ಇರದಿರಲಿ. ನಿಮ್ಮ ಮನೆಯ ಮಗನಾಗಿ ಋಣ ತೀರಿಸುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಿಶ್ವಾಸದ ನುಡಿಗಳನ್ನಾಡಿದರು.

RELATED ARTICLES

Related Articles

TRENDING ARTICLES