Sunday, December 22, 2024

ಪುಷ್ಪ, ರಾಕಿ ರೀತಿ ಜಯರಾಜ್ ಕೂಡ ಹೀರೋ ಎಂದ ಡಾಲಿ

ಹೆಡ್​ಬುಷ್​​. ಒಂದಾನು ಕಾಲದಲ್ಲಿ ಭೂಗತ ಲೋಕವನ್ನು ಗಢ ಗಢ ನಡುಗಿಸಿದ್ದ ಅಂಡರ್​ವರ್ಲ್ಡ್​​​ ಡಾನ್​​ ಜಯರಾಯ್​​ ಲೈಫ್​ಸ್ಟೋರಿ. ನಟ ಭಯಂಕರ ಡಾಲಿ ರೌದ್ರಾವತಾರ ನೋಡೋಕೆ ಫ್ಯಾನ್ಸ್​ ಕೂಡ ಎಕ್ಸೈಟ್​ ಆಗಿದ್ದಾರೆ. ನೆಗಟಿವ್​ ರೋಲ್​​ನಲ್ಲಿ ಡಾಲಿ ಅಂಡ್​​​​​ ಟೀಮ್​​ ರೌಡಿಗಳಾಗಿ ಮಿಂಚಲಿದ್ದಾರೆ. ಇದಕ್ಕೂ ಮುನ್ನ ಡಾನ್​ ಜಯರಾಜ್​​​​​​​​​​​ನ ಪುಷ್ಪ, ರಾಕಿ ಪಾತ್ರಗಳಿಗೆ ಕಂಪೇರ್​​ ಮಾಡಿ ಅಚ್ಚರಿ ಮೂಡಿಸಿದ್ದಾರೆ ಡಾಲಿ ಧನಂಜಯ. ಯೆಸ್​​.. ಅಷ್ಟಕ್ಕೂ ಡಾಲಿ ಹೇಳಿದ್ದೇನು..? ನೀವೇ ಓದಿ.

  • ಪಾತಕಿ ಡಾನ್​​ ಜಯರಾಜ್​​ ಅಸಲಿ ಮುಖವಾಡ ಬಯಲು..!

ಸ್ಯಾಂಡಲ್​ವುಡ್​ನಲ್ಲಿ ಭಾರಿ ಕುತೂಹಲ ಕೆರಳಿಸಿರುವ ಸಿನಿಮಾ ಹೆಡ್​ಬುಷ್​​​. ಆರಂಭದಲ್ಲಿ ವಿವಾದಗಳಿಂದ್ಲೇ ಗಮನ ಸೆಳೆದ ಹೆಡ್​ಬುಷ್​​​​ ರಿಲೀಸ್​​ಗೆ ತುದಿಗಾಲಲ್ಲಿ ನಿಂತಿದೆ. ಆ ದಿನಗಳು ಚಿತ್ರದಲ್ಲಿ ತೋರಿಸಲಾಗಿದ್ದ ಭೂಗತ ಜಗತ್ತಿನ ತೆರೆಯಲಾಗ ಪುಟಗಳು ಈ ಚಿತ್ರದಲ್ಲಿವೆಯಂತೆ. ಡಾನ್​ ಜಯರಾಜ್​​​ ಲೈಫ್​ಸ್ಟೈಲ್​​​​, ಬೆಚ್ಚಿ ಬೆವರಿಳಿಸಿದ ಪಾತಕಿಯ ಇನ್ನೊಂದು ಮುಖವನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

ರೌಡಿಗಳು ಅಂದ್ರೆ ಅರೆಕ್ಷಣ ಎಲ್ಲರಿಗೂ ಎದೆಯೊಳಗೆ ಆತಂಕ, ಭಯ ಶುರುವಾಗುತ್ತೆ. ಅವರ ಜೀವನ ಶೈಲಿ, ಪ್ರತಿನಿತ್ಯ ಶತ್ರುಗಳ ಜತೆಗೆ ಸಾವಿನ ಹೋರಾಟ, ಪೊಲೀಸರ ಗುಂಡಿನ ಸದ್ದೆ ದಿನಚರಿಯಾಗಿರುತ್ತೆ. ಈ ಸಾಲಿನಲ್ಲಿ ಡಾನ್​ ಜಯರಾಜ್​ ಜೀವನದ ರೋಚಕ ಕಹಾನಿಯನ್ನು ಹೆಡ್​ಬುಷ್​ ಸಿನಿಮಾದಲ್ಲಿ ಹೇಳೋಕೆ ನಿರ್ದೇಶಕ ಶೂನ್ಯ ಹೊರಟಿದ್ದಾರೆ.

ಹೆಡ್​ಬುಷ್​ ಟೀಮ್​ನಲ್ಲಿ ಲೂಸ್​ ಮಾದ ಯೋಗಿ, ರಘು ಮುಖರ್ಜಿ ಕೂಡ ಇದ್ದು ರೌಡಿಗಳ ರಣರೋಚಕ ಕಾಳಗ ಡಬಲ್​ ಇರಲಿದೆ. ಜತೆಗೆ ಸಿನಿಮಾದ ಕಥೆ ಬಗ್ಗೆ ಪವರ್​ ಟಿವಿ ಜತೆ ಮಾತನಾಡಿದ ಡಾಲಿ ಪುಷ್ಪ ಅಲ್ಲು ಆ್ಯಂಟಿ ಕ್ಯಾರೆಕ್ಟರ್​​​​, ಕೆಜಿಎಫ್​​ನ ರಾಕಿ ಕ್ಯಾರೆಕ್ಟರ್​​​​​ನ ಜಯರಾಜ್​ಗೆ ಹೋಲಿಸಿದ್ದಾರೆ. ಈ ಸಿನಿಮಾದ ನೆಗೆಟಿವ್​ ರೋಲ್​​ನ ಪ್ಲೆ ಮಾಡ್ತಿರೋ ಜಯರಾಜ್​​​​​ ಶೇಡ್​ ಕೂಡ ಪ್ರೇಕ್ಷಕರಿಗೆ ಇಷ್ಟವಾಗಬಹುದು ಅನ್ನೋ ಸಿಗ್ನಲ್​ ಕೊಟ್ಟಿದ್ದಾರೆ.

ಈಗಾಗ್ಲೆ ಹೆಡ್​ಬುಷ್​ ಚಿತ್ರದ ಎಲ್ಲಾ ರೆಟ್ರೋ ಫಸ್ಟ್​ ಲುಕ್​​​​​​​ ಸಿನಿರಸಿಕರ ಗಮನ ಸೆಳೆದಿದೆ. ಅಗ್ನಿ ಶ್ರೀಧರ್ ಚಿತ್ರಕಥೆಯ ಮೇಲೆ ಜಯರಾಜ್​ ಜೀವನ ಅನಾವರಣವಾಗಲಿದೆ. ಕಾಸ್ಟ್ಯೂಮ್ಸ್​ನಿಂದ ಹಿಡಿದು ಸಿನಿಮಾಟೋಗ್ರಫಿಗೂ ಕೂಡ  ಸಿಕ್ಕಾಪಟ್ಟೆ ವರ್ಕ್​​ ಮಾಡಲಾಗಿದ್ದು, ರೆಟ್ರೋ ಸ್ಟೈಲ್​​​ ಸ್ಕ್ರೀನ್​ ಮೇಲೆ ಕಮಾಲ್​ ಮಾಡಲಿದೆ. ಡಾಲಿ ಧನಂಜಯ, ರಾಮ್ಕೋ ಸೋಮಣ್ಣ ಸಹಭಾಗಿತ್ವದಲ್ಲಿ ಮೂಡಿ ಬರ್ತಿರೋ ಹೆಡ್​ಬುಷ್​​​ ದರ್ಬಾರ್​ ಹೇಗಿರುತ್ತೋ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ ​​

RELATED ARTICLES

Related Articles

TRENDING ARTICLES