Friday, November 22, 2024

ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಸಹಾಯ ಮಾಡುತ್ತಿದೆ : ಸಿಎಂ ಬೊಮ್ಮಾಯಿ

ಬೆಂಗಳೂರು : ಒಳನಾಡಿನಲ್ಲಿ ಮೀನುಗಾರಿಕೆ ಉತ್ಪನ್ನಗಳನ್ನು ಹೆಚ್ಚಿಸಿದರೆ ತಾಜಾ ಆಹಾರದಂತೆ ಒದಗಿಸಬಹುದು ಎಂದು ಒಳನಾಡು ಮೀನುಗಾರಿಕೆ ಸಮಾವೇಶದಲ್ಲಿ ಸಿಎಂ ಬೊಮ್ಮಾಯಿ ಹೇಳಿದರು.

ಮೀನು ಕೃಷಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಈ ಕಾರ್ಯಾಗಾರ ಮಾಡಿದ್ದೇವೆ. ಕಾರ್ಯಾಗಾರದಲ್ಲಿ ಒಟ್ಟು ೫ ಗೋಷ್ಟಿಗಳಿವೆ. ಮೀನುಗಾರಿಕೆ ಉತ್ಪನ್ನ, ಮೀನುಗಾರರ ಆದಾಯ ಹೆಚ್ಚಳಕ್ಕೆ ಕ್ರಮಗಳನ್ನು ಸಿಎಂ ತೆಗೆದುಕೊಂಡಿದ್ದಾರೆ . ಮೀನುಗಾರರ ಮಕ್ಕಳ ವಿದ್ಯಾಭ್ಯಾಸಕ್ಕೆ ಸರ್ಕಾರ ಸಹಾಯ ಮಾಡುತ್ತಿದೆ. ಮೀನುಗಾರಿಕೆ ಉತ್ಪನ್ನಗಳಿಂದ ಆದಾಯ ಹೆಚ್ಚಾಗಬೇಕು ಎಂದರು.

ಇನ್ನು, ಶತಮಾನಗಳಿಂದ ಮೀನು ಮನುಷ್ಯನ ಆಹಾರವಾಗಿದೆ. ಮೀನು ಸಸ್ಯಾಹಾರಿ, ಆದರೆ ಮೀನು ತಿನ್ನುವ ಮನುಷ್ಯ ಮಾಂಸಾಹಾರಿ. ಆದರೆ ಮೀನು ಸಸ್ಯಹಾರಿ ಆಗಿರೋದ್ರಿಂದ ಕೆಲವು ದೇಶಗಳಲ್ಲಿ ಮೀನು ಸಸ್ಯಾಹಾರಿ ಅಂತಾರೆ. ಒಳನಾಡು ಮೀನಯಗಾರಿಗೆ ಕೂಡ ಮಹತ್ವದ್ದಾಗಿದೆ. ಒಳನಾಡಿನಲ್ಲಿ ಮೀನುಗಾರಿಕೆ ಉತ್ಪನ್ನಗಳನ್ನು ಹೆಚ್ಚಿಸಿದರೆ ತಾಜಾ ಆಹಾರದಂತೆ ಒದಗಿಸಬಹುದು. ಸಮುದ್ರದ ಮೀನಿಗೂ ಒಳನಾಡಿನಲ್ಲಿ ಬೆಳೆಯುವ ಮೀನಿಗೂ ವ್ಯತ್ಯಾಸವಿದೆ. ಆದರೆ ಒಳನಾಡು ಮೀನುಗಾರಿಕೆಯನ್ನು ನಾವು ಬೆಳೆಸಬೇಕಿದೆ. ಸಮುದ್ರದ ಮೀನುಗಾರಿಕೆ ಹೆಚ್ಚಿಸಲು ನಾವು ಉತ್ತೇಜನ ಕೊಡುತ್ತಿದ್ದೇವೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES