ಕಾಡು ತುಂಬಾ ಸುಂದರವಾಗಿದೆ. ಹಸಿರು ಬೆಟ್ಟಗಳು, ಹಕ್ಕಿಗಳ ಚಿಲಿಪಿಲಿ, ಪ್ರಾಣಿಗಳ ಸ್ವಚ್ಚಂದದ ಓಡಾಟ ಇದೆಲ್ಲ ನೊಡುಗರ ಮನಸೋರೆಗೊಳಿಸುತ್ತದೆ. ಇದೆಲ್ಲ ಒಂದು ಕಡೆ ಆದರೆ ಇನ್ನೊಂದು ಕಡೆ.. ಕಾಡು ಶಾಂತಿಯುತವಾಗಿಲ್ಲ. ಅಲ್ಲಿ ವಾಸಿಸುವ ಪ್ರಾಣಿಗಳ ನಡುವೆ ಉಳಿವಿಗಾಗಿ ನಿರಂತರ ಹೋರಾಟವಿದೆ.
ಒಂದು ಜೀವಿ ಬದುಕಬೇಕಾದರೆ ಇನ್ನೊಂದು ಜೀವಿ ಸಾಯಬೇಕು. ಮೊಸಳೆ ಮತ್ತು ಚೀತಾ
ಎರಡೂ ಅಪಾಯಕಾರಿ. ಆದರೆ ಎರಡು ಪ್ರಾಣಿಗಳು ಏಕಕಾಲದಲ್ಲಿ ಘರ್ಷಣೆ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂಬುದಕ್ಕೆ ಸಾಕ್ಷಿ ಇಲ್ಲಿದೆ. ಮೊಸಳೆಯು ನದಿಯ ದಡದಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಅದೇ ಸಮಯಕ್ಕೆ ಚಿರತೆಯೊಂದು ಅಲ್ಲಿಗೆ ಬರುತ್ತದೆ. ಇದು ಮೊಸಳೆಯ ಮೇಲೆ ಘರ್ಜಿಸುವ ಬದಲು ದಾಳಿ ಮಾಡುತ್ತದೆ. ಅನಿರೀಕ್ಷಿತ ಘಟನೆಯಿಂದ ಮೊಸಳೆ ಬೆಚ್ಚಿಬೀಳುತ್ತದೆ. ಮೊಸಳೆ ಜೀವ ಉಳಿಸಿಕೊಳ್ಳಲು ನೀರಿಗೆ ಹೋಗುತ್ತದೆ. ಆದರೆ ಚಿರತೆ ಬಿಗಿಯಾಗಿ ಹಿಡಿದು ಬೇಟೆಯಾಡಿದೆ.