Wednesday, January 22, 2025

ಟಿ-20 ವಿಶ್ವಕಪ್​; ಬೌಂಡರಿ ಲೈನ್​ ದಾಟುವಾಗ ಎಡವಿ ಬಿದ್ದ ಅರಬ್ ಆಟಗಾರ

ಆಸ್ಟೇಲಿಯಾ: ಟಿ-20 ವಿಶ್ವಕಪ್‌ಗೆ ಇಂದಿನಿಂದ ಚಾಲನೆ ಸಿಕ್ಕಿದ್ದು, ವಿಶ್ವಕಪ್​ನ ಅರ್ಹತಾ ಪಂದ್ಯಾವಳಿಯ ಎರಡನೇ ಪಂದ್ಯದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ವಿರುದ್ಧ ನೆದರ್ಲ್ಯಾಂಡ್ಸ್ ತಂಡ 3 ವಿಕೆಟ್​ಗಳಿಂದ ಗೆಲುವು ಸಾಧಿಸಿದೆ.

ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 111 ರನ್​ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನೆದರ್ಲ್ಯಾಂಡ್ಸ್ ತಂಡ 19.5 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 112 ರನ್​ ಸೇರಿಸಿತು. ಈ ಮೂಲಕ ನೆದರ್ಲ್ಯಾಂಡ್ಸ್ ತಂಡ 3 ವಿಕೆಟ್​ಗಳಿಂದ ಜಯಶಾಲಿಯಾಯಿತು.

ಈ ಮಧ್ಯ ಪಂದ್ಯದ ಒಂದು ವಿಡಿಯೋ ವೈರಲ್ ಆಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ ಆಟಗಾರ ಔಟ್​ ಆದ ನಂತರ ಉಲ್ಲಾಸಕರವಾಗ ನಡೆದುಕೊಂಡು ಹೋಗುವಾಗ ಬೌಂಡರಿ ಲೈನ್​ ದಾಟುವಾಗ ಬೀಳುವ ವಿಡಿಯೋ ವೈರಲ್ ಆಗಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ತಂಡದ ಆಟಗಾರ ಅಯಾನ್ ಅಫ್ಜಲ್ ಖಾನ್ ಅವರು ನೆದರ್​ಲ್ಯಾಂಡ್​ ವಿರುದ್ಧ 7 ಏಳು ಎಸೆತಗಳಲ್ಲಿ ಕೇವಲ 5 ರನ್ ಗಳಿಸುತ್ತಾರೆ. ಈ ವೇಳೆ ಮೈದಾನದಿಂದ ಹೊರನಡೆಯುವಾಗ ಬೌಂಡರಿ ಲೈನ್​ ಮೇಲೆ ಕಾಲಿಟುತ್ತಾರೆ. ಆಗ ಅಯಾನ್ ಬೀಳುವುದನ್ನ ಈ ವಿಡಿಯೋದಲ್ಲಿ ಕಾಣಬಹುದು.

RELATED ARTICLES

Related Articles

TRENDING ARTICLES