Wednesday, January 22, 2025

ಮೂರು ಕರುಗಳಿಗೆ ಜನ್ಮ‌ ನೀಡಿದ ಸೀಮೆ ಹಸು.!

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿ ಜಕ್ಕನಹಳ್ಳಿ ಗ್ರಾಮದಲ್ಲಿ ಹಸುವೊಂದು ಮೂರು ಕರುಗಳಿಗೆ ಜನ್ಮ‌ ನೀಡಿದ ಅಪರೂಪ ಘಟನೆ ನಡೆದಿದೆ.

ಜಕ್ಕನಹಳ್ಳಿ ಗ್ರಾಮದ ಅಂಗಡಿ ಶೇಖರ್ ಎಂಬುವವರು ಸಾಕುತ್ತಿದ್ದ ಸೀಮೆ ಹಸುವೊಂದು ನಿನ್ನೆ(ಶನಿವಾರ) ರಾತ್ರಿ ಎರಡು ಗಂಡು ಮತ್ತು ಒಂದು ಹೆಣ್ಣು ಕರುವಿಗೆ ಜನ್ಮ‌ ನೀಡಿದ್ದು, ಇದೊಂದು ವಿರಳ ಪ್ರಸವ ವಾಗಿದ್ದು ಸಾರ್ವಜನಿಕರ ಗಮನ ಸೆಳೆದಿದೆ.

ಆದರೆ, ದುರಾದೃಷ್ಟವಶಾತ್ ಮೂರರ ಪೈಕಿ ಎರಡು ಗಂಡು ಕರುಗಳು ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಸಾವನ್ನಪ್ಪಿದ್ದು, ಹೆಣ್ಣು ಕರು ಆರೋಗ್ಯಕರವಾಗಿದೆ. ಹಸುವನ್ನು ವೀಕ್ಷಿಸಲು ನೂರಾರು ಸಾರ್ವಜನಿಕರು ಧಾವಿಸಿದ್ದಾರೆ.

RELATED ARTICLES

Related Articles

TRENDING ARTICLES