Wednesday, January 22, 2025

ಹಾಲು-ಜೇನಿನಂತಿದ್ದ ಪ್ರೀತಿಗೆ ಎಳ್ಳು, ನೀರು ಬಿಟ್ಟ ಅಪ್ಪ

ವಿಜಯಪುರ : ಪ್ರೇಮಿಗಳ ಪ್ರಣಯದಾಟಕ್ಕೆ ಯುವತಿಯ ತಂದೆ ಕೆಂಡಾಮಂಡಲವಾಗಿ ಹತ್ಯೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದೆ.

ಯುವಕನನ್ನು ಮತ್ತೆ ಭೇಟಿ ಮಾಡದಂತೆ ತಾಕೀತು ಮಾಡಿದ ಯುವತಿ ತಂದೆ, ಯುವಕನಿಗೆ ಕರೆ ಯುವತಿ ಮಾಡಿದ್ದಾಳೆ. ಸೆಪ್ಟೆಂಬರ್ 22ರ ರಾತ್ರಿ ಕರೆ ಮಾಡಿದ್ದ ಹುಡುಗಿ, ಮಲ್ಲುನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಹಾಕಿಕೊಂಡಿದ್ರು. ಇಬ್ಬರಿಗೂ ಬುದ್ದಿ ಹೇಳಿದ್ದ ತಂದೆಯ ಮಾತು ಕೇಳದೆ ಆತುರದಲ್ಲಿ ವಿಷ ಕುಡಿದ ಮಗಳು, ತಂದೆಯ ಮುಂದೆಯೇ ವಿಷ ಸೇವಿಸಿ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಇನ್ನು, ಮಗಳ ಸಾವಿನಿಂದ ಮತ್ತಷ್ಟು ಕೆರಳಿದ ತಂದೆ ಪ್ರೇಮಿ ಮಲ್ಲುಗೆ ಕೈಕಾಲು ಕಟ್ಟಿ ಅದೇ ವಿಷ ಕುಡಿಸಿ ಕೊಲೆ ಮಾಡಿದ್ದಾರೆ. ಪ್ರೇಮಿಗಳ ಶವವನ್ನು ಪ್ರತ್ಯೇಕವಾಗಿ ಚೀಲದಲ್ಲಿ ಹಾಕಿ ಕೃಷ್ಣಾ ನದಿಗೆ ಎಸೆದ ಕಿರಾತಕ, ಯುವಕ ಮಲ್ಲುವಿನ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು, ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ಪೊಲೀಸರಿಂದ ತನಿಖೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಗುರಪ್ಪ, ಅಳಿಯ ಅಜಿತ್ ಬಂಧಿಸಿದ್ದು, ಯುವತಿಯ ಶವಕ್ಕಾಗಿ ಮುಂದುವರೆದ ಹುಡುಕಾಟ ನಡೆಸುತ್ತಿದ್ದಾರೆ.

RELATED ARTICLES

Related Articles

TRENDING ARTICLES