Monday, November 18, 2024

ಡಾ. ಶಿವಣ್ಣನ ಸಿಂಪ್ಲಿಸಿಟಿಗೆ ಡೈಹಾರ್ಡ್ ಫ್ಯಾನ್ ದಿಲ್ಖುಷ್

ನಟಸಾರ್ವಭೌಮ ಡಾ. ರಾಜ್​ಕುಮಾರ್​ರನ್ನ ಇಷ್ಟ ಪಡದವರೇ ಇಲ್ಲ. ನಟನಾಗಷ್ಟೇ ಅಲ್ಲದೆ, ವ್ಯಕ್ತಿತ್ವದಲ್ಲೂ ಶಕ್ತಿಯಾಗಿ ಬೆಳೆದ ಅಣ್ಣಾವ್ರಂತೆ, ಅವ್ರ ರಾಜಕುಮಾರರು ಕೂಡ ಅದೇ ಹಾದಿಯಲ್ಲಿ ಸಾಗಿದ್ರು. ಅಪ್ಪು ಅವ್ರ ಆದರ್ಶಗಳು ವಿಶ್ವಕ್ಕೆ ಸ್ಫೂರ್ತಿ. ಕರುನಾಡ ಚಕ್ರವರ್ತಿ ಶಿವಣ್ಣ ಕೂಡ ಇದ್ರಿಂದ ಹೊರತಾಗಿಲ್ಲ. ಕಾಲಿಲ್ಲವಾದ್ರೂ ನೆಚ್ಚಿನ ನಾಯಕನಟನನ್ನ ಮೀಟ್ ಮಾಡೋ ಮನಸ್ಸು ಮಾಡಿದ್ದಾರೆ ಅಭಿಮಾನಿ. ಅದ್ಯಾರು..? ಅದಕ್ಕೆ ಶಿವಣ್ಣ ಸ್ಪಂದಿಸಿದ್ಹೇಗೆ ಅನ್ನೋದಕ್ಕೆ ಈ ಸ್ಪೆಷಲ್ ಎಕ್ಸ್​ಕ್ಲೂಸಿವ್ ಸ್ಟೋರಿನ ಒಮ್ಮೆ ನೀವೇ ಓದಿ.

ಶಿರಾಳಕೊಪ್ಪದಿಂದ ಬಂದ ಕಾಲಿಲ್ಲದ ರೇಣುಗೆ ಶಿವಣ್ಣ ಸಾಥ್

ಗಾಯಕಿ ಆಗೋ ಕನಸು ಕಂಡಿರೋ ರೇಣು SSLC ವಿದ್ಯಾರ್ಥಿ

ಯೋಗಿಯಿಂದ ಯೋಗ.. ಕಾದಿದ್ದಕ್ಕೆ ಸಿಕ್ತು ಶಿವಣ್ಣ ಆಶೀರ್ವಾದ

ಬಂಗಾರದ ಮನುಷ್ಯನಂತೆ ಸನ್ ಆಫ್ ಬಂಗಾರದ ಮನುಷ್ಯ ಕೂಡ ಸರಳತೆಯ ಸಾಮ್ರಾಟ. ಮೌಲ್ಯಗಳನ್ನ ಸಾರೋ ಸರದಾರ. ತೆರೆ ಮೇಲಷ್ಟೇ ಅಲ್ಲದೆ, ತೆರೆ ಹಿಂದೆಯೂ ಸಹ ಕರುನಾಡ ಚಕ್ರವರ್ತಿ ಡಾ. ಶಿವರಾಜ್​ಕುಮಾರ್ ಹೀರೋನೇ. ಹೌದು.. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ರೂ, ಪ್ರತೀ ದಿನ ಶೂಟಿಂಗ್, ಡಬ್ಬಿಂಗ್ ಕಾರ್ಯಗಳಲ್ಲಿ ತೊಡಗಿಸಿಕೊಂಡರೂ ಸಹ, ಅಭಿಮಾನಿಗಳಿಗಾಗಿ ಒಂದಷ್ಟು ಸಮಯ ಮೀಸಲಿಡ್ತಾರೆ ಶಿವಣ್ಣ.

ಶೂಟಿಂಗ್ ಸೆಟ್​ನಲ್ಲೇ ಅವ್ರನ್ನ ಕಾಣಲು ನೂರಾರು, ಸಾವಿರಾರು ಮಂದಿ ಜಮಾಯಿಸ್ತಾರೆ. ಎಲ್ಲರಿಗೂ ಅವ್ರನ್ನ ನೋಡೋ ಚಾನ್ಸ್ ಸಿಕ್ಕರೂ, ಕೆಲವರಿಗೆ ಮಾತ್ರ ಅವ್ರೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡು, ಕೈ ಕುಲುಕೋ ಸುವರ್ಣಾವಕಾಶ ಸಿಗುತ್ತೆ. ಅಂತಹ ಅಪರೂಪದ ಅವಕಾಶವನ್ನ ಶಿಕಾರಿಪುರದ ಶಿರಾಳಕೊಪ್ಪದಿಂದ ಬಂದ ಈ ಹೆಣ್ಣು ಮಗು ಪಡೆದಿದ್ದು ವಿಶೇಷ.

ಬೆಂಗಳೂರಿನ ಮಿನರ್ವ ಮಿಲ್​ನಲ್ಲಿ ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ ಹಾಗೂ ಶ್ರೀನಿ ಆ್ಯಕ್ಷನ್ ಕಟ್ ಹೇಳ್ತಿರೋ ಘೋಸ್ಟ್ ಚಿತ್ರದ ಶೂಟಿಂಗ್ ಶುಭಾರಂಭವಾಗಿದೆ. ಈ ಚಿತ್ರದ ಶೂಟಿಂಗ್ ವೇಳೆ ಶಿರಾಳಕೊಪ್ಪದಿಂದ ದೊಡ್ಮನೆಯ ಕಟ್ಟಾಭಿಮಾನಿ ಕನ್ನಡ ಯೋಗಿ ಸಹಾಯ ಪಡೆದು, ಶೂಟಿಂಗ್ ಸೆಟ್​ಗೆ ಬಂದ್ರು ರೇಣು ಅನ್ನೋ ಎಸ್​ಎಸ್​ಎಲ್​ಸಿ ವಿದ್ಯಾರ್ಥಿನಿ. ಈಕೆ ನೋಡೋಕೆ ಮುದ್ದಾದ ಪೋರಿಯಾದ್ರೂ, ದೇವರು ಆಕೆಯ ಕಾಲನ್ನ ಕಿತ್ತುಕೊಂಡಿದ್ದಾರೆ. ಫಿಸಿಕಲಿ ಚಾಲೆಂಜ್ ಆಗಿರೋ ಮಗಳು, ತಮ್ಮ ನೆಚ್ಚಿನ ನಾಯಕನಟ ಶಿವಣ್ಣರನ್ನ ನೋಡ್ಬೇಕು ಅನ್ನೋ ಮಹದಾಸೆ ಪೂರೈಸೋಕೆ ಸ್ವತಃ ಅವ್ರ ತಂದೆಯೇ ಆಕೆಯನ್ನ ಹೊತ್ತು ಬಂದಿದ್ದು ಇಂಟರೆಸ್ಟಿಂಗ್.

ಮಧ್ಯಾಹ್ನ ಲಂಚ್ ಬ್ರೇಕ್​ನಲ್ಲೇ ಬಂದ ಇವ್ರನ್ನ, ಶಿವಣ್ಣ ಬಹಳ ಪ್ರೀತಿಯಿಂದ ಮಾತನಾಡಿಸಿದ್ರು. ಗೆಟಪ್​ನಲ್ಲಿ ಇದ್ದ ಕಾರಣ, ಸಂಜೆ ಮೇಕಪ್ ತೆಗೆಯೋವರೆಗೂ ಪಕ್ಕದಲ್ಲೇ ಇದ್ದ ಮಾಲ್​ಗೆ ಹೋಗಿ ಬರಲು ಸೂಚಿಸಿದ್ರು. ನಂತ್ರ ಸಂಜೆ ಕ್ಯಾರವಾನ್​ನಿಂದ ಇಳಿದ ಅವ್ರು ನೂರಾರು ಮಂದಿ ಫ್ಯಾನ್ಸ್, ಹಿತೈಷಿಗಳನ್ನ ಬಿಟ್ಟು, ನೇರವಾಗಿ ರೇಣು ಬಳಿ ತೆರಳಿ, ಆಕೆಯ ಖುಷಿಯನ್ನ ದುಪ್ಪಟ್ಟು ಮಾಡಿದ್ರು. ಅವ್ರೇ ಸೆಲ್ಫಿ ಕ್ಲಿಕ್ಕಿಸಿ, ರೇಣು ಜೊತೆ ಅಲ್ಲಿದ್ದ ಅವ್ರ ಇಡೀ ಕುಟುಂಬದ ಜೊತೆ ಆತ್ಮೀಯವಾಗಿ ಮಾತನಾಡಿದ್ರು.

ಗಾಯಕಿ ಆಗೋ ಕನಸು ಕಂಡಿರೋ ರೇಣು, ಶಿವಣ್ಣನ ಬಹುತೇಕ ಎಲ್ಲಾ ಸಿನಿಮಾಗಳನ್ನ ನೋಡಿದ್ದಾರಂತೆ. ರೀಲ್ಸ್​ನಲ್ಲೂ ಸದ್ದು ಮಾಡ್ತಿರೋ ಈ ಮುದ್ದು ಕಂದಮ್ಮ ಹಾಗೂ ಅವ್ರ ಕುಟುಂಬಸ್ಥರು, ಇಡೀ ದೊಡ್ಮನೆ ನೂರ್ಕಾಲ ಸಂತೋಷದಿಂದಿರಲಿ ಅಂತ ಹಾರೈಸಿದ್ರು.

ಬೈಟ್: ರೇಣು, ಶಿವಣ್ಣನ ಅಭಿಮಾನಿ

ಬೈಟ್: ರೇಣು ತಂದೆ

ಬೈಟ್: ರೇಣು ತಾಯಿ

ಬೈಟ್: ಕನ್ನಡ ಯೋಗಿ, ದೊಡ್ಮನೆ ಅಭಿಮಾನಿ

ಒಟ್ಟಾರೆ ಶಿವಣ್ಣ ಸಿಂಪ್ಲಿಸಿಟಿಗೆ ನಿಬ್ಬೆರಗಾದ ರೇಣು ಫ್ಯಾಮಿಲಿ, ಬಂದಷ್ಟೇ ಖುಷಿಯಲ್ಲಿ ಮನೆಯತ್ತ ತೆರಳಿತು. ಇದು ಬರೀ ನಮ್ಮ ಪವರ್ ಟಿವಿ ಕ್ಯಾಮೆರಾಗೆ ಸೆರೆಸಿಕ್ಕ ಒಂದು ನಿದರ್ಶನ. ಈ ರೀತಿ ಪ್ರತೀ ದಿನ ಸಾಕಷ್ಟು ಕಟ್ಟಾಭಿಮಾನಿಗಳು ಶಿವಣ್ಣನನ್ನ ಕಣ್ತುಂಬಿಕೊಳ್ಳಲು ಬರ್ತಿರ್ತಾರೆ. ಎಲ್ಲವನ್ನೂ ಬಹಳ ಕೂಲ್ ಆಗಿಯೇ ಹ್ಯಾಂಡಲ್ ಮಾಡೋ ದೊಡ್ಮನೆ ರಾಜಕುಮಾರರ ಈ ದೊಡ್ಡ ಮನಸ್ಸಿಗೆ ನಮ್ಮದೊಂದು ಸಲಾಂ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES