Monday, December 23, 2024

ಸಲ್ಮಾನ್ ಖಾನ್ ಜತೆ ಪುಷ್ಪ ಹಾಡಿಗೆ ರಶ್ಮಿಕಾ ಮಂದಣ್ಣ ಸ್ಟೆಪ್

ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್​ಗೆ ಇತ್ತೀಚೆಗೆ ಬಿಟೌನ್​ಗಿಂತ, ಸೌತ್ ಸ್ಟಾರ್​ಗಳ ಗೆಳೆತನದ ಪಟ್ಟಿಯೇ ದೊಡ್ಡದಾಗಿ ಬೆಳೀತಾ ಹೋಗ್ತಿದೆ. ಯೆಸ್.. ಗಾಡ್​ಫಾದರ್ ಚಿರು ಜೊತೆ ಕೈ ಜೋಡಿಸಿದ್ದ ಟೈಗರ್ ಸಲ್ಲು, ಇದೀಗ ನಮ್ಮ ನ್ಯಾಷನಲ್ ಕ್ರಶ್ ರಶ್ಮಿಕಾ ಜೊತೆ ಸಾಮಿ ಸಾಮಿ ಅಂತ ಸೊಂಟ ಬಳುಕಿಸಿದ್ದಾರೆ. ಅದ್ಹೇಗೆ ಎಲ್ಲಿ ಅನ್ನೋದಕ್ಕೆ ಈ ಸ್ಟೋರಿ ನೋಡಿ.

  • ನ್ಯಾಷನಲ್ ಕ್ರಶ್- ಭಾಯಿಜಾನ್ ಡ್ಯಾನ್ಸ್ ಇದೇ ಮೊದಲಲ್ಲ..!
  • ಟೈಗರ್ ಸಲ್ಲು ನೆಕ್ಸ್ಟ್ ಪ್ರಾಜೆಕ್ಟ್​ನಲ್ಲಿ ಕನ್ನಡತಿ ರಶ್ಮಿಕಾ ಅಭಿನಯ..?
  • ಪ್ಯಾನ್ ಇಂಡಿಯಾ ಅಭಿನೇತ್ರಿ ಆಗೇಬಿಟ್ರು ಕಿರಿಕ್ ಬೆಡಗಿ ರಶ್ಮಿಕಾ

ಪುಷ್ಪ ಚಿತ್ರದಿಂದ ಪ್ಯಾನ್ ಇಂಡಿಯಾ ಸಂಚಲನ ಮೂಡಿಸಿದ ನಮ್ಮ ಕನ್ನಡತಿ ರಶ್ಮಿಕಾ ಮಂದಣ್ಣ, ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜೊತೆ ವೇದಿಕೆಯೊಂದರಲ್ಲಿ ಹೆಜ್ಜೆ ಹಾಕಿದ್ದಾರೆ. ಅದೂ ಅವ್ರದ್ದೇ ಬ್ಲಾಕ್ ಬಸ್ಟರ್ ಹಿಟ್ ಪುಷ್ಪ ಚಿತ್ರದ ಸಾಮಿ ಸಾಮಿ ಸಾಂಗ್​ಗೆ ಅನ್ನೋದು ವೆರಿ ವೆರಿ ಇಂಟರೆಸ್ಟಿಂಗ್. ಸದ್ಯ ಅದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಯೆಸ್.. ಬಾಲಿವುಡ್ ಅಂಗಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸೂಪರ್ ಟ್ಯಾಲೆಂಟ್ ರಶ್ಮಿಕಾ ಮಂದಣ್ಣಗೆ ಯೂತ್ ಐಕಾನ್ ಅವಾರ್ಡ್​ ನೀಡಿ ಗೌರವಿಸಲಾಯ್ತು. ಆ ವೇಳೆ ಅಲ್ಲೇ ವೇದಿಕೆಯಲ್ಲಿದ್ದ ಭಾಯಿಜಾನ್ ಸಲ್ಲು, ರಶ್ಮಿಕಾ ಕೈ ಕುಲುಕಿದ್ರು. ಅಷ್ಟೇ ಅಲ್ಲ, ಪುಷ್ಪ ಚಿತ್ರದ ಸಾಮಿ ಸಾಮಿ ಸಾಂಗ್​ಗೆ ಸೊಂಟ ಕೂಡ ಬಳುಕಿಸಿದ್ರು. ಅದೀಗ ಎಲ್ಲೆಲ್ಲೂ ಟಾಕ್ ಆಫ್ ದಿ ಟೌನ್ ಆಗಿದೆ.

ಬಾಲಿವುಡ್​ನಲ್ಲಿ ಶೈನ್ ಆಗ್ತಿರೋ ಈ ಕನ್ನಡತಿ, ಬ್ಯಾಕ್ ಟು ಬ್ಯಾಕ್ ಹಿಂದಿ ಪ್ರಾಜೆಕ್ಸ್ಟ್​ನ ಮಾಡ್ತಿದ್ದಾರೆ. ಮಿಷನ್ ಮಜ್ನು, ಗುಡ್ ಬೈ, ಅನಿಮಲ್ ಹೀಗೆ ಮೂರು ಸಿನಿಮಾಗಳನ್ನ ಮಾಡ್ತಿರೋ ನ್ಯಾಷನಲ್ ಕ್ರಶ್ ಮೇಲೆ ಸಲ್ಲು ಕಣ್ಣು ಬಿದ್ದಿದೆ. ಮೂಲಗಳ ಪ್ರಕಾರ ಸಲ್ಮಾನ್ ಖಾನ್​ ಜೊತೆ ಸದ್ಯದಲ್ಲೇ ಅಫಿಶಿಯಲಿ ಬಣ್ಣ ಹಚ್ತಾರೆ ರಶ್ಮಿಕಾ ಎನ್ನಲಾಗ್ತಿದೆ. ಆದ್ರೆ ಅದ್ಯಾವ ಸಿನಿಮಾ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ.

ಅಂದಹಾಗೆ ಪುಷ್ಪ ಚಿತ್ರದ ಈ ಹಾಡಿಗೆ ಸಲ್ಲು ಮನಸೋತು ರಶ್ಮಿಕಾ ಜೊತೆ ಸ್ಟೆಪ್ ಹಾಕಿದ್ದು ಇದೇ ಮೊದಲಲ್ಲ. ಈ ಹಿಂದೆಯೂ ಒಮ್ಮೆ ಸೇಮ್ ಹಾಡಿಗೆ ಸ್ಟೆಪ್ ಹಾಕಿದ್ರು. ಪುಷ್ಪ ಎರಡನೇ ಚಾಪ್ಟರ್​ ಶೂಟಿಂಗ್ ಶುರುವಾದ್ರೂ ಮೊದಲ ಭಾಗದ ಕ್ರೇಜ್ ಕಿಂಚಿತ್ತೂ ಕಮ್ಮಿ ಆಗಿಲ್ಲ.

ಇನ್ನು ಭಾಯಿಜಾನ್ ಸಲ್ಲು ಕೂಡ ಇತ್ತೀಚೆಗೆ ಬಾಲಿವುಡ್ ಜೊತೆಗಿಂತ ಸೌತ್ ಇಂಡಸ್ಟ್ರಿ ಜೊತೆ ಹೆಚ್ಚು ಕಾಣಿಸಿಕೊಳ್ತಿದ್ದಾರೆ. ಚಿರಂಜೀವಿ ಅವ್ರ ಗಾಡ್​ಫಾದರ್ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಆಗಿ ಕಮಾಲ್ ಮಾಡಿದ್ರು. ಅದಕ್ಕೂ ಮುನ್ನ ಕನ್ನಡದ ಪ್ರಭುದೇವ ಹಾಗೂ ಸುದೀಪ್ ಜೊತೆ ದಬಾಂಗ್-3 ಮಾಡಿದ್ರು. ಇದೀಗ ನಮ್ಮ ರಶ್ಮಿಕಾ ಜೊತೆ ಮಿಂಚ್ತಿದ್ದು, ಇವ್ರ ಕಾಂಬೋದಲ್ಲಿ ಆದಷ್ಟು ಬೇಗ ಸಿನಿಮಾವೊಂದು ಸೆಟ್ಟೇರಲಿ ಅಂತಿದ್ದಾರೆ ಸಿನಿರಸಿಕರು.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES

Related Articles

TRENDING ARTICLES