Monday, December 23, 2024

ಮುಲ್ತಾನ್​ನಲ್ಲಿ 500 ಕೊಳೆತ ಮೃತದೇಹಗಳು ಪತ್ತೆ

ಉಗ್ರರ ತವರು ಪಾಕಿಸ್ತಾನದಲ್ಲಿ 500 ಕ್ಕೂ ಹೆಚ್ಚು ಕೊಳೆತ ಶವಗಳು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪಾಕಿಸ್ತಾನದ ಮುಲ್ತಾನ್​ ನಗರದಲ್ಲಿರುವ ನಿಶ್ತಾರ್ ಮೆಡಿಕಲ್ ಕಾಲೇಜಿನಲ್ಲಿ ಈ ಭಯಾನಕ ದೃಶ್ಯ ಕಂಡು ಬಂದಿದೆ.

ಮೃತದೇಹಗಳಲ್ಲಿ ಹಲವು ಮಹಿಳೆಯರ ಶವಗಳೂ ಸೇರಿದ್ದು, ನಗ್ನ, ಅರೆನಗ್ನ, ಕೊಳೆತ ಸ್ಥಿತಿಯಲ್ಲಿದ್ದವು. ಹಲವು ಡೆಡ್​ ಬಾಡಿಗಳಲ್ಲಿ ಅಂಗಾಂಗಗಳೇ ಮಾಯವಾಗಿದ್ದವು. ಅನೇಕ ಶವಗಳನ್ನು ಹದ್ದುಗಳು ಕುಕ್ಕಿ ತಿಂದಿದ್ದವು. ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಸೂಚನೆ ಮೇರೆಗೆ ಸಿಎಂ ಸಲಹೆಗಾರ ತಾಹೀರ್ ಝಹಾನ್ ಗುಜ್ಜಾರ್ ಆಸ್ಪತ್ರೆಗೆ ದಿಢೀರ್ ಭೇಟಿ ಕೊಟ್ಟಿದ್ರು. ಈ ವೇಳೆ ಅಲ್ಲಿದ್ದ ಒಬ್ಬ ವ್ಯಕ್ತಿ ನೀವು ಆಸ್ಪತ್ರೆ ಪರಿಶೀಲಿಸುವುದಾದರೆ ಮೊದಲು ಶವಾಗಾರ ನೋಡಿ ಎಂದಿದ್ದಾನೆ. ಅಲ್ಲಿಗೆ ತೆರಳಿದ ತಾಹೀರ್ ಗೆ ಅಲ್ಲಿನ ಕಾವಲುಗಾರ ಶವಾಗಾರದ ಬಾಗಿಲು ತೆಗೆಯಲು ನಿರಾಕರಿಸಿದ್ದಾನೆ.

ಇದರಿಂದ ಕುಪಿತಗೊಂಡ ತಾಹೀರ್ FIR ದಾಖಲಿಸೋದಾಗಿ ಎಚ್ಚರಿಸಿದಾಗ ಕಾವಲುಗಾರ ಬಾಗಿಲು ತೆಗೆದಿದ್ದಾನೆ. ಆ ಬಳಿಕ ಸಿಎಂ ಸಲಹೆಗಾರರನಿಗೆ ನರಕ ದರ್ಶನವಾಗಿದೆ. ಪಾಪಿ ರಾಷ್ಟ್ರದ ಭಯಾನಕ ದೃಶ್ಯಗಳು ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪಾಕಿಸ್ತಾನದ ಪಂಜಾಬ್ ಸರ್ಕಾರ ತನಿಖೆಗೆ ಆದೇಶಿಸಿದ್ದು, 3 ದಿನಗಳೊಳಗೆ ವರದಿ ನೀಡುವಂತೆ ಆದೇಶಿಸಲಾಗಿದೆ.

RELATED ARTICLES

Related Articles

TRENDING ARTICLES