Wednesday, January 22, 2025

ಶಾಲೆಯಲ್ಲಿ ಯುವತಿ ಸಿಡಿಲಬ್ಬರದ ಬ್ಯಾಟಿಂಗ್​; ವಿಡಿಯೋ ವೈರಲ್​​

ಜಮ್ಮು ಕಾಶ್ಮೀರ: ಲಡಾಖ್‌ನ ಯುವತಿಯೊಬ್ಬಳು ತನ್ನ ಶಾಲೆಯಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ.

ಈ ವಿಡಿಯೋ ಲಡಾಖ್‌ನಲ್ಲಿರುವ ಡಿಎಸ್‌ಇ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿನಿ ಮಕ್ಸೂಮಾ ಎಂದು ಗುರುತಿಸಲಾಗಿದ್ದು, ಶಾಲೆಯಲ್ಲಿ ಇತರೆ ವಿದ್ಯಾರ್ಥಿನಿಯರೊಂದಿಗೆ ಭರ್ಜರಿ ಬ್ಯಾಟಿಂಗ್​ ಮಾಡಿ ಗಮನ ಸೆಳೆದಿದ್ದಾಳೆ.

ಈ ಬಗ್ಗೆ ಮಾತನಾಡಿದ ಬ್ಯಾಟಿಂಗ್ ಮಾಡಿದ ವಿದ್ಯಾರ್ಥಿನಿ, ನನ್ನ ತಂದೆ ಮತ್ತು ಶಾಲೆಯ ಶಿಕ್ಷಕರು ನನ್ನನ್ನು ಕ್ರಿಕೆಟ್ ಆಡಲು ಪ್ರೋತ್ಸಾಹಿಸುತ್ತಾರೆ. ಭಾರತ ಸ್ಪೋಟಕ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿಯಂತೆ ಆಡಲು ಪ್ರಯತ್ನಗಳನ್ನು ಮಾಡುತ್ತೇನೆ. ನನ್ನ ಅಚ್ಚುಮೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ನಾನು ಅವರಂತೆ ಆಗಲು ಬಯಸುತ್ತೇನೆ ವಿದ್ಯಾರ್ಥಿನಿ ಎಂದಿದ್ದಾಳೆ ಎಂದು ಶಾಲಾ ಡಿಎಸ್​ಇ ಶಾಲಾ ಸಂಸ್ಥೆ ಟ್ವೀಟ್ ಮಾಡಿದೆ.

ಶಾಲಾ ಸಂಸ್ಥೆ ಮಾಡಿದ ಟ್ವೀಟ್​ನಲ್ಲಿ ಕೆಲವೇ ಸೆಕೆಂಡ್​ಗಳಲ್ಲಿ ಶಾಲಾ ವಿದ್ಯಾರ್ಥಿನಿ ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಶಾಲೆಯ ಮೈದಾನದಿಂದ ಚೆಂಡನ್ನು ಹೊಡೆದಳು. ಈ ವೇಳೆ ಎಂಎಸ್ ಧೋನಿಯಿಂದ ಪ್ರಸಿದ್ಧಿ ಪಡೆದ ‘ಹೆಲಿಕಾಪ್ಟರ್ ಶಾಟ್’ ಕಲಿಯಲು ಬಯಸುವುದಾಗಿಯೂ ವಿದ್ಯಾರ್ಥಿನಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES