Monday, December 23, 2024

ಹಾಸನಾಂಬೆಯ ದರ್ಶನ ಪಡೆಯಲು ಭಕ್ತಸಾಗರ

ಹಾಸನ : ಹಾಸನಾಂಬೆ ಜಾತ್ರಾ ಮಹೋತ್ಸವದ ಎರಡನೇ ದಿನ ಹಲವು ಗಣ್ಯರು ಹಾಗೂ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದು ಪುನೀತರಾದರು.. ವಿಶೇಷ ದರ್ಶನಕ್ಕೆ 1000 ರೂಪಾಯಿ ಹಾಗೂ 300 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ.‌

ಮಾಜಿ ಸಚಿವ ಹೆಚ್.ಡಿ.‌ ರೇವಣ್ಣ, ಪತ್ನಿ ಭವಾನಿ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ, ಬ್ರಹ್ಮಾಂಡ ಗುರೂಜಿ, ಸಿಎಂ ಕಾನೂನು ಕಾರ್ಯದರ್ಶಿ ಮೋಹನ್ ಲಿಂಬಿಕಾಯಿ ಸೇರಿ ಹಲವು ಗಣ್ಯರು ದರ್ಶನ ಪಡೆದರು. ಮುಜರಾಯಿ, ವಕ್ಪ್ ಸಚಿವೆ ಶಶಿಕಲಾ ಜೊಲ್ಲೆ ಹಾಸನಾಂಬೆ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ನಮ್ಮ ತಂದೆ ತಾಯಿಗೆ ಆರೋಗ್ಯ ಕೊಡಲಿ, 2023 ರಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿ ಅಂತಾ HD ರೇವಣ್ಣ ಪ್ರಾರ್ಥಿಸಿದರು.

ಇನ್ನೊಂದೆಡೆ ಮಂಡ್ಯದ ಅಂಬಿಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಮಲೆ ಮಹದೇಶ್ವರಸ್ವಾಮಿ ಮಹಾಕುಂಭ ಮೇಳ ಮಹೋತ್ಸವವನ್ನು ರಾಜ್ಯಸಭಾ ಸದಸ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಉದ್ಘಾಟನೆ ಮಾಡಿದರು. ಅಕ್ಟೋಬರ್‌ 16ರ ಬೆಳಗ್ಗೆಯವರೆಗೂ ಈ ಮಹೋತ್ಸವ ನೆರವೇರಲಿದೆ. ವಾರಣಾಸಿಯ ಕಾಶಿಯ ಮಾದರಿಯಲ್ಲಿ ಕಾವೇರಿ ನದಿಯ ತ್ರಿವೇಣಿ ಸಂಗಮದಲ್ಲಿ ವಿಶೇಷ ಗಂಗಾರತಿ ಕೂಡ ನೆರವೇರಲಿದೆ.

ಬಾಲಕೃಷ್ಣ ಪವರ್ ಟಿವಿ ಮಂಡ್ಯ

RELATED ARTICLES

Related Articles

TRENDING ARTICLES