Monday, December 23, 2024

ಕೇರಳ ರಾಜ್ಯಪಾಲರ ಫೇಸ್‌-ಬುಕ್‌ ಪೇಜ್​ ಹ್ಯಾಕ್​.!

ತಿರುವನಂತಪುರಂ: ಇತ್ತೀಚಿನ ದಿನಗಳಲ್ಲಿ ಫೇಸ್‌-ಬುಕ್‌ ಹ್ಯಾಕಿಂಗ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್​ ಅವರ ಅಧಿಕೃತ ಫೇಸ್-ಬುಕ್​ ಪೇಜ್​ನ್ನ​ ಖದೀಮರು ಹ್ಯಾಕ್​ ಮಾಡಿರುವ ಘಟನೆ ವರದಿಯಾಗಿವೆ.

ಇಂದು (ಶನಿವಾರ) ಬೆಳಿಗ್ಗೆ ಕೇರಳ ರಾಜ್ಯಪಾಲ ಆರೀಪ್​ ಮೊಹಮ್ಮದ್​ ಖಾನ್ ಅವರ ಪೇಸ್​ ಬುಕ್​ ಹ್ಯಾಕ್​ ಆಗಿದೆ. ಕೇರಳ ರಾಜಭವನದ ಪಿಆರ್​​ಓ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ ಎಂದು ವರದಿ ತಿಳಿಸಿವೆ. ಸದ್ಯ ಈ ಪುಟವನ್ನು ಮರುಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಹ್ಯಾಕರ್‌ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ರಾಜ್ಯಪಾಲರು ಜನರಿಗೆ ಮನವಿ ಮಾಡಿದ್ದಾರೆ.

ಕೇರಳ ಗವರ್ನರ್ ಆರಿಫ್ ಮುಹಮ್ಮದ್ ಖಾನ್ ಅವರ ಫೇಸ್‌ಬುಕ್ ಪುಟದಲ್ಲಿ ಸುಮಾರು 2.50 ಲಕ್ಷ ಜನರ ಫಾಲೋ ಹೊಂದಿದ್ದಾರೆ. ಗವರ್ನರ್ ಆರಿಫ್ ಮುಹಮ್ಮದ್ ಒಟ್ಟು ಐದು ಜನರನ್ನು ಹಿಂಬಾಲಿಸುತ್ತಿದ್ದಾರೆ. ಇದೀಗ ಅವರ ಫೇಸ್ ಬುಕ್ ಪೇಜ್ ಹ್ಯಾಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

RELATED ARTICLES

Related Articles

TRENDING ARTICLES