Sunday, January 12, 2025

ಚಾಂಪಿಯನ್​ಗೆ​​ ಪವರ್ ಟಿವಿ ರೇಟಿಂಗ್: 3/5

ಗೆಳೆಯ ಕಂಡ ಕನಸು ನನಸು ಮಾಡಿದ ಚಾಂಪಿಯನ್​​​​ಗೆ ಸಿನಿಪ್ರೇಕ್ಷಕರು ಭೇಷ್​ ಎಂದಿದ್ದಾರೆ. ಅಥ್ಲೀಟ್​​​ ರೋಲ್​ನಲ್ಲಿ ವಿಭಿನ್ನ ಕಥೆ ಹೇಳಲು ಹೊರಟ ಸಚಿನ್ ಧನ್​ಪಾಲ್​ ಮೊದಲ ಪ್ರಯತ್ನದಲ್ಲೇ ಸಕ್ಸಸ್​ ಕಂಡಿದ್ದಾರೆ. ಯೆಸ್​​.. ರಾಜ್ಯಾದ್ಯಂತ ಇಂದು ಚಾಂಪಿಯನ್ ಸಿನಿಮಾ ತೆರೆ ಕಂಡಿದೆ. ಫಸ್ಟ್​ ಡೇ, ಫಸ್ಟ್​ ಶೋಗೆ ಸಿನಿರಸಿಕರ ರೆಸ್ಪಾನ್ಸ್​ ಹೇಗಿತ್ತು..? ಥಿಯೇಟರ್​​​ ಮುಂದೆ ಸೆಲೆಬ್ರೇಷನ್​​​​​​​​ ಜೋರು, ಕಾರುಬಾರು ಹೇಗಿತ್ತು ಹೇಳ್ತೀವಿ. ನೀವೇ ಓದಿ.

ಚಿತ್ರ: ಚಾಂಪಿಯನ್​​​

ನಿರ್ದೇಶನ: ಶಾಹುರಾಜ್​ ಶಿಂಧೆ

ನಿರ್ಮಾಣ: ಶಿವಾನಂದ್​ ಎಸ್​​ ನೀಲಣ್ಣವರ್​​​​

ಸಂಗೀತ: ಬಿ. ಅಜನೀಶ್​ ಲೋಕನಾಥ್​​

ಸಿನಿಮಾಟೋಗ್ರಫಿ: ಶರವಣನ್ ನಟರಾಜನ್​ 

ತಾರಾಗಣ:  ಸಚಿನ್​ ಧನ್​ಪಾಲ್​​, ಅದಿತಿ ಪ್ರಭುದೇವ, ಸನ್ನಿ ಲಿಯೋನ್​​​, ದೇವರಾಜ್​​, ಸುಮನ್​, ಪ್ರದೀಪ್ ರಾವತ್​​​, ಚಿಕ್ಕಣ್ಣ, ಆದಿ ಲೋಕೇಶ್​​​, ಅವಿನಾಶ್​​, ರಂಗಾಯಣ​ ರಘು, ಶೋಭರಾಜ್​​, ಕಾಕ್ರೋಚ್​ ಸುಧಿ ಮುಂತಾದವರು.

ಚಾಂಪಿಯನ್​​​​ ಸ್ಟೋರಿಲೈನ್

ಸಿದ್ಧಾಂತ್​ಗೆ ಹರ್ಡಲ್ಸ್​​​​ ಗೇಮ್​ನಲ್ಲಿ ಗೋಲ್ಡ್​​ ವಿನ್ನರ್​ ಆಗಬೇಕು ಅನ್ನೋದು ಅವ್ರ ಜೀವಮಾನದ ಕನಸು. ಜತೆಗೆ ಸ್ವಲ್ಪ ಗಾಯವಾದ್ರೂ ನಿಲ್ಲದ ರಕ್ತದ ವಿಚಿತ್ರ ಕಾಯಿಲೆಯಿಂದಾಗಿ ಎಚ್ಚರಿಕೆ ವಹಿಸಬೇಕಾದ ಭಯ ಒಂದು ಕಡೆ. ಯಾರೆ ನೀನು ಚೆಲುವೆಯಂತೆ ಪರಿಚಯವಾಗೋ ಗೆಳತಿ ಸಾರಿಕಾ. ಅಂತೂ ಚಾಂಪಿಯನ್​ ಆಗೋಕೆ ಬೆಂಗಳೂರಿಗೆ ಬರೋ ನಾಯಕನಿಗೂ, ನಾಯಕಿ ಅದಿತಿಗೂ ಸರ್​ಪ್ರೈಸ್​​ ಭೇಟಿ. ಅಚಾನಕ್ಕಾಗಿ ಎದುರಾಗೋ ರೌಡಿಗಳನ್ನು ಎದುರಿಸಿ, ನಾಯಕಿಯ ಪ್ರೀತಿಯನ್ನು ಗೆದ್ದು ಬೀಗ್ತಾನಾ ಅನ್ನೋದೇ ಒನ್​ ಲೈನ್​ ಸ್ಟೋರಿ.

ಚಾಂಪಿಯನ್​ ಆರ್ಟಿಸ್ಟ್ ಪರ್ಫಾಮೆನ್ಸ್​

ನಾಯಕ ಸಚಿನ್ ಧನ್​ಪಾಲ್​​ಗೆ ಇದು ಚೊಚ್ಚಲ ಸಿನಿಮಾವಾದ್ರೂ ಕೊಟ್ಟ ಕುದುರೆಯನ್ನು ಎಲ್ಲರೂ ಕಣ್ಣರಳಿಸಿ ನೋಡುವಂತೆ ಸವಾರಿ ಮಾಡಿದ್ದಾರೆ. ಆ್ಯಕ್ಷನ್​​, ಎಮೋಷನ್ಸ್​​​​​, ಲವ್​​, ರೊಮ್ಯಾನ್ಸ್​​​ ಎಲ್ಲಾ ವಿಭಾಗಗಳಲ್ಲೂ ಜರಿಯದ ನಟ ಸಚಿನ್​. ಮಿಂಚುಳ್ಳಿ ಅದಿತಿ ಗ್ಲಾಮರಸ್​​ ಲುಕ್​​ನಲ್ಲಿ ಸಖತ್​​ ಆಗಿ ಕಾಣಿಸ್ತಾರೆ.

ಪೋಷಕ ಪಾತ್ರಗಳಲ್ಲಿ ಅವಿನಾಶ್​​​​​, ರಂಗಾಯಣ ರಘು ನಟನಾ ಚಾತುರ್ಯತೆ ಹಿತ ಅನಿಸಲಿದೆ. ಡೈನಾಮಿಕ್​ ಸ್ಟಾರ್​​​ ದೇವರಾಜ್​​ ಟೀಚರ್​ ರೋಲ್​ನಲ್ಲಿ ಇಂಪ್ರೆಸ್ಸಿವ್​​ ಆಗಿದ್ದಾರೆ. ಒಟ್ಟಾರೆ ಬಿಗ್​ ಸ್ಟಾರ್​​ ಕಾಸ್ಟಿಂಗ್​​​​ನಲ್ಲಿ ಮೂಡಿ ಬಂದಿರೋ ಚಾಂಪಿಯನ್​​ನಲ್ಲಿ ಪಾತ್ರಗಳಿಗೂ ಮೋಸವಿಲ್ಲ, ಫಸ್ಟ್​ ಕ್ಲಾಸ್​ ಅಭಿನಯಕ್ಕೂ ಕೊರತೆಯಿಲ್ಲ.

ಚಾಂಪಿಯನ್​​​ ಪ್ಲಸ್ ಪಾಯಿಂಟ್ಸ್

ಸಚಿನ್​​​ ಸೈಲೆನ್ಸ್​​​​​ ಅಪಿಯರೆನ್ಸ್​​

ಮಾಸ್​​ ಲುಕ್​​​​​​​​​​

ಕಥೆ & ನಿರೂಪಣೆ

ಕಿಕ್ಕು ಕೊಡೋ ಕಾಮಿಡಿ

ಡಿಂಗರಬಿಲ್ಲಿ ಡಿಂಗ್​ಡಾಂಗ್​​​

ಚಾಂಪಿಯನ್​ ಮೈನಸ್​ ಪಾಯಿಂಟ್ಸ್​​​

ನಟ ಸಚಿನ್ ಧನ್​ಪಾಲ್​​​ ಕೆಲವು ಭಾವಾಭಿನಯದಲ್ಲಿ ಇನ್ನೂ ಅರಳಬೇಕು. ಕಟ್ಟು ಮಸ್ತು ದೇಹ ತೋರಿಸೋಕೆ ಇರೋ ಉತ್ಸಾಹ ಲವ್​, ಎಮೋಷನಲ್​ ಸೀನ್​ಗಳಲ್ಲಿ ಇದ್ದಂತಿಲ್ಲ. ಇದನ್ನು ಹೊರತು ಪಡಿಸಿದ್ರೆ ಚಾಂಪಿಯನ್​​​​​ ದಿ ಬೆಸ್ಟ್​ ಸಿನಿಮಾ.

ಚಾಂಪಿಯನ್​​​ ಫೈನಲ್ ಸ್ಟೇಟ್​ಮೆಂಟ್

ಆರ್ಮಿ ಬ್ಯಾಕ್​​ಡ್ರಾಪ್​​ ಹುಡುಗ ಸಚಿನ್​ ಧನ್​ಪಾಲ್​ ಸ್ಯಾಂಡಲ್​ವುಡ್​​ನಲ್ಲಿ ಮಿಂಚೋ ಬಹುದೊಡ್ಡ ಕನಸಿನೊಂದಿಗೆ ಎಂಟ್ರಿ ಕೊಟ್ಟಿದ್ದಾರೆ. ನಿರ್ದೇಶಕ ಶಾಹುರಾಜ್​ ಶಿಂಧೆ ಎಲ್ಲೂ ನಿರಾಸೆ ಮಾಡದೆ ಕೊನೆಯವರೆಗೂ ಸೀಟಿನ ಅಂಚಿಗೆ ತಂದು ಕೂರಿಸಿದ್ದಾರೆ. ಅಜನೀಶ್​ ಮ್ಯೂಸಿಕ್​ ಕೂಡ ಕ್ಲಾಸಿಕ್​ ಆಗಿದೆ. ಅಂತೂ ಕನ್ನಡಕ್ಕೊಬ್ಬ ಭರವಸೆಯ ನಟನನ್ನ ಕೊಡೋಕೆ ಅಂತ ಅವ್ರ ಆಪ್ತ ಗೆಳೆಯರೇ ಆದ ಶಿವಾನಂದ್ ಅವ್ರು ಪಟ್ಟಿರೋ ಶ್ರಮ ಚಿತ್ರದ ಪ್ರತಿ ಫ್ರೇಮ್​ನಲ್ಲೂ ಎದ್ದು ಕಾಣ್ತಿದೆ. ಒಟ್ಟಾರೆ ಈ ವಾರ ಯಾವುದೇ ಸಿನಿಮಾಗಳು ಇದಕ್ಕೆ ಕಾಂಪಿಟೇಷನ್ ಕೊಟ್ಟಿಲ್ಲ. ಹಾಗಾಗಿ ನೋಡೋರಿಗೂ ಇದೇ ಆಪ್ಷನ್ ಆಗಲಿದೆ.

ರಾಕೇಶ್​​ ಆರುಂಡಿ, ಫಿಲ್ಮ್​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES