Wednesday, January 22, 2025

ಹಲಾಲ್ ಮುಕ್ತ ದೀಪಾವಳಿ ಅಭಿಯಾನಕ್ಕೆ ಬಿಜೆಪಿ ಶಾಸಕ ಯತ್ನಾಳ್​ ಬೆಂಬಲ

ವಿಜಯಪುರ; ಹಲಾಲ್ ಕಟ್​​ ಮುಕ್ತ ದೀಪಾವಳಿ ಅಭಿಯಾನಕ್ಕೆ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್​ ಮುತಾಲಿಕ್ ಅವರು ನೀಡಿರುವ ಕರೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಬೆಂಬಲ ಸೂಚಿಸಿದ್ದಾರೆ.

ವಿಜಯಪುರದಲ್ಲಿ‌ಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಪ್ರಮೋದ್ ಮುತಾಲಿಕ್ ಏನು ಹೇಳ್ತಾರೆ ಅದಕ್ಕೆ ನನ್ನ ಬೆಂಬಲವಿದೆ. ಹಲಾಲ್ ಕಟ್​​ ಮುಕ್ತ ದೀಪಾವಳಿ ಅಭಿಯಾನ ಮಾಡೋಣ ಎಂದರು.

ಇನ್ನು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆ ಈ ಕುರಿತು ಮಾತನಾಡಿ, ಎಲ್ಲ‌ ಲೆಕ್ಕಾಚಾರದ ಬಳಿಕ ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಬೇರೆ ಪಕ್ಷದವರು ಚದುರಂಗ ಆಟ ಆಡ್ತಾರೆ. ಅದೇ ತರಹ ನಾವು ಚದುರಂಗ ಆಟ ಆಡುತ್ತೇವೆ. ಚದುರಂಗ ಆಟವಾಡಿ, ಬಿಜೆಪಿ ಬಹುಮತ ಪಡೆಯುತ್ತದೆ ಎಂದು ತಿಳಿಸಿದರು.

ಇನ್ನು ಬಿಜೆಪಿ ಪಕ್ಷಕ್ಕೆ ಬಂದ್ರೇ ಗಂಗಾ ನದಿಗೆ ಬಂದಾಗೆ, ಈ ಪಕ್ಷಕ್ಕೆ ಬಂದವರು ಗಂಗಾ ನದಿಯಲ್ಲಿ ಸ್ನಾನ ಮಾಡಿದ ರೀತಿಯಲ್ಲಿ ಪವಿತ್ರ ಆಗಿದ್ದಾರೆ ಎಂದು ತಿಳಿದುಕೊಳ್ಳಬೇಕು. ಬಿಜೆಪಿ ಪವಿತ್ರ ನದಿ, ಸ್ನಾನ ಮಾಡಿದವರು ಪವಿತ್ರ ಆಗ್ತಾರೆ ಎಂದ ಯತ್ನಾಳ ಹೇಳಿದರು.

RELATED ARTICLES

Related Articles

TRENDING ARTICLES