Sunday, May 19, 2024

ಚಾರ್ಲಿ ಸಿನಿಮಾದಂತೆ ಪ್ರೀತಿಸ್ತಿದ್ದ ಶ್ವಾನ ಕಳೆದುಕೊಂಡು ಕಣ್ಣೀರಾಕಿದ ಕುಟುಂಬ

ಕಲಬುರ್ಗಿ; ನಾಯಿ ಅಂದ್ರೆ ಯಾರಿಗೆ ತಾನೆ ಪ್ರೀತಿಯಿಲ್ಲ ಹೇಳಿ. ಇತ್ತಿಚಿಗಷ್ಟೇ ಚಾರ್ಲಿ ಸಿನಿಮಾದಲ್ಲಿ ಪ್ರೀತಿಯ ಶ್ವಾನದ ಅಗಲಿಕೆಯ ಸಿನ್ ನೋಡಿ ಸಾಕಷ್ಟು ಜನ ಕಣ್ಣಿರು ಹಾಕಿದ್ದರು. ಅದು ರಿಲ್. ಅದ್ರಲ್ಲೂ ರಿಯಲ್ ಲೈಫಿನಲ್ಲಿ ಸಾಕಿ ಸಲಹಿ ಮುದ್ದಾಗಿ ಬೆಳೆಸಿದ ನಾಯಿ ಬಗ್ಗೆ ಎಲ್ಲರಿಗೂ ಮಮತೆ. ಆದ್ರೆ ಅಂತಹ ಮುದ್ದಿನ ನಾಯಿ ಮನೆಯವರನ್ನ ಅಗಲಿ ಇಹಲೋಕ ಸೇರಿದ್ರೆ ಅದ್ಯಾವತರ ಸಂಕಟವಾಗುತ್ತೆ ಅಂತ ಹೇಳಲಿಕ್ಕಾಗದು. ಅಷ್ಟಕ್ಕೂ ಇಲ್ಲಿ ನಡೆದಿದ್ದು ಕೂಡ ಅದೇ.

ಹೃದಯಾಘಾತದಿಂದ ಇಹಲೋಕ ತ್ಯೇಜಿಸಿರೋ ಕ್ಯಾಂಡಿ ಹೆಸರಿನ ಶ್ವಾನ. ಪ್ರೀತಿಯ ಕ್ಯಾಂಡಿ ನಿಧನದಿಂದ ಕಣ್ಣಿರಿಡುತ್ತಿರೋ ಕುಟುಂಬ. ಮತ್ತೊಂದೆಡೆ ವಿಧಿವಿಧಾನದ ಮೂಲಕ ಶ್ವಾನದ ಅಂತ್ಯಕ್ರಿಯೆ ನೆರವೇರಿಸಿರೋ ಕುಟುಂಬಸ್ಥರು. ಅಷ್ಟಕ್ಕೂ ಇಂತಹ ಮನಕಲಕುವ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯಲ್ಲಿ. ಹೌದು ಮನೆಯ ಮಾಲಿಕ ಮೋಹನ ಕುಲಕರ್ಣಿ ಸತತ 6 ವರ್ಷಗಳಿಂದ ಮನೆ ಮಗಳಂತೆ ಬೆಳೆಸಿದ ನಾಯಿ ಇವತ್ತು ಇಹಲೋಕ ಸೇರಿದೆ.

ನಾಯಿ ಹೆಸರು ಕ್ಯಾಂಡಿ ಅಂತ, ನೋಡೋರಿಗೆ ಅದೊಂದು ನಾಯಿ ಆದ್ರೆ ಮೋಹನ ಮತ್ತು ರಾಧಾದೇವಿ ದಂಪತಿಗೆ ಅದು ಮನೆಯ ಮಗಳಿದ್ದಂತೆ. ಇಡೀ ಮನೆಯವರ ಪಾಲಿಗೆ ಫ್ಯಾಮಿಲಿ ಮೆಂಬರ್ ತರ ಇದ್ದ ಕ್ಯಾಂಡಿ ಕಾಲೋನಿಯ ಎಲ್ಲರಿಗೂ ಅಚ್ಚುಮೆಚ್ಚಾಗಿತ್ತು. ಆದ್ರೆ ಅದೆಲ್ಲ ಪ್ರೀತಿ ಇದೀಗ ನೆನಪು ಮಾತ್ರ. ಕಳೆದ ನಾಲ್ಕು ದಿನಗಳಿಂದ ಆರೋಗ್ಯದಲ್ಲಿ ಏರುಪೇರಾಗಿದ್ದ ಪರಿಣಾಮ ಪಶುವೈದ್ಯರ ಬಳಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಅದೇನಾಯಿತೋ ಗೊತ್ತಿಲ್ಲ. ಇವತ್ತು ಏಕಾಏಕಿ ಉಸಿರು ನಿಲ್ಲಿಸಿ ಬಿಟ್ಟಿದೆ ಕ್ಯಾಂಡಿ. ಯಾವಾಗ ಕ್ಯಾಂಡಿ ಅಗಲಿದೆ ಅಂತ ಗೊತ್ತಾಯಿತೋ ಮನೆಯವರ ಕಣ್ಣೀರಿನ ಕೋಡಿ ಒಡೆದಿದೆ.

ಇನ್ನೂ ಮನೆಯವರಲ್ಲದೇ ಇಡೀ ಕಾಲೋನಿಯ ಜನರ ಪ್ರೀತಿಗೆ ಪಾತ್ರವಾಗಿದ್ದ ಕ್ಯಾಂಡಿಯನ್ನ ಸಾಂಪ್ರದಾಯಿಕವಾಗಿ ವಿಧಿವಿಧಾನಗಳ ಮೂಲಕ ಕಾಲೋನಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ಮಾಡಲಾಗಿದೆ. ಕಳೆದ ಐದಾರು ವರ್ಷಗಳಿಂದ ಅತ್ಯಂತ ಪ್ರೀತಿ ಕಾಳಜಿ ಮಮತೆಯಿಂದ ಮನೆಯಲ್ಲಿ ಓಡಾಡಿಕೊಂಡಿದ್ದ ಕ್ಯಾಂಡಿ ಇದೀಗ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದರಿಂದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿದ್ದು, ಇಡೀ ಕುಟುಂಬ ಮೌನಕ್ಕೆ ಜಾರಿದೆ.

ಮನೆಯಲ್ಲಿ ಮಾಡಿದ್ದ ಅಡುಗೆ ಜೊತೆ ಅದಕ್ಕೆ ಇಷ್ಟವಾದ ಆಹಾರ ಪದಾರ್ಥಗಳನ್ನ ಕ್ಯಾಂಡಿಗೆ ಉಣಬಡಿಸುತ್ತಿದ್ದ ಮನೆಯವರು, ಕ್ಯಾಂಡಿ ನಿಧನದಿಂದ ಊಟ ಮಾಡದೇ ಮಮ್ಮಲು ಮರಗಿದ್ದಾರೆ. ಇನ್ನೂ ಕ್ಯಾಂಡಿಗೆ ಹುಷಾರಿಲ್ಲದಿದ್ದಾಗ ಪಶು ಆಸ್ಪತ್ರೆ ವೈದ್ಯರ ಬಳಿ ಕರೆದುಕೊಂಡು ಹೋಗಿ ಎಲ್ಲಾ ರೀತಿಯ ಚಿಕಿತ್ಸೆಗಳನ್ನ ಕೊಡಿಸಿದ್ದರು. ಆದರೆ ಕಳೆದ ರಾತ್ರಿ ಅದೆನಾಯಿತೋ ಏನೋ ಮಲಗಿದ್ದ ಸ್ಥಿತಿಯಲ್ಲಿಯೇ ಕ್ಯಾಂಡಿ ಇಹಲೋಕತ್ಯಜಿಸಿದ್ದು, ಅಕ್ಷರಶಃ ಮೋಹನ್ ಕುಲ್ಕರ್ಣಿ ಕುಟುಂಬ ಕಣ್ಣಿರ ಕೋಡಿ ಹರಿಸುತ್ತಿದ್ದಾರೆ.

ಅದೆನೇ ಇರಲಿ ಇತ್ತಿಚಿಗಷ್ಟೇ ಬಿಡುಗಡೆಯಾಗಿದ್ದ ರಕ್ಷಿತ್‌ಶೆಟ್ಟಿ ಅಭಿನಯದ ಚಾರ್ಲಿ ಚಿತ್ರದಲ್ಲಿ ಸಹ ಚಾರ್ಲಿ ಶ್ವಾನ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದು ಇಡೀ ರಾಜ್ಯದ ಜನ ಚಿತ್ರ ನೋಡಿ ಕಣ್ಣಿರು ಹಾಕಿದ್ದರು. ಆದರೆ ಅದು ರಿಲ್ ಆಗಿದೆ. ಇಲ್ಲಿ ನೀಜ ಜೀವನದಲ್ಲಿ ಎಲ್ಲರ ಪ್ರೀತಿಗೆ ಪಾತ್ರವಾಗಿದ್ದ ಕ್ಯಾಂಡಿ ನಿಧನದಿಂದ ಇಡೀ ಕುಟುಂಬ ಕಣ್ಣಿರಿಟ್ಟಿದೆ.

ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ

RELATED ARTICLES

Related Articles

TRENDING ARTICLES