ಬೆಂಗಳೂರು : ಇಂದು ವಿಶ್ವದ ಅತಿದೊಡ್ಡ ಪ್ರಯಾಣಿಕರ ವಿಮಾನ ಕರುನಾಡಿಗೆ ಆಗಮಿಸಲಿದ್ದು, ಐತಿಹಾಸಿಕ ಕ್ಷಣಗಳಿಗೆ ಕೆಂಪೇಗೌಡ ಏರ್ಪೋರ್ಟ್ ಸಾಕ್ಷಿಯಾಗಲಿದೆ.
ನಗರದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಏರ್ ಬಸ್ ದರ್ಶನವಾಗುತ್ತಿದ್ದು, ಎಮಿರೆಟ್ಸ್ ಏರ್ಲೈನ್ಸ್ನ ಏರ್ ಬಸ್ A380 ಬೆಂಗಳೂರಿಗೆ ಎಂಟ್ರಿಯಾಗಲಿದೆ. ಹಲವು ವೈಶಿಷ್ಟತೆ ಹೊಂದಿರುವ ಏರ್ ಬಸ್ A380, ಎಮಿರೆಟ್ಸ್ EK562 ಏರ್ಬಸ್ A380 ದುಬೈನಿಂದ ಬೆಳಗ್ಗೆ 10 ಗಂಟೆಗೆ ಟೇಕಾಫ್ ಆಗಲಿದ್ದು, ಮಧ್ಯಾಹ್ನ 3:40ಕ್ಕೆ KIALನಲ್ಲಿ ಲ್ಯಾಂಡ್ ಆಗಲಿದೆ.
ಏರ್ ಬಸ್ ವಿಶೇಷತೆ ಏನು..?
ಎಮಿರೆಟ್ಸ್ ಏರ್ಬಸ್ A380 ಡಬಲ್ ಡೆಕ್ಕರ್ ವಿಮಾನವಾಗಿದೆ. 575 ಟನ್ ತೂಕ, 72.7 ಮೀಟರ್ ಉದ್ದ ಇರುವ ಏರ್ಬಸ್, 24.1 ಮೀಟರ್ ಎತ್ತರವಿರುವ ಬೃಹತ್ ವಿಮಾನ, ಬೋಯಿಂಗ್ 777ಗಿಂತ ಶೇಕಡಾ 45 ರಷ್ಟು ಹೆಚ್ಚು ಆಸನಗಳಿವೆ. ಐಷಾರಾಮಿ, ಪ್ರಯಾಣಿಕರಿಗೆ ಅನುಕೂಲಕರ ಸೌಲಭ್ಯಗಳಿವೆ. ಎಲ್ಲಾ ಕ್ಲಾಸ್ಗಳಲ್ಲೂ ಡಿಜಿಟಲ್ ಸ್ಕ್ರೀನ್ ಇದೆ. ಒಮ್ಮೆಗೆ 15000 ಕಿ.ಮೀ ಈ ವಿಮಾನ ಸಂಚರಿಸುತ್ತದೆ.