Monday, December 23, 2024

ಖರ್ಗೆ & ಶಶಿ ತರೂರ್‌ ಮಧ್ಯೆ ಎದ್ದಿದ್ಯಾ ಭಿನ್ನ ‘ರಾಗಾ’?

ನವದೆಹಲಿ : ಒಂದ್ಕೆಡೆ, ರಾಹುಲ್‌ ಗಾಂಧಿ ಭಾರತ್‌ ಚೋಡೋ ಯಾತ್ರೆ ಮಾಡ್ತಿದ್ದಾರೆ.. ಮತ್ತೊಂದು ಕಡೆ ಕಾಂಗ್ರೆಸ್‌ ಅಧ್ಯಕ್ಷ ಚುನಾವಣೆಗೆ ತಯಾರಿ ನಡೆದಿದೆ. ಆದ್ರೆ, ಕಾಂಗ್ರೆಸ್‌ ಪಾಳೆಯದಲ್ಲಿ ಮತ್ತೊಂದು ಭಿನ್ನರಾಗಾ ಕೇಳಿ ಬರ್ತಿದೆ.. ಹೌದು, ಅಧ್ಯಕ್ಷ ಚುನಾವಣೆಗೆ ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಸ್ಪರ್ಧೆ ಮಾಡಿದ್ದಾರೆ. ಇಬ್ಬರಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಕೂಡ ಇದೆ.. ಆದ್ರೆ, ಖರ್ಗೆಯೇ ಅಧ್ಯಕ್ಷರಾಗ್ತಾರೆ ಎನ್ನಲಾಗ್ತಿದೆ.. ಈ ಮಧ್ಯೆ, ಶಶಿ ತರೂರ್‌ ತಮ್ಮ ಪಕ್ಷದೊಳಗಿನ ಬೇಗುದಿ ಬಯಲಿಗೆಳೆದಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಕೇರಳ ಸಂಸದ ಶಶಿ ತರೂರ್, ವಿವಿಧ ರಾಜ್ಯಗಳ ಪಕ್ಷದ ಮುಖ್ಯಸ್ಥರಿಂದ ಸಹಕಾರ ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಪ್ರತಿಸ್ಪರ್ಧಿ ಮಲ್ಲಿಕಾರ್ಜುನ ಖರ್ಗೆ ಹೆಚ್ಚಿನ ಸಹಕಾರ ನೀಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.

ಚುನಾವಣೆ ಹಿನ್ನೆಲೆಯಲ್ಲಿ ಶಶಿ ತರೂರ್‌ ವಿವಿಧ ರಾಜ್ಯಗಳಲ್ಲಿ ಪ್ರಚಾರ ಮಾಡ್ತಿದ್ದಾರೆ.. ಆದ್ರೆ, ಆ ರಾಜ್ಯಗಳಲ್ಲಿ ಕೈ ಮುಖಂಡರೇ ಕೈಗೆ ಸಿಗುತ್ತಿಲ್ವಂತೆ.. ಈ ವಿಚಾರದಲ್ಲಿ ಬೇಕು ಅಂತಾನೆ ಪಕ್ಷಪಾತ ಮಾಡ್ತಿದ್ದಾರೆ ಅನ್ನೋದು ಶಶಿತರೂರ್‌ ವಾದ.. ಗಾಂಧಿ ಕುಟುಂಬದ ಆಯ್ಕೆ ಎಂದು ಬಿಂಬಿಸಲಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪಕ್ಷದ ನಾಯಕರು ಸಿಕ್ಕಾಪಟ್ಟೆ ಉಪಚರಿಸುತ್ತಿದ್ದಾರೆ.. ಆದ್ರೆ, ಅದೇ ರೀತಿ ನನ್ನನ್ನು ನೋಡಿಕೊಳ್ಳುತ್ತಿಲ್ಲ ಅಂತ ಹೇಳಿಕೊಂಡಿದ್ದಾರೆ.

ನಾನು ಅನೇಕ ಸ್ಥಳಗಳಲ್ಲಿ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥರು , ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಮತ್ತು ದೊಡ್ಡ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಸ್ವಾಗತಿಸುತ್ತಾರೆ. ಅವರೊಂದಿಗೆ ಕುಳಿತುಕೊಳ್ಳುತ್ತಾರೆ, ಜನರನ್ನು ಆಹ್ವಾನಿಸುತ್ತಾರೆ ಮತ್ತು ಅಲ್ಲಿ ಹಾಜರಿರುವಂತೆ ಅವರಿಗೆ ಸೂಚಿಸುತ್ತಾರೆ. ಇದೆಲ್ಲವೂ ಒಬ್ಬ ವ್ಯಕ್ತಿಗೆ ನಡೆಯುತ್ತಿದೆ, ಆದರೆ ನನಗೆ ಎಂದಿಗೂ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಚುನಾವಣೆ ಹತ್ತಿರವಾಗ್ತಿದ್ದು, ಶಿಶಿ ತರೂರ್‌ ಹೀಗೆ ಏಕೆ ಹೇಳ್ತಿದ್ದಾರೆ..? ಅಥವಾ ಸೋಲು ಗ್ಯಾರಂಟಿ ಅಂತ ಹೀಗೆ ಹೇಳ್ತಿದ್ದಾರೆ.. ? ಅಥವಾ ನಿಜಕ್ಕೂ ಗಾಂಧಿ ಕುಟುಂಬ ಶಶಿ ತರೂರ್‌ ಅವರನ್ನು ನೆಗ್ಲೆಟ್‌ ಮಾಡಿದ್ಯಾ..? ಇವೆಲ್ಲಾ ಪ್ರಶ್ನೆಗಳಿಗೆ ಚುನಾವಣೆಯೇ ಉತ್ತರ ನೀಡಲಿದೆ.

RELATED ARTICLES

Related Articles

TRENDING ARTICLES