Monday, December 23, 2024

ರಿಷಬ್​ ಶೆಟ್ಟಿ ಕಾಲಿಗೆ ಬಿದ್ದ ಖ್ಯಾತ ಯೂಟ್ಯೂಬರ್​​

ಸಂದರ್ಶನ​ ಮಾಡುತ್ತಲೇ ಸೂರಜ್​ ಕುಮಾರ್ ಎಂಬಾತ​ ಸಖತ್​ ಎಮೋಷನಲ್​ ಆಗಿದ್ದಾರೆ. ಅವರು ರಿಷಬ್​ ಶೆಟ್ಟಿಯ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾರೆ.

ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೂಪರ್​ ಹಿಟ್​ ಆಗಿರುವ ‘ಕಾಂತಾರ’ ಸಿನಿಮಾದಿಂದ ನಟ, ನಿರ್ದೇಶಕ ರಿಷಬ್​ ಶೆಟ್ಟಿ ಅವರ ಜನಪ್ರಿಯತೆ ದೇಶಾದ್ಯಂತ ಹಬ್ಬಿದೆ. ಅವರಿಗೆ ಉತ್ತರ ಭಾರತದಲ್ಲೂ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಹಿಂದಿಗೂ ಈ ಚಿತ್ರ ಡಬ್​ ಆಗಿ ತೆರೆ ಕಂಡಿದೆ. ಈ ಪ್ರಯುಕ್ತ ಅನೇಕ ಮಾಧ್ಯಮಗಳಿಗೆ ಹಾಗೂ ಯೂಟ್ಯೂಬ್​ ಚಾನೆಲ್​ಗಳಿಗೆ ರಿಷಬ್​ ಶೆಟ್ಟಿ ಮತ್ತು ತಂಡದವರು ಸಂದರ್ಶನ ನೀಡುತ್ತಿದ್ದಾರೆ.

ಇತ್ತೀಚೆಗೆ ನಡೆದ ಒಂದು ಸಂದರ್ಶನದ ತುಣುಕು ಸಖತ್​ ವೈರಲ್​ ಆಗುತ್ತಿದೆ. ಜನಪ್ರಿಯ ಯೂಟ್ಯೂಬರ್​ ಸೂರಜ್​ ಕುಮಾರ್​ ಅವರು ಈ ಸಂದರ್ಶನ ನಡೆಸಿದ್ದಾರೆ. ಸಂದರ್ಶನದ ವೇಳೆ ಅವರು ರಿಷಬ್​ ಶೆಟ್ಟಿಯ ಕಾಲಿಗೆ ಬಿದ್ದಿದ್ದಾರೆ. ‘ಕಾಂತಾರ’ ಸಿನಿಮಾ ನೋಡಿ ಅವರು ಆ ಪರಿ ಭಾವುಕರಾಗಿದ್ದಾರೆ. ರಿಷಬ್​ ಶೆಟ್ಟಿ ಅವರು ‘ಕಾಂತಾರ’ ಚಿತ್ರದಲ್ಲಿ ಶಿವ ಎಂಬ ಪಾತ್ರ ಮಾಡಿದ್ದಾರೆ. ಕ್ಲೈಮ್ಯಾಕ್ಸ್​ ದೃಶ್ಯದಲ್ಲಿ ಅವರ ನಟನೆಯನ್ನು ಕಂಡು ಅಭಿಮಾನಿಗಳಿಗೆ ಸಖತ್​ ಖುಷಿ ಆಗಿದೆ.

RELATED ARTICLES

Related Articles

TRENDING ARTICLES