Sunday, December 22, 2024

ಬಾಲಕಿ ಕುಟುಂಬಸ್ಥರನ್ನ ಭೇಟಿಯಾಗಿ ಸಾಂತ್ವನ ಹೇಳಿದ ನಿಖಿಲ್​ ಕುಮಾರಸ್ವಾಮಿ

ಮಂಡ್ಯ; ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಗೈದು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದ್ದ ಬಾಲಕಿ ಕುಟುಂಬಸ್ಥರನ್ನ ಜೆಡಿಎಸ್​ ಯುವ ರಾಜ್ಯ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಅವರು ಭೇಟಿಯಾಗಿ ಸಾಂತ್ವನ ಹೇಳಿದರು.

ಜಿಲ್ಲೆಯ ಮಳವಳ್ಳಿ ಪಟ್ಟಣದ 10 ದಿವ್ಯಾ ವರ್ಷದ ಬಾಲಕಿ ಟ್ಯೂಶನ್​ಗೆಂದು ಹೋದ ವೇಳೆಯಲ್ಲಿನ ಸಂದರ್ಭದಲ್ಲಿ ಬಾಲಿಯನ್ನ ಕಿಡ್ನಾಪ್​ ಮಾಡಿ ಹತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಇಂದು ಬಾಲಕಿ ಕುಟುಂಬಸ್ಥರನ್ನ ಭೇಟಿಯಾದ ನಿಖಿಲ್​ ಕುಮಾರ್​, ಈ ಘಟನೆಯಿಂದ ಇಡೀ ತಾಲೂಕಿನ ಜನತೆ ದುಃಖದಲ್ಲಿ ಮುಳುಗಿದೆ. ಆದರೆ ಜಿಲ್ಲಾಡಳಿತ ಘಟನೆ ಬಗ್ಗೆ ಕ್ರಮವಹಿಸದೇ ಕುಂಭಮೇಳ ಮಾಡ್ತಿದೆ. ಇಲ್ಲಿವರೆಗೂ ಸಂತ್ರಸ್ಥ ಕುಟುಂಬಕ್ಕೆ ಜಿಲ್ಲಾಧಿಕಾರಿ ಬಂದು ಸಾಂತ್ವನ ಹೇಳಿಲ್ಲ ಎಂದು ಕಿಡಿಕಾರಿದರು.

ಬಾಲಕಿ ಮೇಲೆ ದೌರ್ಜನ್ಯ ಮಾಡೊರೋ ವ್ಯಕ್ತಿಗೆ ಗಲ್ಲುಶಿಕ್ಷೆ ಆಗಬೇಕು. ಈ ವಿಚಾರವಾಗಿ ಅಸೆಂಬ್ಲಿಯಲ್ಲಿ ಮಾತನಾಡುತ್ತೇನೆ. ಕೇಂದ್ರ ಸರ್ಕಾರ ಕೂಡಲೇ ಈ ಬಗ್ಗೆ ಕಾನೂನು ತಿದ್ದುಪಡಿ ಮಾಡಿ ಕ್ರಮವಹಿಸಬೇಕು. ಈ ಹೋರಾಟದಲ್ಲಿ ನ್ಯಾಯ ಸಿಗುವವರೆಗು ಆ ಕುಟುಂಬದ ಪರವಾಗಿ ಇರುವೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು.

RELATED ARTICLES

Related Articles

TRENDING ARTICLES