Monday, December 23, 2024

ಇಂದಿನಿಂದ ಸಕ್ಕರೆ ನಾಡಲ್ಲಿ ಕುಂಭ ಮೇಳ ಆರಂಭ

ಮಂಡ್ಯ :  ಜಿಲ್ಲೆಯಲ್ಲಿ ದಕ್ಷಿಣ ಭಾರತದಲ್ಲೇ ಎರಡನೇ ಬಾರಿ ದೊಡ್ಡಮಟ್ಟದಲ್ಲಿ ಕುಂಭಮೇಳ ನಡೆಯುತ್ತಿದೆ. ಕೆ.ಆರ್ ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿ- ಪುರ-ಸಂಗಾಪುರ ಗ್ರಾಮಗಳ ಕಾವೇರಿ ನದಿ ತ್ರಿವೇಣಿ ಸಂಗಮದಲ್ಲಿ 16 ರವರೆಗೆ ಮಹಾ ಕುಂಭಮೇಳ ಮುಂದುವರಿಯಲಿದೆ. ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಜಿ , ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆ ಹಾಗೂ ಮಠಾಧೀಶರ ನೇತೃತ್ವದಲ್ಲಿ ಮತ್ತು ಮುಖ್ಯಮಂತ್ರಿಗಳ ಸಹಕಾರದೊಂದಿಗೆ ನಡೆಯುತ್ತಿದ್ದು, ಯುಪಿ ಸಿಎಂ ಯೋಗಿ ಆದಿತ್ಯಾನಾಥ್ ಸಹ ಭಾಗಿಯಾಗಲಿದ್ದಾರೆ. ಈ ಮಹಾ ಕುಂಭಮೇಳಕ್ಕೆ 6 ಲಕ್ಷ ಜನರು ಬರುವುದಕ್ಕೆ ಅವಕಾಶವಿದೆ ಎಂದು ಸರ್ವೆ ಮಾಡಲಾಗಿದೆ. ಮಹಾ ಕುಂಭ ಮೇಳಕ್ಕೆ ಬರುವ ಭಕ್ತಾದಿಗಳು ಸ್ನಾನ ಮಾಡಿ ಪೂಜೆಯನ್ನು ಸಲ್ಲಿಸಿ ಹಾಗೂ ಸಾಧುಸಂತರನ್ನು ದರ್ಶನ ಮಾಡುವ ಅವಕಾಶವಿದೆ.

ಕೆ.ಆರ್.ಪೇಟೆ ತಾಲ್ಲೂಕಿನ ಅಂಬಿಗರಹಳ್ಳಿಗೆ ಶ್ರೀ ಮಲೆ ಮಹದೇಶ್ವರರು ಬಂದು ಹೋಗಿರುವ ಸ್ಥಳವಾಗಿದೆ. ಕಾವೇರಿ, ಹೇಮಾವತಿ, ಲಕ್ಷ್ಮಣ ತೀರ್ಥ ಈ ಮೂರು ನದಿಗಳು ಅಂಬಿಗರಹಳ್ಳಿ, ಸಂಗಾಪುರ ಹಾಗೂ ಪುರ ಮೂರು ಹಳ್ಳಿಗಳ ಮಧ್ಯೆ ಸೇರುವ ಪವಿತ್ರ ಸ್ಥಳದಲ್ಲಿ ಶ್ರೀ ಮಲೆ ಮಹದೇಶ್ವರರು ಬಂದು ಪಾದಸ್ಪರ್ಶ ಮಾಡಿ ಹೋಗಿದ್ದಾರೆ. 2013 ರಲ್ಲಿ ನಡೆದ ಕುಂಭಮೇಳ ಕಾರ್ಯಕ್ರಮಕ್ಕಿಂತ ಭಿನ್ನವಾಗಿ ಈ ಬಾರಿ ಮಹಾಕುಂಭಮೇಳ ಕಾರ್ಯಕ್ರಮವನ್ನು ಆಚರಣೆ ಮಾಡಲಾಗುತ್ತಿದೆ. ಮಹಾಕುಂಭಮೇಳ ಕಾರ್ಯಕ್ರಮದ ಉದ್ಘಾಟನೆಯನ್ನು ಅ.14 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ.ವೀರೇಂದ್ರ ಹೆಗ್ಗಡೆಯವರು ನೆರವೇರಿಸಲಿದ್ದಾರೆ. ದೇವಸ್ಥಾನದಲ್ಲಿ ನಡೆಯಬೇಕಿರುವ ಪೂಜಾ ಕಾರ್ಯಕ್ರಮವನ್ನು ಪರಮ ಪೂಜ್ಯ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ‌ ವಹಿಸಿಕೊಂಡಿದ್ದಾರೆ. ಅಕ್ಟೋಬರ್ 6 ರಂದು ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಸ್ವಾಮೀಜಿಗಳು ಚಾಮರಾಜನಗರ,ಮೈಸೂರು, ಮಂಡ್ಯ ಸೇರಿದಂತೆ 3 ಮಹದೇಶ್ವರ ಜ್ಯೋತಿ ರಥಗಳಿಗೆ ಚಾಲನೆ ನೀಡಲಾಗಿದೆ. ಜ್ಯೋತಿರಥಗಳು ಪ್ರತಿ ಹಳ್ಳಿಗಳಿಗೆ, ದೇವಸ್ಥಾನಗಳಿಗೆ, ಮಠಗಳಿಗೆ ಭೇಟಿ ಕೊಟ್ಟು ಸುಮಾರು 8ಲಕ್ಷಕ್ಕೂ ಅಧಿಕ ಜನರು ದೇವರ ದರ್ಶನ ಪಡೆದಿದ್ದಾರೆ.

ಮಹಾಕುಂಭ ಮೇಳವನ್ನು ಯಶಸ್ವಿಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಸಂಪೂರ್ಣವಾದ ಸಹಕಾರ ನೀಡಿದ್ದು, 40ಕ್ಕಿಂತ ಹೆಚ್ಚು ಸಾದು ಸಂತರು ಹೊರ ರಾಜ್ಯ ಹಾಗೂ ನಮ್ಮ ರಾಜ್ಯದಿಂದ ಬರುತ್ತಾರೆ. ಮಂಡ್ಯ ಜಿಲ್ಲೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಲಕ್ಷಾಂತರ. ಭಕ್ತರು ಈ ಕುಂಭಮೇಳ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಭಕ್ತಾದಿಗಳಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ ದಕ್ಷಿಣ ಭಾರತದ ಮಹಾಕುಂಭ ಮೇಳಕ್ಕೆ ನಾಳೆ ಅದ್ದೂರಿಯಾಗಿ ಚಾಲನೆ ಸಿಗಲಿದ್ದು, ಮೇಳಕ್ಕೆ ಭಕ್ತರು ಕಾದು ಕುಳಿತಿದ್ದಾರೆ.

ಬಾಲಕೃಷ್ಣ ಜೀಗುಂಡಿಪಟ್ಟಣ, ಪವರ್ ಟಿವಿ, ಮಂಡ್ಯ

RELATED ARTICLES

Related Articles

TRENDING ARTICLES