ವಿಜಯಪುರ; ವಿಜಯಪುರ ಮಹಾನಗರ ಪಾಲಿಕೆ ಸದಸ್ಯರ ಅಧಿಕಾರಾವಧಿ ಮುಗಿದು ಮೂರುವರೆ ವರ್ಷವಾದರೂ ಪಾಲಿಕೆಗೆ ಚುನಾವಣೆ ನಡೆದಿರಲಿಲ್ಲ. ಇನ್ನೂ ತಮ್ಮ ಬಡಾವಣೆಯ ಅಭಿವೃದ್ಧಿ ಕುರಿತು ಯಾರನ್ನೂ ಕೇಳುವದು ಎಂದು ಜನ ಚಿಂತೆಗೀಡಾಗಿದ್ದರೂ. ಚುನಾವಣೆ ನಡೆಸಬೇಕು ಎಂದು ಹಲವು ಜನರು ಸರ್ಕಾರಕ್ಕೆ ಮನವಿ ಸಲಿಸಿದರು. ಇನ್ನೇನು ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ಘೋಷಣೆ ಮಾಡಿದ ಬೆನ್ನಲ್ಲೇ ಕೆಲವರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ಕೇಳಿದ್ದರು. ಆದರೆ ಹೈಕೋರ್ಟ್ ಇದನ್ನು ವಜಾಗೊಳಿಸಿ ಚುನಾವಣೆ ನಡೆಸಲು ಸೂಚಿಸಿದೆ.
ಹೌದು… ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧ ಪಟ್ಟಂತೆ ಬಡಾವಣೆಯ ಸದಸ್ಯರುಗಳು ಅಧಿಕಾರಾವಧಿ ಮುಗಿದು ಮೂರುವರೆ ವರ್ಷವಾದರೂ ಚುನಾವಣೆ ಆಗಿರಲಿಲ್ಲ. ಇನ್ನೂ ಹಲವು ಬಡಾವಣೆಯ ಜನರು ತಮ್ಮ ಬಡಾವಣೆಯ ಅಭಿವೃದ್ಧಿ ಮಾಡುವ ವಿಚಾರವಾಗಿ ಹೋರಾಟಗಳನ್ನು ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಿ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದರು. ಇನ್ನೂ ಕೆಲವರು ವಾರ್ಡ್ ವಿಂಗಡನೆ, ವಾರ್ಡ್ ಮೀಸಲಾತಿ, ವಾರ್ಡ್ ನಲ್ಲಿ ಜನಸಂಖ್ಯೆ ಇದೆಲ್ಲವನ್ನು ಇಟ್ಟುಕೊಂಡು ಹಿಂದೆ ಕೆಲವರು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶ ಮಾಡಿದ ಹಿನ್ನಲೆ ಮಹಾನಗರ ಪಾಲಿಕೆ ಅಧಿಕಾರಿಗಳು ಪುನರ್ ವಿಂಗಡಣೆ ಕೋರ್ಟ್ ಹಾಗೂ ಚುನಾವಣಾ ಆಯೋಗಕ್ಕೆ ಸೂಚಿಸಿದ ಬೆನ್ನಲ್ಲೇ ಮೂರುವರೆ ವರ್ಷದ ಬಳಿಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಸೂಚನೆ ನೀಡಿದೆ.
ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯನ್ನು ಅಕ್ಟೋಬರ್ 28 ರಂದು ನಡೆಸುವಂತೆ ಸೂಚನೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ದೀಪಾ ಕುಂಬಾರ, ಪಾಲಿಕೆಯ ಮಾಜಿ ಸದಸ್ಯ ಮೈನುದ್ದಿನ್ ಬೀಳಗಿ, ಇದ್ರೂಕ್ಷಿ ಬಕ್ಷಿ ನಾಲ್ವರು ಸೇರಿ ತಡೆಯಾಜ್ಞೆಗೆ ಕಲಬುರಗಿ ಹೈಕೋರ್ಟ್ಗೆ ಮನವಿ ಮಾಡಿದ್ದರು. ಆದರೆ ಇಂದು ಕಲಬುರಗಿ ಹೈಕೋರ್ಟ್ ಅದನ್ನು ವಜಾಗೊಳಿಸಿ ಅಕ್ಟೋಬರ್ 28 ರಂದೇ ಚುನಾವಣೆ ನಡೆಸುವಂತೆ ಸೂಚನೆ ನೀಡಿದೆ.
ಇನ್ನೂ ಪಾಲಿಕೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಲ್ಲಿ ಟಿಕೇಟ್ ಆಕಾಂಕ್ಷಿಗಳ ಪಟ್ಟಿ ಜೋರಾಗಿದೆ. ತಮ್ಮ ತಮ್ಮ ಪಕ್ಷದ ಮುಖಂಡರುಗಳು ಕಚೇರಿ, ಮನೆಗೆ ಹೋಗಿ ಟಿಕೇಟ್ ಗಾಗಿ ಟಿಕೇಟ್ ಆಕಾಂಕ್ಷಿಗಳು ದುಂಬಾಲು ಬಿದ್ದಿದ್ದಾರೆ. ಇದರ ಮದ್ಯೆ ಕೆಲವರು ಬಿ ಫಾರ್ಮ್ ಕೊಡುವ ಮುಂಚೆಯೇ ಶಕ್ತಿ ಪ್ರದರ್ಶನ ಮಾಡುವ ಮೂಲಕ ಆಗಮಿಸಿ ನಾಮ ಪತ್ರವನ್ನು ಸಲ್ಲಿಸುತ್ತಿದ್ದಾರೆ.
ವಿಜಯಪುರ ನಗರದ 35 ವಾರ್ಡಗಳಲ್ಲಿ ಟಿಕೇಟ್ ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ. ಆದರೆ ಪಕ್ಷದ ಮುಖಂಡರುಗಳಿಗೆ ಯಾರಿಗೆ ಟಿಕೇಟ್ ಕೊಡೋದು ಎನ್ನುವುದು ತಲೆನೋವಾಗಿ ಪರಿಣಮಿಸಿದೆ. ಅಕ್ಟೋಬರ್ 17 ರಂದು ಪಾಲಿಕೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕವಿದ್ದು ಟಿಕೇಟ್ ಆಕಾಂಕ್ಷಿಗಳು ಸಹಿತ ಹೆಚ್ಚಾಗಿದ್ದಾರೆ. ಇನ್ನೂ ಹೈಕೋರ್ಟ್ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ನೀಡಿರುವ ಕಾರಣ ಚುನಾವಣೆ ಆಕಾಂಕ್ಷಿಗಳ ಭರಾಟೆ ಜೋರಾಗಲಿದೆ.
ಸುನೀಲ್ ಭಾಸ್ಕರ್, ಪವರ ಟಿವಿ. ವಿಜಯಪುರ