Wednesday, January 22, 2025

‘ಡಾಲರ್ಸ್ ಪೇಟೆ’ಯಲ್ಲಿ ಪೃಥ್ವಿ ಅಂಬಾರ್ ಮಾಸ್ ಮಿಂಚು

ದಿಯಾ ಚಿತ್ರದ ಮೂಲಕ ಜನಪ್ರಿಯತೆ ಪಡೆದ ನಟ ಪೃಥ್ವಿ ಅಂಬಾರ್​​​. ಲವರ್​ ಬಾಯ್​ ಆಗಿ ಮನೆ, ಮನ ತಲುಪಿದ ಚಾಕೋಲೇಟ್​​ ಹೀರೋ. ಕಾಲೇಜು ಕನ್ಯೆಯರ ಎದೆಯಲ್ಲಿ ಪ್ರೀತಿಯ ಬಾಣ ಬಿಟ್ಟಿದ್ದ ಪೃಥ್ವಿ, ಧಿಡೀರ್​ ಮಾಸ್​ ಗೆಟಪ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಸ್ತ್​ ಫೈಟ್​​​​ ಸೀನ್​​ನಲ್ಲಿ ಎದುರಾಳಿಯ ಎದೆಗೆ ಪಂಚ್​ ಕೊಡ್ತಿದ್ದಾರೆ. ಯೆಸ್​​​.. ಯಾವ ಸಿನಿಮಾ..? ಎಲ್ಲಿ..? ಏನ್​ ಕಥೆ ಅಂತೀರಾ..? ನೀವೇ ಓದಿ.

  • ಅರ್ಜುನ್​ ಮಾಸ್ಟರ್​ ಮೈಂಡ್​​ನಲ್ಲಿ ಫೈಟ್​​ ಸೀನ್​​ ಶೂಟಿಂಗ್​​

ದಿಯಾ ಸಿನಿಮಾ ಸೂಪರ್ ಹಿಟ್​ ಆದ್ಮೇಲೆ ನಟ ಪೃಥ್ವಿ ಅಂಬಾರ್​​ಗೆ ಸಿನಿಮಾ ಆಫರ್​ಗಳ ಸಂಖ್ಯೆ​​​​ ಹೆಚ್ಚಾಗಿದೆ. ಇತ್ತೀಚೆಗೆ ಶುಗರ್​ ಲೆಸ್​ ಸಿನಿಮಾ ಸೇರಿದಂತೆ ಶಿವಣ್ಣನ ಬೈರಾಗಿ ಚಿತ್ರದಲ್ಲೂ ಪೃಥ್ವಿ ಅಂಬಾರ್​​ ಛಾಪು ಮೂಡಿಸಿದ್ರು. ಸದ್ಯ ದೂರದರ್ಶನ ಸಿನಿಮಾದಲ್ಲಿ ರೆಟ್ರೋ ಕಥೆ ಹೇಳೋಕೆ ಪೃಥ್ವಿ ಹೊರಟಿದ್ದಾರೆ. ಈ ಗ್ಯಾಪ್​ನಲ್ಲಿ ಮಾಸ್​ ಗೆಟಪ್​​ನಲ್ಲಿ ಪೃಥ್ವಿ ಎದುರಾಳಿಯ ಜತೆಗೆ ಜಿದ್ದಿಗೆ ಬಿದ್ದಿದ್ದಾರೆ.

ಬೆಂಗಳೂರಿನ ಡಾಲರ್ಸ್​ ಪೇಟೆಯಿಂದ ಹಣ ನಾಪತ್ತೆ ಯಾಗುತ್ತೆ. ಈ ಸ್ಟೋರಿ ಲೈನ್​ ಮೇಲೆ ಸಸ್ಪೆನ್ಸ್​ ಥ್ರಿಲ್ಲರ್​ ಸಿನಿಮಾ ತೆರೆಗೆ ಬರಲಿದೆ. ಚಿತ್ರಕ್ಕೆ ಡಾಲರ್ಸ್​ ಪೇಟೆ ಎಂಬ ಹೆಸರಿಡಲಾಗಿದ್ದು, ಸಖತ್ ಕ್ಯೂರಿಯಾಸಿಟಿ ಮೂಡಿಸಿದೆ. ಸದ್ಯ ಈ ಚಿತ್ರದ ಫೈಟ್​ ಸೀನ್​ ಶೂಟಿಂಗ್​ ನಡಿತಿದ್ದು ಪೃಥ್ವಿ ಆ್ಯಕ್ಷನ್​​ ರಣ ರೋಚಕವಾಗಿದೆ. ಹೆಚ್ಚು ಡ್ಯುಪ್​ ಬಳಸದೆ ರಿಯಲಿಸ್ಟಿಕ್​ ಆಗಿ ಶೂಟ್​ ಮಾಡಲಾಗಿದೆ.

  • ಬೆಂಕಿ ಕಿಚ್ಚಿನ ಕಿಡಿಯ ನಡುವೆ ಪೃಥ್ವಿ ಅಂಬಾರ್​ ಸರಸ..!
  • ರಿಸ್ಕಿ ಫೈಟ್​ ಸೀನ್​ನಲ್ಲಿ ಹೀರೋ ಪವರ್​​ಫುಲ್​​​ ಸಾಹಸ

ಡಾಲರ್ಸ್​ ಪೇಟೆಯ ಬ್ಯಾಂಕ್​ ದರೋಡೆಯ ಕಥೆ ಇದಾಗಿದ್ದು, ಇಂಗ್ಲೀಷ್​​ ಸಿನಿಮಾ ಫ್ಲೇವರ್​​ನಲ್ಲಿದೆಯಂತೆ. ಡಾಲರ್ಸ್​​ ಅಂಡ್​ ಪೇಟೆಯ ನಡುವೆ ನಡೆಯುವ ಮಿಸ್ಟರಿ. ಸದ್ಯ ಈ ಸಿನಿಮಾ ಶೂಟಿಂಗ್​ ಅಂತಿಮ ಹಂತದಲ್ಲಿದ್ದು, ಚಿತ್ರದ ಫೈಟ್​​​ ಮೇಕಿಂಗ್​ ವೀಡಿಯೋ ರಿವೀಲ್​ ಆಗಿದೆ. ಪವರ್​ ಫುಲ್​​ ರೋಲ್​ನಲ್ಲಿ ಪೃಥ್ವಿ ಎದುರಾಳಿಗೆ ಪಂಚ್​ ನೀಡ್ತಿದ್ದಾರೆ. ಒಟ್ನಲ್ಲಿ ರೋಮ್ಯಾಂಟಿಕ್​ ಹುಡುಗ ಪೃಥ್ವಿ ಮಾಸ್​ ಅವತಾರದಲ್ಲಿ ಅಬ್ಬರಿಸೋದನ್ನು ನೋಡೋಕೆ ಥ್ರಿಲ್ಲಿಂಗ್​ ಆಗಿದೆ.

ಡಾಲರ್ಸ್ ಪೇಟೆಗೆ ಪೆಂಟ್ರಿಕ್ಸ್ ಎಂಟರ್​​​​​ಟೈನ್ ಮೆಂಟ್ ಸಂಸ್ಥೆಯ ಪೂಜಾ ಮೋಹನ್ ಬಂಡವಾಳ ಹೂಡಿದ್ದಾರೆ. ಮದಗಜ ಮಾರ್ಫಿ, ಸಕೂಚಿ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಮೋಹನ್ ಮುನಿನಾರಾಯಣಪ್ಪ ನಿರ್ದೇಶಕರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಡಾಲರ್ಸ್ ಪೇಟೆಯಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ, ಮೆಟ್ರೋಸಾಗಾ ಖ್ಯಾತಿಯ ಆಕರ್ಷ ಕಮಲ, ಕಿರಿಕ್ ಪಾರ್ಟಿಯ ರಾಘವೇಂದ್ರ,  ಮದಗಜ ಮತ್ತು ರಾಬರ್ಟ್ ನಲ್ಲಿ ಕಾಣಿಸಿಕೊಂಡಿದ್ದ ದತ್ತು ಕಾಣಿಸಿಕೊಂಡಿದ್ದಾರೆ.

ಆನಂದ್ ಸುಂದರೇಶ್ ಕ್ಯಾಮರಾ ಕಣ್ಣು, ಮಹೇಶ್ ತೊಗಟ ಎಡಿಟಿಂಗ್​​​​​, ಸೂರಜ್ ಜೋಯಿಶ್ ಸಂಗೀತದಲ್ಲಿ ಮೂರು ಅದ್ಭುತ ಹಾಡುಗಳು ಮೂಡಿಬಂದಿವೆ. ಸದ್ಯ ಸಿನಿಮಾ ತೆರೆಗೆ ಬರೋಕೆ ಸಜ್ಜಾಗಿದ್ದು ಸಿಲ್ವರ್ ಸ್ಕ್ರೀನ್​ ಮೇಲೆ ಮ್ಯಾಜಿಕ್​ ಮಾಡುತ್ತಾ ಕಾದು ನೋಡ್ಬೇಕಾಗಿದೆ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್ ಟಿವಿ

RELATED ARTICLES

Related Articles

TRENDING ARTICLES