Wednesday, January 22, 2025

ಹೈ-ವೋಲ್ಟೇಜ್ ಪ್ರಾಜೆಕ್ಟ್​​​​​​​​​​​ನಲ್ಲಿ ‘ಕ್ಯಾಪ್ಟನ್ ಮಿಲ್ಲರ್’ ಶಿವಣ್ಣ..!

ಆಲ್​ ಇಂಡಿಯನ್​ ಸಿನಿಮಾಗಳು ಒಂದೇ ಅನ್ನೋ ಕಾನ್ಸೆಪ್ಟ್​ ಬಂದಿದೆ. ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಕನ್ನಡದ ಸ್ಟಾರ್​ ನಟರು ಮಿಂಚ್ತಿದ್ದ ಹಾಗೆ ಪರಬಾಷಾ ನಿರ್ಮಾಪಕರು ಕನ್ನಡಿಗರಿಗೆ ಮಣೆ ಹಾಕ್ತಿದ್ದಾರೆ. ಇದೀಗ ಹ್ಯಾಟ್ರಿಕ್​ ಹೀರೋ ಶಿವಣ್ಣ ಜೈಲರ್​ ನಂತ್ರ ಮತ್ತೊಂದು ಚಿತ್ರಕ್ಕೆ ಯೆಸ್​ ಅಂದಿದ್ದಾರೆ. ತಮಿಳಿನ ಸೂಪರ್​ ಸ್ಟಾರ್​ ಜತೆ ಶಿವಣ್ಣ ಓಕೆ ಮಾಡಿರೋ ಪ್ರಾಜೆಕ್ಟ್​​ ಯಾವುದು ಗೊತ್ತಾ..? ನೀವೇ ಓದಿ.

  • ರಜನಿಕಾಂತ್​ ಫ್ಯಾಮಿಲಿ ಜತೆ ಹ್ಯಾಟ್ರಿಕ್​ ಹೀರೋ ಮಿಂಚು

ಸ್ಟ್ರಾಂಗ್​ ಇತ್ತು ನನ್ ಬಾಡಿ, ವೀಕ್​ ಆಯ್ತು ನನ್​ ನೋಡಿ ಸಾಂಗ್​ ನಿಮಗೆಲ್ಲಾ ನೆನಪಿರಬಹುದು. ಯೆಸ್​​​.. ವಜ್ರಕಾಯ ಚಿತ್ರದ ಈ ಹಾಡಿಗೆ ವಾಯ್ಸ್​ ನೀಡಿದ್ದು ತಮಿಳಿನ ಸೂಪರ್ ಸ್ಟಾರ್​​ ಧನುಷ್​​​. ಹ್ಯಾಟ್ರಿಕ್​ ಹೀರೋ ಶಿವಣ್ಣ ಹಾಗೂ ಧನುಷ್​ ಸ್ನೇಹ ಇಲ್ಲಿಂದ ಚೆನ್ನಾಗಿ ಚಿಗುರಿತ್ತು. ಇದೀಗ ಈ ಸ್ನೇಹದ ಸಂಕೇತವಾಗಿ ಶಿವಣ್ಣ ಧನುಷ್​ ಜತೆ ಸ್ಕ್ರೀನ್ ಶೇರ್​ ಮಾಡ್ತಿದ್ದಾರೆ.

ದೊಡ್ಮನೆ ಫ್ಯಾಮಿಲಿ ಸ್ಯಾಂಡಲ್​​ವುಡ್​​​ನಿಂದ ಹಿಡಿದು ಬಾಲಿವುಡ್​​​ವರೆಗೂ ಎಲ್ಲಾ ಸೂಪರ್​ ಸ್ಟಾರ್​ಗಳ ಜತೆಗೆ ಉತ್ತಮ ಒಡನಾಟ ಹೊಂದಿದ್ದಾರೆ. ಈ ಹಿಂದೆಯೂ ಬಾಲಕೃಷ್ಣ ಅಭಿನಯದ ಗೌತಮಿ ಪುತ್ರ ಶಾತಕರ್ಣಿ ಚಿತ್ರದ ಸ್ಪೆಷಲ್​ ಸಾಂಗ್​ನಲ್ಲಿ ಶಿವಣ್ಣ ಬಣ್ಣ ಹಚ್ಚಿದ್ದರು. ಇತ್ತೀಚೆಗೆ ಜೈಲರ್​ ಚಿತ್ರದಲ್ಲಿ ರಜಿನಿಕಾಂತ್​​ ಜತೆ ಭಜರಂಗಿ ಆ್ಯಕ್ಟ್​ ಮಾಡ್ತಾರೆ ಅನ್ನೋ ಸುದ್ದಿ ಕೇಳಿ ಸ್ಯಾಂಡಲ್​ವುಡ್​ ಥ್ರಿಲ್ ಆಗಿತ್ತು. ಇದೀಗ, ಡಾ. ಶಿವಣ್ಣ ಕ್ಯಾಪ್ಟನ್​ ಮಿಲ್ಲರ್​ ಚಿತ್ರದಲ್ಲಿ ಕೈ ಮಿಲಾಯಿಸಲಿದ್ದಾರೆ.

  • ಧನುಷ್​ ಸಿನಿ ಕರಿಯರ್​​​ನ ಅದ್ಧೂರಿ ಹೈ ಬಜೆಟ್​ ಸಿನಿಮಾ
  • 1930 ರ ಪೀರಿಯಡ್​​ ಡ್ರಾಮಾ ‘ಕ್ಯಾಪ್ಟನ್​​ ಮಿಲ್ಲರ್​​​​​’..!

ನ್ಯಾಷನಲ್​ ಅವಾರ್ಡ್​​ ವಿನ್ನರ್​​ ಧನುಷ್​​​ ಕ್ಯಾಪ್ಟನ್​ ಮಿಲ್ಲರ್​ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಹಾಲಿವುಡ್​​ನಲ್ಲೂ ಮಿಂಚಿದ ಮೋಸ್ಟ್​​ ಟ್ಯಾಲೆಂಟೆಡ್​ ಆ್ಯಕ್ಟರ್ ಧನುಷ್​ ಸಿನಿಕರಿಯರ್​​​ನ ಅದ್ಧೂರಿ ಸಿನಿಮಾ ಇದು. 1930 ರ ಕಾಲಘಟ್ಟದ ಕಥೆಯನ್ನು ನಿರ್ದೇಶಕ ಅರುಣ್​ ಮತೇಶ್ವರನ್​ ಹೇಳೊಕೆ ಹೊರಟಿದ್ದಾರೆ. ಇತ್ತೀಚೆಗೆ ಈ ಚಿತ್ರದ ಮುಹೂರ್ತ ಸಮಾರಂಭ ಅದ್ಧೂರಿಯಾಗಿ ನಡೆದಿತ್ತು. ಸದ್ಯ ಈ ಸಿನಿಮಾದಲ್ಲಿ ಶಿವಣ್ಣ ಆ್ಯಕ್ಟ್​ ಮಾಡೋ ಸುದ್ದಿ ಹೊಸ ಬಿರುಗಾಳಿ ಎಬ್ಬಿಸಿದೆ.

ಕ್ಯಾಪ್ಟನ್​ ಮಿಲ್ಲರ್​ ಚಿತ್ರದಲ್ಲಿ ದನುಷ್​ ಜೋಡಿಯಾಗಿ ಪ್ರಿಯಾಂಕ ಮೋಹನ್​ ಮಿಂಚಲಿದ್ದಾರೆ. ಜತೆಗೆ ಟಾಲಿವುಡ್​ ಸ್ಟಾರ್​ ನಟ ಸಂದೀಪ್​ ಕೃಷ್ಣನ್​ ಕೂಡ ಕಾಣಿಸಿಕೊಳ್ಳಲಿದ್ದಾರೆ. ಬಿಗ್​ ಸ್ಟಾರ್​ ಕಾಸ್ಟಿಂಗ್​​​ನಲ್ಲಿ ಮಿಲ್ಲರ್​ ಸಿನಿಮಾ ಸೌಂಡ್​ ಮಾಡಲಿದೆ. ಇನ್ನೂ ಈ ಚಿತ್ರದಲ್ಲಿ ಶಿವಣ್ಣನ ರೋಲ್​ ಏನು. ಯಾವ ಗೆಟಪ್​​ನಲ್ಲಿ ಕಾಣಿಸಿಕೊಳ್ತಾರೆ ಅನ್ನೋ ಕುತೂಹಲ ಮನೆ ಮಾಡಿದೆ.

ಬಹುಕೋಟಿ ವೆಚ್ಚದ ಕ್ಯಾಪ್ಟನ್​ ಮಿಲ್ಲರ್​ ಚಿತ್ರದಲ್ಲಿ ಸೆಂಚುರಿ ಸ್ಟಾರ್​ ಶಿವಣ್ಣ ಕಮಾಲ್​ ಮಾಡ್ತಾರಾ ಕಾದು ನೋಡ್ಬೇಕು. ಈಗಾಗ್ಲೇ ರಜನಿಕಾಂತ್​ ಜತೆಗೆ ಜೈಲರ್​​​ ಸಿನಿಮಾದಲ್ಲಿ ಶಿವಣ್ಣ ನಟಿಸೋದು ಕನ್ಫರ್ಮ್​ ಆಗಿದೆ. ಆದ್ರೆ, ತಲೈವಾ ಫಸ್ಟ್​ ಲುಕ್​​​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಶಿವಣ್ಣನ ಫಸ್ಟ್​​ ಲುಕ್​ ಪೋಸ್ಟರ್​ಗೆ ಫ್ಯಾನ್ಸ್​ ಕಾಯ್ತಿದ್ದ ಸದ್ಯದಲ್ಲೇ ಅಪ್ಟೇಟ್ಸ್​ ಸಿಗಲಿದೆ. ಎನಿವೇ ಟಾಲಿವುಡ್​, ಕಾಲಿವುಡ್​ನಲ್ಲೂ ಕನ್ನಡಿಗರು ಮ್ಯಾಜಿಕ್​ ಮಾಡ್ತಿರೋದು ಹೆಮ್ಮೆಯ ವಿಷ್ಯ.

ರಾಕೇಶ್ ಆರುಂಡಿ, ಫಿಲ್ಮ್​ ಬ್ಯೂರೋ, ಪವರ್ ಟಿವಿ

RELATED ARTICLES

Related Articles

TRENDING ARTICLES