Wednesday, January 22, 2025

ಹಿಜಾಬ್ ವಿದ್ಯಾರ್ಥಿನಿಯರು ಬಡವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದರು : ಯಶ್ ಪಾಲ್ ಸುವರ್ಣ

ವಿಜಯಪುರ : ದೇಶದ್ರೋಹಿ ಸಂಘಟನೆಗಳಿಗೆ ಬೇರೆ ವಿದ್ಯಾರ್ಥಿನಿ ಹೆಚ್ಚು ಮಾರ್ಕ್ಸ್ ಪಡೆಯುವ ಮೂಲಕ ಟಾಂಗ್ ಕೊಟ್ಟಿದ್ದಾಳೆ ಎಂದು ವಿಜಯಪುರದಲ್ಲಿ ಯಶ್ ಪಾಲ್ ಸುವರ್ಣ ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಿಂದ ಆರಂಭಿಕ ಜಯ ಸಿಕ್ಕಿದೆ. ಮುಂದೆಯು ಉತ್ತಮ ಆದೇಶ ಬರುವ ನಿರೀಕ್ಷೆ ಇದೆ, ಆದರೆ ಹಿಜಾಬ್ ವಿದ್ಯಾರ್ಥಿನಿಯರು ಬಡವಿದ್ಯಾರ್ಥಿಗಳ ದಿಕ್ಕು ತಪ್ಪಿಸಿದ್ದರು ಎಂದರು.

ಇನ್ನು, ಶಿಕ್ಷಣದ ವ್ಯವಸ್ಥೆ ಹಾಳು ಮಾಡಿದ್ದರು. 2004 ರಿಂದಲೂ ಆ ಕಾಲೇಜಿನಲ್ಲಿ ಶಿಸ್ತು ಇತ್ತು. ಇದಕ್ಕಾಗಿ ಡ್ರೆಸ್ ಕೋಡ್ ಮಾಡಿದೆವು. ಅಲ್ಲಿಂದ ಕಳೆದ ಡಿಸೆಂಬರ್‌ ವರೆಗೆ ಯಾವುದೇ ಸಮಸ್ಯೆ ಇರಲಿಲ್ಲ. ಬಳಿಕ ಹಿಬಾಜ್ ವಿದ್ಯಾರ್ಥಿನಿಯರ ನಾಟಕದಿಂದ ಇಷ್ಟೆಲ್ಲ ಸಮಸ್ಯೆ ಆಗಿದೆ. ಮಕ್ಕಳ ಜೀವನದಲ್ಲಿ ಅವರು ಚೆಲ್ಲಾಟ ಆಡಿದ್ದಾರೆ ಎಂದು ಹೇಳಿದರು.

ಅದಲ್ಲದೇ, ವಿದ್ಯಾರ್ಥಿನಿಯರಿಗೆ ಟೆರರ್ ಲಿಂಕ್ ಇರುವ ಬಗ್ಗೆ ನಾನು ಮಾತನಾಡಿದ್ದೆ. ಇವರಿಗೆ ಸಪೋರ್ಟ್ ನೀಡಿದವರೆಲ್ಲ ಈಗ ಜೈಲಲ್ಲಿದ್ದಾರೆ. ದೇಶದ್ರೋಹಿ ಸಂಘಟನೆಗಳಿಗೆ ಬೇರೆ ವಿದ್ಯಾರ್ಥಿನಿ ಹೆಚ್ಚು ಮಾರ್ಕ್ಸ್ ಪಡೆಯುವ ಮೂಲಕ ಟಾಂಗ್ ಕೊಟ್ಟಿದ್ದಾಳೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES