ನವದೆಹಲಿ : ಹಿಜಾಬ್ ಪರ ಹಕ್ಕು ಮಂಡಿಸಿದ್ದ ವಿದ್ಯಾರ್ಥಿನಿಯರ ವಾದ ಪುರಸ್ಕರಿಸಲಿದೆಯೇ ಎಂಬ ಕುತೂಹಲ ಮೂಡಿದ್ದು, ಬೆಳಿಗ್ಗೆ 10:30ಕ್ಕೆ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಲಿದೆ.
ಜಸ್ಟೀಸ್ ಹೇಮಂತ್ ಗುಪ್ತಾ ಹಾಗೂ ಜಸ್ಟೀಸ್ ಸುಧಾಂಶು ದುಲಿಯಾ ನೇತೃತ್ವದ ಪೀಠದಿಂದ ತೀರ್ಪು ಹೊರಡಲಿದ್ದು, ಸತತ ಹತ್ತು ದಿನಗಳ ಕಾಲ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠ ಫೆಬ್ರವರಿ 5ರಂದು ಹಿಜಾಬ್ ಕಡ್ಡಾಯವಲ್ಲವೆಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು, ಹಿಜಾಬ್ ವಿಚಾರವಾಗಿ ಹೈಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಒಟ್ಟು 23 ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದವು. ಹೈಕೋರ್ಟ್ ಆದೇಶ ಪ್ರಶ್ನಿಸಿ ಮುಸ್ಲಿಂ ಅರ್ಜಿದಾರರ ಪರ 21 ಮಂದಿ ವಕೀಲರು ವಾದ ಮಂಡನೆ ಮಾಡಿದ್ರು. ಮುಸ್ಲಿಂ ಅರ್ಜಿದಾರರ ಪರ ಹಾಜರಾಗಿದ್ದ ವಕೀಲ ಹುಜೆಫಾ ಅಹ್ಮದ್, ಹಿರಿಯ ವಕೀಲರಾದ ದುಷ್ಯಂತ್ ದವೆ, ರಾಜೀವ್ ಧವನ್, ದೇವದತ್ ಕಾಮತ್, ಸಲ್ಮಾನ್ ಖುರ್ಷಿದ್, ಮೀನಾಕ್ಷಿ ಅರೋರಾ ಮತ್ತು ಸಂಜಯ್ ಹೆಗ್ಡೆ, ಮುಸ್ಲಿಂ ಅರ್ಜಿದಾರರ ಪರ ವಾದ ಮಂಡಿಸಿದ 21 ವಕೀಲರಲ್ಲಿ ಪ್ರಮುಖರು, ತಮ್ಮ ಪ್ರತಿಪಾದನೆಗಳಲ್ಲಿ ಜಾತ್ಯತೀತದ ಚರ್ಚೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಆಯ್ಕೆ, ಧಾರ್ಮಿಕ ಆಚರಣೆಯ ಸಾಂವಿಧಾನಿಕ ಸವಲತ್ತುಗಳನ್ನು ಉಲ್ಲೇಖಿಸಿದ್ರು.
ಹಿಜಾಬ್ ಅಗತ್ಯ ಧಾರ್ಮಿಕ ಆಚರಣೆ ಅಲ್ಲದಿದ್ದರೂ ಅದು ಆಯ್ಕೆಯ ವಿಷಯ ಎಂದು, ಹಿಜಾಬ್ ಕುರಿತಾದ ಕುರಾನ್ ಸಾಲುಗಳನ್ನು ಮುಂದಿಡಲಾಗಿತ್ತು. ಇನ್ನೂ ರಾಜ್ಯ ಸರ್ಕಾರ, ಕಾಲೇಜು, ಶಿಕ್ಷಕರ ಪರವಾಗಿ ಸಮವಸ್ತ್ರ ನೀತಿಯನ್ನು ಸಮರ್ಥಿಸಿ 6 ಮಂದಿ ವಕೀಲರಿಂದ ವಾದ ಮಂಡನೆ ಕರ್ನಾಟಕ ಸರ್ಕಾರದ ಪರ ಮೂವರು ವಕೀಲರು ವಾದ ಮಂಡಿಸಿದ್ರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯ ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವಡಗಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರು ವಾದ ಮಂಡಿಸಿದ್ದು, ಸರ್ಕಾರ ಫೆ. 5ರಂದು ಹೊರಡಿಸಿದ ಆದೇಶವನ್ನು ಸಮರ್ಥಿಸಿಕೊಳ್ಳಲಾಗಿತ್ತು. ಸರ್ಕಾರದ ಆದೇಶದಲ್ಲಿ ಸೂಚಿಸಿದ ಸಮವಸ್ತ್ರಗಳ ಕಡ್ಡಾಯ ಪಾಲನೆಯನ್ನು ನಿರ್ದೇಶಿಸಲಾಗಿದೆಯೇ ವಿನಾ, ಹಿಜಾಬ್ ಬಗ್ಗೆ ಹೇಳಿಲ್ಲ ಎಂದು ಉಲ್ಲೇಖಿಸಲಾಗಿದೆ.
ಅದಲ್ಲದೇ, ಶಿಕ್ಷಕರ ಪರವಾಗಿ ವಕೀಲರಾದ ಆರ್. ವೆಂಕಟರಮಣಿ, ಡಿ.ಎಸ್. ನಾಯ್ಡು ಮತ್ತು ವಿ. ಮೋಹನ ಹಾಜರಾಗಿದ್ದು. ಶಿಕ್ಷಣ ಸಂಸ್ಥೆಗಳು ತಮ್ಮ ಧಾರ್ಮಿಕ ನಂಟನ್ನು ಪ್ರದರ್ಶಿಸುವ ವೇದಿಕೆ ಅಲ್ಲ. ಜ್ಞಾನ ಸಂಪಾದನೆಯಲ್ಲಿ ಧರ್ಮದಿಂದ ಮುಕ್ತವಾದ ವಾತಾವರಣ ಹೆಚ್ಚು ಮುಖ್ಯವಾಗಿದೆ ಅಂತಾ ಅಭಿಪ್ರಾಯ ತಿಳಿಸಿದ್ರು,