Sunday, December 22, 2024

ಮಾಂಸದಂಗಡಿಯಲ್ಲಿ ಅನುಮಾನಾಸ್ಪದ ಸಾವು; ಕೊಲೆಯ ಶಂಕೆ.!

ಹುಬ್ಬಳ್ಳಿ: ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೊಬ್ಬ ಮಟನ್ ಅಂಗಡಿಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಹಳೇಹುಬ್ಬಳ್ಳಿಯ ಮೆಹಬೂಬ್ ನಗರದಲ್ಲಿ ನಡೆದಿದೆ.

ಅಶ್ವಾಕ್ ಬೇಪಾರಿ (40) ಮೃತ ವ್ಯಕ್ತಿಯಾಗಿದ್ದು, ನಿನ್ನೆ ಹುಬ್ಬಳ್ಳಿಯ ಮೇಹಬೂಬ ನಗರದಲ್ಲಿನ ಬೆಪಾರಿ ಎಂಬುವರ ಮನೆಗೆ ಬಂದಿದ್ದ ನಿನ್ನೆವರೆಗೂ ಚೆನ್ನಾಗಿಯೇ ಇದ್ದ ವ್ಯಕ್ತಿ, ಇಂದು ಮಧ್ಯಾಹ್ನ ಸಂಬಂಧಿಕರ ಮಟನ್ ಅನಗಡಿಯಲ್ಲಿಯೇ ಅನುಮಾನಾಸ್ಪದವಾಗಿ ರಕ್ತದ ಮಡುವಿನಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ.

ಮೂಲತಃ ಬೈಲಹೊಂಗಲದ ಬೆಳವಡಿ ಗ್ರಾಮದವನಾದ ಈತ ಹುಬ್ಬಳ್ಳಿಯಲ್ಲಿ ಮಾಂಸದ ವ್ಯಾಪಾರ ನಡೆಸುತ್ತಿದ್ದ, ಆದರೆ ನಿನ್ನೆ ಊರಿಂದ ಬಂದಿದ್ದ ಅಶ್ವಾಕ್ ಇಂದು ಹೆಣವಾಗಿದ್ದಾನೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಸ್ಥಳಕ್ಕೆ ಈಗಾಗಲೇ ಅಪರಾಧ ವಿಭಾಗದ ಡಿಸಿಪಿ ಗೋಪಾಲ ಬ್ಯಾಕೋಡ್ ಹಾಗೂ ಹಳೆಹುಬ್ಬಳ್ಳಿ ಠಾಣೆಯ ಪೋಲಿಸರು ಭೇಟಿ ನೀಡಿದ್ದು ಪರಿಶೀಲನೆ ಕೈಗೊಂಡಿದ್ದು, ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

RELATED ARTICLES

Related Articles

TRENDING ARTICLES