Monday, December 23, 2024

ಯಕ್ಷಗಾನ‌ ಕಲಾವಿದನಾಗಿ ಮಿಂಚಿದ ನಟ ರಮೇಶ್ ಅರವಿಂದ್

ಬೆಂಗಳೂರು: ಮಲೆನಾಡು ಹಾಗೂ ಉತ್ತರ ಕನ್ನಡ ಭಾಗದಲ್ಲಿ ಫೇಮಸ್​ ಇರುವ ಯಕ್ಷಗಾನ ವೇಷದಲ್ಲಿ ಇತ್ತೀಚಿಗೆ ಸಚಿವ ಡಾ.ಕೆ ಸುಧಾಕರ್​ ಅವರು ತೊಟ್ಟು ಮಿಂಚಿದ್ದರು. ಈಗ ನಟ ರಮೇಶ್ ಅರವಿಂದ್ ಅವರು ಯಕ್ಷಗಾನ‌ ಕಲಾವಿದನಾಗಿ ಮಿಂಚಿದ್ದಾರೆ.

ಸದಾ ಯಶಸ್ಸಿನ ಬದುಕಿನ ಪಾಠ ಹೇಳುವ ರಮೇಶ್​ ಅವರವಿಂದ್​ ಅವರು, ನಟನೆ, ನಿರೂಪಣೆ, ನಿರ್ದೇಶನದ ಜೊತೆ ಜೊತೆಗೆ ಯಕ್ಷಗಾನದಂತಹ ಅಪರೂಪದ ಕಲೆಗಳಿಗೂ ಪ್ರೋತ್ಸಾಹ ನೀಡುತ್ತಾರೆ.

ಇತ್ತೀಚೆಗೆ ಉಡುಪಿಯಲ್ಲಿ ಡಾ. ಶಿವರಾಮ ಕಾರಂತ ಪ್ರಶಸ್ತಿಗೆ ಭಾಜನರಾದ ರಮೇಶ್​, ಅದಾದ ಬಳಕ ಅಲ್ಲೇ ಯಕ್ಷಗಾನ ಕಲಾವಿದನ ಕಾಸ್ಟ್ಯೂಮ್ ಧರಿಸಿ, ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಸದ್ಯ ಆದರಲ್ಲಿ ಭಾಗಿಯಾದ ಫೋಟೋಸ್ ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ರಮೇಶ್​ ಅವರವಿಂದ್​ ಅವರು ಇತ್ತೀಚಿಗೆ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್​ ನೀಡಿ ಗೌರವಿಸಲಾಗಿತ್ತು.

RELATED ARTICLES

Related Articles

TRENDING ARTICLES