Sunday, December 22, 2024

ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ : ನಳಿನ್‌ ಕುಮಾರ್‌ ಕಟೀಲ್‌

ಧಾರವಾಡ : ನಾವು ಪಾದಯಾತ್ರೆ ಮಾಡಿಯೇ ಅಧಿಕಾರಕ್ಕೆ ಬಂದಿದ್ದೇವೆ ಎಂದು ಧಾರವಾಡದಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಭಿಕ್ಷೆ ಬೇಡಿ, ಕಾಲು ಹಿಡಿದು ಸಿಎಂ ಆದರು, ಮೊದಲು ಇಂದಿರಾ ಗಾಂಧಿಯನ್ನು ನಿಂದಿಸುತ್ತಿದ್ರು, ಕೊನೆಗೆ ಸೋನಿಯಾ ಗಾಂಧಿ ಕಾಲು ಹಿಡಿದು ಸಿಎಂ ಆದವರು, ಯಡಿಯೂರಪ್ಪ ಸೈಕಲ್‌ ಯಾತ್ರೆ ಮಾಡಿದ್ದಾರೆ ಎಂದರು.

ಇನ್ನು, ಅವರಷ್ಟು ಯಾರಿಗೂ ಯಾತ್ರೆ ಮಾಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ. ಮೋದಿ ಎದುರು ರಾಹುಲ್‌ ಗಾಂಧಿ ಸಣ್ಣ ಹುಡುಗ. ನಮಗೆ ವಯಸ್ಸಾದಷ್ಟು BSYಗೆ ರಾಜಕೀಯ ಅನುಭವ ಇದೆ. ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ಳಬೇಕು. ನಮಗೆ ಸಿದ್ದರಾಮಯ್ಯರನ್ನ ಕಂಡರೆ ಭಯವಿಲ್ಲ. ಡಿಕೆಶಿ, ಖರ್ಗೆ, ಪರಮೇಶ್ವರ್‌ಗೆ ಬಿಜೆಪಿ ಕಂಡರೆ ಭಯವಾಗಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES