Sunday, December 22, 2024

ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಜಾಮೀನು

ಬೆಂಗಳೂರು: ಮೂರು ವರ್ಷಕ್ಕಿಂತ ಕಡಿಮೆ ಶಿಕ್ಷೆಯಾಗಿರುವ ಹಿನ್ನೆಲೆಯಲ್ಲಿ ಚಿಕ್ಕಪೇಟೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ಗೆ ಜಾಮೀನು ದೊರೆತಿದೆ.

ಚುನಾವಣೆ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ಆರೋಪದ ಮೇಲೆ ಬಿಜೆಪಿ ಶಾಸಕನಿಗೆ 2 ತಿಂಗಳು ಜೈಲು ಹಾಗೂ 10 ಸಾವಿರ ರೂ ದಂಡ ವಿಧಿಸಿ ಜನಪ್ರತಿನಿಧಿಗಳ ಕೋರ್ಟ್ ತೀರ್ಪು ನೀಡಿತ್ತು.

ಈ ಬೆನ್ನಲ್ಲೆ ಬಿಜೆಪಿ ಶಾಸಕ ಉದಯ್ ಗರುಡಾಚಾರ್​ ಜಾಮೀನು ಮೊರೆ ಹೋಗಿದ್ದರು. ಈಗ ಬೆಂಗಳೂರಿನ 42 ನೇ ಎಸಿಎಂಎಂ ಕೋರ್ಟ್​ 25 ಸಾವಿರ ರೂಪಾಯಿ ಬಾಂಡ್ ಶ್ಯೂರಿಟಿ ಒದಗಿಸಿ, ಜಾಮೀನು ನೀಡಿದೆ.

ಶಾಸಕರ ವಿರುದ್ಧ ಹೆಚ್.ಜಿ ಪ್ರಶಾಂತ್ ಎಂಬುವರು ದೂರು ದಾಖಲಿಸಿದ್ದರು. 2 ಕ್ರಿಮಿನಲ್ ಪ್ರಕರಣಗಳಾದ ಮೇವರಿಕ್ ಹೋರ್ಡಿಂಗ್ಸ್ ನಿರ್ಮಾಣಕ್ಕೆ ಜಮೀನು ಪಡೆದಿದ್ದ ಉದ್ದೇಶಕ್ಕೆ ಬಳಸಿಕೊಳ್ಳದೆ ಪಾರ್ಕಿಂಗ್ ಲಾಟ್ ಮಾಡಿ ಜಾಗ ದುರ್ಬಳಕೆ ಹಾಗೂ ಕಂಪನಿಯ ಹುದ್ದೆಯ ಮಾಹಿತಿ ಮುಚ್ಚಿಟ್ಟ ಆರೋಪದ ಮೇಲೆ ಜನಪ್ರತಿನಿಧಿಗಳ ಕಾಯ್ದೆ ಸೆ.125 ಎ ಅಡಿ ಆರೋಪ ಸಾಬೀತು ಆಗಿತ್ತು.

RELATED ARTICLES

Related Articles

TRENDING ARTICLES