Monday, December 23, 2024

ಬಾಲಿಕಿ ಹತ್ಯೆ; ಆರೋಪಿಗೆ ಮರೆಯಲಾಗದ ಶಿಕ್ಷೆಯಾಗಬೇಕು ಸಂಸದೆ ಸುಮಲತಾ ಆಗ್ರಹ

ಬೆಂಗಳೂರು: ಪುಟ್ಟ ಬಾಲಕಿ ಮೇಲೆ ಅಮಾನುಷ ಕೃತ್ಯ ಎಸಗಿರುವ ಅಪರಾಧಿಗೆ ಕಾನೂನು ಅಡಿ ಯಾವ ಶಿಕ್ಷೆಯು ಕಡಿಮೆ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್​ ಅವರು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮಳ್ಳವಳ್ಳಿ ಪಟ್ಟಣದಲ್ಲಿ ಟ್ಯೂಶನ್‌ಗೆಂದು ಬಂದಿದ್ದ 10 ವರ್ಷದ ವಿದ್ಯಾರ್ಥಿಯನ್ನು ಟ್ಯೂಶನ್‌ ಸೆಂಟರ್‌ನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯೇ ಕೊಲೆ ಮಾಡಿ ಶವವನ್ನು ನಿರ್ಮಾಣ ಹಂತದ ಕಟ್ಟದ ನೀರಿನ ಸಂಪ್‌ನಲ್ಲಿ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಟ್ವೀಟ್​ ಮಾಡಿದ ಸುಮಲತಾ ಅಂಬರೀಶ್​, ಬಾಲಿಯನ್ನ ಹತ್ಯಾಚಾರ ಮಾಡಿ ಕೊಲೆಗೈದ ಅಪರಾಧಿಗೆ ಕಾನೂನಿನಲ್ಲಿ ಕೊಡಬಹುದಾದ ಅತ್ಯಂತ ಕಠಿಣ ಶಿಕ್ಷೆ ಅತಿ ಶೀಘ್ರದಲ್ಲಿ ಕೊಡುವಂತೆ ಪೊಲೀಸ್ ಮತ್ತು ನ್ಯಾಯಾಂಗದ ಮೂಲಕ ತೆಗೆದುಕೊಳ್ಳಬೇಕಾದ ಎಲ್ಲಾ ಕ್ರಮಗಳಿಗೆ ನಾನು ಬದ್ಧಳಾಗಿದ್ದೇನೆ. ಈ ಅಪರಾಧಿಗೆ ಸಿಗುವ ಶಿಕ್ಷೆ ಎಲ್ಲರಿಗೂ ಎಚ್ಚರಿಕೆಯಾಗಿರಬೇಕು, ಸಮಾಜಘಾತುಕರಿಗೆ ಒಂದು ಮರೆಯಲಾಗದ ಪಾಠವಾಗಬೇಕು ಎಂದಿದ್ದಾರೆ.
ಇಂತಹ ಘೋರ ಕೃತ್ಯಗಳು ಇನ್ನು ಮುಂದೆ ಆಗದಂತೆ ತಡೆಯುವುದರಿಂದ ಮಾತ್ರ ನಾವು ಆಕೆಯ ಆತ್ಮಕ್ಕೆ ಶಾಂತಿ ಕೋರಲು ಸಾಧ್ಯ. ಸಮಾಜವೇ ತಲೆ ತಗ್ಗಿಸುವಂತಹ ಈ ಕೃತ್ಯ ನನ್ನ ಮನಸ್ಸನ್ನು ಛಿದ್ರಗೊಳಿಸಿದೆ. ಯಾವ ತಂದೆ ತಾಯಿಗೂ ಬರಬಾರದ ನೋವು ಸಹಿಸಿಕೊಳ್ಳುವುದಾದರು ಹೇಗೆ ಎಂದು ಆತಂಕ ವ್ಯಕ್ತಪಡಿಸಿದರು.

RELATED ARTICLES

Related Articles

TRENDING ARTICLES