ತೀರ್ಥಹಳ್ಳಿ : ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರತ್ನಾಕರ್ ಶಿವಮೊಗ್ಗ ಜಿಲ್ಲೆಯ ಮೇಲಿನ ಕುರುವಳ್ಳಿ ಕಲ್ಲು ಕುಟಿಕರ ಸಹಕಾರ ಸಂಘದ ಸಭೆ ನಡೆಸಿ, ಬಳಿಕ ಬಂಡೆ ಕಾರ್ಮಿಕರೊಂದಿಗೆ ವೀಕ್ಷಿಸಲು ಬಂಡೆ ಪ್ರದೇಶ ವೀಕ್ಷಣೆಗೆ ಬಂದಿದ್ರು. ಅದೇ ಸಮಯದಲ್ಲಿ ಇಲಾಖೆ ಅಧಿಕಾರಿಗಳಾದ ಅವಿನಾಶ್, ವಿಂಧ್ಯಾ ಬಂದಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಗಳವಾರ ರಾತ್ರಿ ಬಂಡೆ ಪ್ರದೇಶಕ್ಕೆ ಅಧಿಕಾರಿಗಳು ಟ್ರಂಚ್ ಹೊಡೆದು, ಸ್ಥಳೀಯರಿಗೆ ಕಿರುಕುಳ ಕೊಟ್ಟಿದ್ರಂತೆ. ಈ ವಿಚಾರವಾಗಿ ಅಧಿಕಾರಿಗಳ ವಿರುದ್ಧ ಕಿಮ್ಮನೆ ಆಕ್ರೋಶ ಹೊರಹಾಕಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು ಕಾನೂನಿನಂತೆ ಕೆಲಸ ಮಾಡುತ್ತಿದ್ದೇವೆ ಎಂದ್ರು. ಈ ಸಂದರ್ಭದಲ್ಲಿ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ತೀರ್ಥಹಳ್ಳಿ ಠಾಣೆ ಪೊಲೀಸರು ಬಂದು ವಾತಾವರಣ ತಿಳಿಗೊಳಿಸಿದ್ರು.