Wednesday, January 22, 2025

ನಾಳೆ ಹಿಂದಿಯಲ್ಲಿ ‘ಕಾಂತಾರ’ ರಿಲೀಸ್​​​

ಕನ್ನಡದ ಕಾಂತಾರ ಸಿನಿಮಾ ನಾಳೆಯಿಂದ ಹಿಂದಿಯಲ್ಲಿ 2500 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.

KGF ನಂತರ ಕನ್ನಡದ ಮತ್ತೊಂದು ಸಿನಿಮಾ ಈ ಪ್ರಮಾಣದ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿರುವುದು ಸಹಜವಾಗಿಯೇ ಬಿಟೌನ್ ನಿದ್ದೆ ಕೆಡಿಸಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಬಾಲಿವುಡ್, ದಕ್ಷಿಣದ ಸಿನಿಮಾಗಳ ಆರ್ಭಟಕ್ಕೆ ಸುಸ್ತಾಗಿದೆ.

ಈಗಾಗಲೇ KGF ಸಿನಿಮಾದ ಮೂಲಕ ಗೆಲುವಿನ ರುಚಿಕಂಡಿರುವ ಹೊಂಬಾಳೆ ಫಿಲಮ್ಸ್​​​​​​​, ಕಾಂತಾರದ ಮೂಲಕ ಮತ್ತೊಂದು ಗೆಲುವಿಗೆ ಸಿದ್ಧತೆ ಮಾಡಿಕೊಂಡಿದೆ. ಕನ್ನಡದಲ್ಲಿ ಕಾಂತಾರ ನಿರೀಕ್ಷೆಗೂ ಮೀರಿ ಯಶಸ್ಸು ಗಳಿಸಿದೆ. ಸಿನಿಮಾ ಬಿಡುಗಡೆಯಾಗಿ ಎರಡು ವಾರಗಳು ಕಳೆಯುತ್ತಿದ್ದರೂ, ಇವತ್ತಿಗೂ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಸದ್ಯದಲ್ಲೇ ನೂರು ಕೋಟಿ ಕ್ಲಬ್ ಸೇರುವ ಸಿನಿಮಾವಾಗಿಯೂ ಹೊರ ಹೊಮ್ಮಲಿದೆ. ನಾಳೆ ಹಿಂದಿಯಲ್ಲಿ, 15 ರಂದು ತೆಲುಗಿನಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿದೆ. ತೆಲುಗಿಗಿಂತ ಹಿಂದಿಯಲ್ಲೇ ಅಧಿಕ ಸಂಖ್ಯೆಯಲ್ಲಿ ಚಿತ್ರಮಂದಿರಗಳು ಸಿಕ್ಕಿವೆ.

RELATED ARTICLES

Related Articles

TRENDING ARTICLES