Saturday, January 18, 2025

ಕಂಠೀರವ ಟು ವೀರೇಶ್ ಡಾನ್ ಡಾಲಿ ಗ್ಯಾಂಗ್ ಸೈಕಲ್ ರ‍್ಯಾಲಿ..!

ಭೂಗತ ಲೋಕದ ಪಾತಕಿಗಳ ರೋಚಕ ಕಹಾನಿ ಹೆಡ್​​ಬುಷ್​​​​ ಚಿತ್ರ. ಇಲ್ಲಿವರೆಗೂ ಕಾರ್​ನಲ್ಲಿ ಪ್ರಚಾರ ಗಿಟ್ಟಿಸುತ್ತಿದ್ದ ಡಾನ್​ಗಳು, ಧೀಡೀರ್​​​ ಸೈಕಲ್​ ಏರಿ ಬೆಂಗಳೂರು ಸುತ್ತುತ್ತಿದ್ದಾರೆ. ಯೆಸ್​​.. ಅಂಡರ್​ವರ್ಲ್ಡ್​​ ಡಾನ್​ಗಳ ಅಬ್ಬರಕ್ಕೆ ಥಂಡಾ ಹೊಡೆದಿದ್ದ ಎದುರಾಳಿಗಳ ಎಚ್ಚರಿಸೋಕೆ ಹೆಡ್​​ಬುಷ್​ ಟೀಮ್​​ ಭರ್ಜರಿ ಪ್ರಚಾರ ಗಿಟ್ಟಿಸ್ತಿದೆ. ಹೇಗಿತ್ತು ಹೆಡ್​ಬುಷ್​ ಸೈಕಲ್​ ಱಲಿ ಆಂತೀರಾ..? ನೀವೇ ಓದಿ.

  • ಅಪ್ಪು, ಅಂಬಿ, ಅಣ್ಣಾವ್ರ ಸಮಾಧಿಗೆ ಹೆಡ್​ಬುಷ್​​ ಟೀಮ್​​ ವಿಸಿಟ್​​

ಹೆಡ್​ಬುಷ್​ ಸಿನಿಮಾ ಸೆಟ್ಟೇರಿದ ದಿನದಿಂದ್ಲೇ ಸಿಕ್ಕಾಪಟ್ಟೆ ಕ್ರೇಜ್​ ಕ್ರಿಯೇಟ್​ ಮಾಡಿದೆ. ಆ ದಿನಗಳು ಚಿತ್ರದ ಸಕ್ಸಸ್​ ನಂತ್ರ ಅಗ್ನಿ ಶ್ರೀಧರ್ ತಮ್ಮ​​​ ರಕ್ತ ಲೇಖನಿಯಲ್ಲಿ ಡಾನ್​ ಜಯರಾಜ್​​ ರಕ್ತ ಚರಿತ್ರೆಯನ್ನು ಹೇಳೋಕೆ ಹೊರಟಿದ್ದಾರೆ. ಹೀಗಾಗ್ಲೇ ಹೆಡ್​ಬುಷ್​​​​ ಚಿತ್ರದ ರೌಡಿಗಳು ಗಲ್ಲಿ ಗಲ್ಲಿಗಳಲ್ಲಿ ಡಿಫರೆಂಟ್​ ಪ್ರಚಾರದಲ್ಲಿ ಮುಳುಗಿದ್ದಾರೆ.

ಬಂಡಿ ಮಾಕಾಳಮ್ಮನ ಆಶೀರ್ವಾದ ಪಡೆದು ಪ್ರಮೋಷನ್ಸ್​​​​​ಗೆ ಕಿಕ್​ಸ್ಟಾರ್ಟ್​ ಕೊಟ್ಟಿದ್ದ ಹೆಡ್​​ಬುಷ್​ ಟೀಮ್​ ನಗರದಾದ್ಯಂತ ಪ್ರಚಾರದಲ್ಲಿ ತೊಡಗಿದ್ದಾರೆ. ಟಗರು ಡಾಲಿ ಡಾನ್​ ಜಯರಾಜ್​​ ಗೆಟಪ್​​ನಲ್ಲಿ ದುಬೈ ಮಣ್ಣಿಗೂ ಕಾಲಿಟ್ಟು ಶೇಕ್​​​ಗಳಿಗೆ ಶೇಕ್​ ಹ್ಯಾಂಡ್​ ಮಾಡಿದ್ದಾರೆ. ಅಂತೂ ಹೆಡ್​​ಬುಷ್​​ ಟೀಮ್​ ಚಿತ್ರತಂಡದ ಪ್ರಚಾರ ನೋಡಿದ್ರೆ ಸಿನಿಮಾ ಸಿಲ್ವರ್ ಸ್ಕ್ರೀನ್​​​ ಮೇಲೆ ಕಮಾಲ್​ ಮಾಡೋ ಭರವಸೆ ಮೂಡಿಸಿದೆ.

ಫಿಲ್ಮ್​ ಫೇರ್​​ ಅವಾರ್ಡ್​ಗೂ ಡಾನ್​ ಜಯರಾಜ್​ ಗೆಟಪ್​ನಲ್ಲಿ ಬಂದಿದ್ದ ಡಾಲಿ ಸರ್​ಪ್ರೈಸ್​ ಕೊಟ್ಟಿದ್ರು. ಇನ್ನು ಸಿಲಿಕಾನ್​ ಸಿಟಿ ಸುತ್ತಾ ಹೆಟ್​​ಬುಷ್​​ ಅಂಬಾಸಿಡರ್​ ಕಾರ್​ಗಳು ಸುತ್ತಾಟ ನಡೆಸಿವೆ. ಇಲ್ಲಿವರೆಗೂ ಎಲ್ಲಾ ಕಡೆ ಅಂಬಾಸಿಡರ್​ ಕಾರ್​​​ನಲ್ಲೇ ಅಲೆದಾಡುತ್ತಿದ್ದ ರೌಡಿಗಳು ಮೊದಲ ಬಾರಿ ಕಾರ್​ ಬಿಟ್ಟು ಸೈಕಲ್​ ಏರಿದ್ದಾರೆ.

ಕಂಠೀರವ ಸ್ಟೂಡಿಯೋದಲ್ಲಿ ಅಪ್ಪು ಅಣ್ಣಾವ್ರು, ಅಂಬಿ ಸಮಾಧಿಗೆ ಭೇಟಿ ಕೊಟ್ಟ ಹೆಡ್​ಬುಷ್​ ಟೀಮ್​​​​​ ವೀರೇಶ್​ ಥಿಯೇಟರ್​ವರೆಗೂ ಸೈಕಲ್​ ಱಲಿ ನಡೆಸಿದ್ದಾರೆ. ರಸ್ತೆಗಳಲ್ಲಿ ರೌಡಿಗಳನ್ನು ಕಂಡ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ಇನ್ನೂ ಅಪ್ಪು ಸಮಾದಿಗೆ ಪೂಜೆ ಸಲ್ಲಿಸಿ ಮಾತನಾಡಿದ ಡಾಲಿ ಡಿಫರೆಂಡ್​​  ಪ್ರಚಾರದ ಟ್ರಿಕ್ಸ್​​​ ಬಗ್ಗೆ ಮಾತನ್ನಾಡಿದ್ರು.

ಚಿತ್ರದಲ್ಲಿ ಡಾಲಿ ಜತೆ ರೌಡಿ ಗ್ಯಾಂಗ್​ನಲ್ಲಿ ಮಿಂಚಿಲಿರುವ ರಘು ಮುಖರ್ಜಿ ಕೂಡ ಮಾತನಾಡಿ, ತುಂಬಾ ಖುಷಿಯಾಗ್ತಿದೆ. ಅಪ್ಪು ಆಶೀರ್ವಾದ ಪಡೆದು ಚಿತ್ರಕ್ಕೆ ಚಾಲನೆ ಕೊಟ್ಟಿದ್ದೇವೆ. ಯಾರಿಗೂ ಕೆಟ್ಟದ್ದು ಬಯಸಿದೋರಲ್ಲ ಅವ್ರು. ಅವರ ಸನ್ನಿಧಿಯಿಂದ ಸೈಕಲ್​ ಱಲಿ ಹೊರಟಿರೋದು ಖುಷಿಯಾಗ್ತಿದೆ ಎಂದ್ರು.

  • ಬೆಣ್ಣೆ ನಗರಿಯಲ್ಲಿ ಹೆಡ್​​​​ಬುಷ್​​​​​​​​​​ ಇವೆಂಟ್.. ರಮ್ಯಾ- ರಚ್ಚು ರಂಗು
  • ಒಂದೇ ವೇದಿಕೆಯಲ್ಲಿ ಡಾಲಿ ಜತೆ ಹೆಜ್ಜೆ ಹಾಕ್ತಾರಾ ಬ್ಯೂಟಿ ಕ್ವೀನ್ಸ್​​​..?

ರೆಟ್ರೋ ಕಾಲದ ಕಥೆಗೆ ರೆಟ್ರೋ ಸ್ಟೈಲ್​ನಲ್ಲೇ ಪ್ರಮೋಷನ್ ಪ್ಲಾನ್​​​ ಮಾಡಿದೆ ಚಿತ್ರತಂಡ. ಎಲ್ಲೇ ಹೋದ್ರೂ ಡಾಲಿ ಮಾತ್ರ ಬೆಲ್​ ಬಾಟಮ್​ ಪ್ಯಾಂಟ್​​ನಲ್ಲೇ ಮಿಂಚ್ತಿದ್ದಾರೆ. ಅಕ್ಟೋಬರ್​​ 21ಕ್ಕೆ ತೆರೆಗೆ ಬರೋಕೆ ತುದಿಗಾಲಲ್ಲಿ ನಿಂತಿರೋ ಹೆಡ್​​ಬುಷ್​ ಟೀಮ್​ ಅದ್ಧೂರಿ ಪ್ರೀ ರಿಲೀಸ್​ ಇವೆಂಟ್​​ಗೂ ಪ್ಲಾನ್​ ಮಾಡಿಕೊಂಡಿದೆ.

ಈಗಾಗ್ಲೇ ಹಬೀಬಿ ಸಾಂಗ್​​ ಯ್ಯುಟ್ಯೂಬ್​ನಲ್ಲಿ ಹಲ್​ಚಲ್​ ಎಬ್ಬಿಸ್ತಿದೆ. ತೆಲುಗು ಪಿಲ್ಲಾ ಪಾಯಲ್​ ರಜಪೂತ್​​ ಬಿಂದಾಸ್​ ಸ್ಟೆಪ್ಸ್​​ ನೋಡಿ ಪಡ್ಡೆ ಹೈಕಳು ಚಿಲ್​ ಆಗಿದ್ದಾರೆ. ಇನ್ನೆನಿದ್ರು ಸಿಲ್ವರ್​ ಸ್ಕ್ರೀನ್​ ಮೇಲೆ ಹಬೀಬಿ ಐಟಂ ಸಾಂಗ್​ ನೋಡಿ ಕಣ್ತುಂಬಿಕೊಳ್ಳೋಣ ಎಂದುಕೊಂಡವ್ರಿಗೆ ಮತ್ತೊಂದು ಸರ್​ಪ್ರೈಸ್​ ಸಿಕ್ಕಿದೆ.

ಯೆಸ್​​.. ಬೆಣ್ಣೆ ನಗರಿ ದಾವಣಗೆರೆಯಲ್ಲಿ ಅಕ್ಟೋಬರ್​ 16 ರಂದು ಹೆಡ್​ಬುಷ್​​ ಚಿತ್ರದ ಅದ್ಧೂರಿ ಪ್ರೀ ರಿಲೀಸ್​ ಇವೆಂಟ್​ ನಡಿಯಲಿದೆ. ವಿಷ್ಯ ಇದಲ್ಲ. ಈ ರಂಗು ರಂಗಿನ ತೇರಿಗೆ ರಮ್ಯಾ, ರಚ್ಚು ಸಾಕ್ಷಿಯಾಗಲಿದ್ದಾರೆ. ಮೋಹಕ ತಾರೆ ರಮ್ಯಾ, ಡಿಂಪಲ್​ ಕ್ವೀನ್​ ರಚಿತಾ ರಾಮ್​ ಒಂದೇ ವೇದಿಕೆಯಲ್ಲಿ ಮಿಂಚಲಿದ್ದಾರೆ.

ಬೆಣ್ಣೆಯ ಮನಸ್ಸಿನ ಚೆಂದುಳ್ಳಿ ಚೆಲಿವೆಯರ ಉಪಸ್ಥಿತಿಯಲ್ಲಿ ಪ್ರೀ ರಿಲೀಸ್​ ಇವೆಂಟ್​​ ನಡೆಯಲಿದೆ. ಈ ಸಮಾರಂಭದಲ್ಲಿ ರಮ್ಯಾ, ರಚ್ಚು ಸೇರಿ ಚಿತ್ರರಂಗದ ಇನ್ನಷ್ಟು ಕಲಾವಿದ್ರೂ ಭಾಗವಹಿಸೋ ಸಾಧ್ಯತೆ ಇದೆ. ಅಂತೂ ವೇದಿಕೆ ಮೇಲೆ ಡಾಲಿ ಜತೆ ಸ್ಯಾಂಡಲ್​ವುಡ್​​​ ಬೆಡಗಿಯರು ಹೆಜ್ಜೇ ಹಾಕ್ತಾರಾ ಅನ್ನೋ ಪ್ರಶ್ನೆಗೆ ಡಾಲಿ ಉತ್ತರ ಕೂಡ ಕೊಟ್ಟಿದ್ದಾರೆ.

ನಟರಾಕ್ಷಸ ಡಾಲಿಯ ಕನಸಿನ ಕೂಸು ಹೆಡ್​ಬುಷ್​​​​. ಈಗಾಗ್ಲೇ ಸ್ಯಾಂಡಲ್​ವುಡ್​​​​ ಟು ಟಾಲಿವುಡ್​​​​ ಅಬ್ಬರಿಸಿ ಬೊಬ್ಬಿರಿಯುತ್ತಿರುವ ನಟ ಭಯಂಕರನಿಗೆ ಈ ಸಿನಿಮಾ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಸ್ವತಃ ಡಾಲಿ, ರಾಮ್ಕೋ ಸೋಮಣ್ಣ ಸಹಭಾಗಿತ್ವದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಿರೋದ್ರಿಂದ ಕ್ಯೂರಿಯಾಸಿಟಿ ಕೂಡ ಡಬಲ್​​ ಆಗಿದೆ. ಶೂನ್ಯ ನಿರ್ದೇಶನ, ಚರಣ್​ ರಾಜ್​​ ಮ್ಯೂಸಿಕ್​ ಕಂಪನ, ಅಗ್ನಿ ಶ್ರೀಧರ್​ ಬರವಣಿಗೆ ಸಿಂಚನ ಎಲ್ಲವೂ ಚಿತ್ರಕ್ಕೆ ಬಲ ತುಂಬಿವೆ.

ಒಟ್ಟಾರೆ ಡಾನ್​ ಜಯರಾಜ್​ ಜಿವನ ಚರಿತ್ರೆಯನ್ನು ತೆರೆ ಮೇಲೆ ತರೋ ವಿಭಿನ್ನ ಪ್ರಯತ್ನಕ್ಕೆ ಪ್ರೇಕ್ಷಕರ ರೆಸ್ಪಾನ್ಸ್​ ಹೇಗಿರುತ್ತೋ ಕಾದು ನೋಡ್ಬೇಕು.

ರಾಕೇಶ್​ ಆರುಂಡಿ, ಫಿಲ್ಮ್​​​​ ಬ್ಯೂರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES