Wednesday, January 22, 2025

ಸೂರ್ಯ ಜೈ ಭೀಮ್ ಫ್ಲೇವರ್​​​​ನ ‘ಗೌಳಿ’ ಶೂಟಿಂಗ್ ಪ್ಯಾಕಪ್

ರಣ ರಣ ರಕ್ಕಸರ ರಾಜನಂತೆ ಘರ್ಜಿಸ್ತಿರೋ ಶ್ರೀನಗರ ಕಿಟ್ಟಿಯ ಗೌಳಿ ಸಿನಿಮಾ ಸಖತ್​​​​ ಸೌಂಡ್​ ಮಾಡ್ತಿದೆ. ಈಗಾಗ್ಲೇ ಕಿಟ್ಟಿಯ ಪಸ್ಟ್​​ ಲುಕ್​​​ಗೆ ಫ್ಯಾನ್ಸ್​ ಕ್ಲೀನ್​ ಬೋಲ್ಡ್​ ಆಗಿದ್ದು ಬೆಚ್ಚಿ ಬೆವರಿಳಿಸುವಂತಿದೆ. ಅದ್ಭುತ ಮೇಕಿಂಗ್​ ಸ್ಟೈಲ್​ನಿಂದಾಗಿ ಸದ್ದು ಮಾಡ್ತಿರೋ ಗೌಳಿ ಚಿತ್ರದ ಸ್ಪೆಷಲ್​ ಅಪ್ಡೇಟ್ಸ್​​ ಹೇಳ್ತೀವಿ. ನೀವೇ ಓದಿ.

  • ಹಳ್ಳಿ ಹೈದನ ಏಳು ಬೀಳುಗಳ ಎಮೋಷನಲ್​ ಸಿನಿಮಾ ಗೌಳಿ..!

ಗೌಳಿ. ಸದ್ಯ ಕನ್ನಡ ಚಿತ್ರರಂಗದದಲ್ಲಿ ಸೆನ್ಸೇಷನ್​ ಕ್ರಿಯೇಟ್​​ ಮಾಡಿರೋ ಸಿನಿಮಾ. ಕೇವಲ ಸಿಂಗಲ್​ ಟೀಸರ್​​​​, ಲಿರಿಕಲ್​ ಸಾಂಗ್​ನಿಂದ್ಲೇ ಈ ಪರಿಯಾದ ಹೈಪ್​ ಕ್ರಿಯೇಟ್​ ಮಾಡಿದೆ. ಅದ್ಭುತವಾದ ಮೇಕಿಂಗ್​ ಸ್ಟೈಲ್​​​, ಲೊಕೇಷನ್ಸ್​​​, ಸಿನಿಮಾಟೋಗ್ರಫಿಗೆ ಸಿನಿರಿಸಿಕರಿಂದ ಪ್ರಶಂಸೆಗೆ ಪಾತ್ರವಾಗಿರೋ ಸಿನಿಮಾ ಗೌಳಿ. ಇನ್ನೂ ಚಿತ್ರದ ನಾಯಕ ಕಿಟ್ಟಿ ಭಯಾನಕ ಲುಕ್​ ಕಂಡು ಥ್ರಿಲ್​ ಆಗಿರುವ ಚಿತ್ರಪ್ರೇಮಿಗಳು ಸಿಕ್ಕಾಪಟ್ಟೆ ಕುತೂಹಲ ಕೂಡ ವ್ಯಕ್ತಪಡಿಸಿದ್ದಾರೆ.

ನಟರಾದ ಶ್ರೀನಗರ ಕಿಟ್ಟಿ, ರಂಗಾಯಣ ರಘು, ಯಶ್‌ ಶೆಟ್ಟಿ, ಶರತ್ ಲೋಹಿತಾಶ್ವ, ಕಾಕ್ರೋಚ್ ಸುಧೀ, ಮುಂತಾದವರು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದ ಫೈಟಿಂಗ್ ಸೀನ್​ಗಾಗಿ ನಿರ್ಮಾಪಕರು 35 ಲಕ್ಷ ಖರ್ಚು ಮಾಡಿದ್ದಾರೆ. ಗೌಳಿ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಹುತೇಕ ಮುಕ್ತಾಯ ಹಂತ ತಲುಪಿದ್ದು ಸದ್ಯದಲ್ಲೇ ತೆರೆಗೆ ಬರಲಿದೆ.

ಕನಕಪುರ ಹತ್ತಿರದ ಸಂಗಮ ಫಾಲ್ಸ್ ಹಾಗೂ ನದಿಯ ಬ್ಯಾಕ್ ವಾಟರ್‌ನಲ್ಲಿ ಇತ್ತೀಚೆಗೆ ಪ್ರೇಮಗೀತೆಯ ಚಿತ್ರೀಕರಣ ನಡೆಸಿದೆ. ಈ ಮೂಲಕ ಕುಂಬಳಕಾಯಿ ಒಡೆದು ಶೂಟಿಂಗ್​ ಪ್ಯಾಕಪ್​ ಮಾಡಿದೆ ಚಿತ್ರತಂಡ. ಹಳ್ಳಿಯ ಪರಿಸರದ ಬ್ಯಾಕ್‌ಡ್ರಾಪ್‌ನಲ್ಲಿ, ಮುರಳಿ ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಹಾಡಿನಲ್ಲಿ ನಾಯಕ ಶ್ರೀನಗರ ಕಿಟ್ಟಿ, ನಾಯಕಿ ಪಾವನಾಗೌಡ ಹಾಗೂ ೪೦ರಿಂದ ೫೦ ಜನ ನೃತ್ಯ ಕಲಾವಿದರು ಭಾವಹಿಸಿದ್ದಾರೆ.

ನಿರ್ಮಾಪಕ ರಘು ಸಿಂಗಂ ಅವರು ಯಾವ ಹಂತದಲ್ಲೂ ಕಾಂಪ್ರಮೈಸ್ ಆಗದೆ, ಅಪಾರ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸೂರ ಅವರ ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಅವರು ಜೀವನದಲ್ಲಿ ತುಂಬಾ ಎಮೋಷನಲ್ ಆಗಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ. ಅದ್ದೂರಿ ಮೇಕಿಂಗ್, ಲೊಕೇಶನ್, ಹೀಗೆ ಹಲವಾರು ವಿಶೇಷತೆಗಳಿಂದ ಸದ್ದು ಮಾಡ್ತಿರೋ ಗೌಳಿ ಚಿತ್ರದ ಟ್ರೈಲರ್​ ಸದ್ಯದಲ್ಲೇ ರಿಲೀಸ್​ ಆಗಲಿದೆ. ಒಟ್ಟಾರೆ ಬೆಟ್ಟದಷ್ಟು ನಿರೀಕ್ಷೆ ಮುಡಿಸಿರೋ ಗೌಳಿ ಜನರ ನಿರೀಕ್ಷೆಗಳನ್ನು ಹುಸಿ ಮಾಡದೇ ಯಶಸ್ವಿಯಾಗಲಿ.

ರಾಕೇಶ್​ ಆರುಂಡಿ, ಫಿಲ್ಮ್​ ಬ್ಯುರೋ, ಪವರ್​ ಟಿವಿ

RELATED ARTICLES

Related Articles

TRENDING ARTICLES