ನವದೆಹಲಿ : ಮುಸ್ಲಿಂ ವಿದ್ಯಾರ್ಥಿನಿಯರ ವಿದ್ಯಾಭ್ಯಾಸ ಮುಖ್ಯ, ಹೀಗಾಗಿ ಹೈಕೋರ್ಟ್ ಆದೇಶವನ್ನ ವಿರೋಧಿಸುತ್ತೇನೆ ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಸ್ತ್ರಕ್ಕಿಂತ ಹೆಣ್ಣು ಮಕ್ಕಳ ಶಿಕ್ಷಣವೇ ಮುಖ್ಯ, ಹಿಜಾಬ್ ಅರ್ಜಿದಾರರ ಆಕ್ಷೇಪಣೆಯನ್ನ ಎತ್ತಿ ಹಿಡಿಯುತ್ತೇನೆ, ಕರ್ನಾಟಕದ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿದ್ದೇನೆ. ಹಿಜಾಬ್ ಅನ್ನೋದು ಕೇವಲ ಆಯ್ಕೆಯ ಪ್ರಶ್ನೆಯಾಗಿತ್ತು. ನನಗೆ ಅತ್ಯಂತ ಮುಖ್ಯವಾದ ವಿಷಯವೆಂದರೆ ಶಿಕ್ಷಣ ಇದು ಆರ್ಟಿಕಲ್ 19 ಮತ್ತು 25ಕ್ಕೆ ಸಂಬಂಧಿಸಿದ ಕೇಸ್ ಕರ್ನಾಟಕ ಸರ್ಕಾರದ ಆದೇಶವನ್ನು ರದ್ದುಗೊಳಿಸಿದ್ದೇನೆ ಎಂದರು.
ಅದಲ್ಲದೇ, ಹಿಜಾಬ್ ಧರಿಸೋದು ಅವರವರ ಆಯ್ಕೆಗೆ ಬಿಟ್ಟಿದ್ದು, ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ತೀರ್ಪು ಸರಿಯಿಲ್ಲ. ಧಾರ್ಮಿಕ ಆಚರಣೆ ಈ ವಿವಾದಕ್ಕೆ ಪೂರಕವಲ್ಲ ಎಂದು ಹೇಳಿದರು.