ಕಲಬುರಗಿ : ಒಂದೆಡೆ ಮಾರುಕಟ್ಟೆಯಲ್ಲಿ ಹರಾಜಿನಂತೆ ಸರ್ಟಿಫಿಕೆಟ್ ನೀಡುತ್ತಿರುವ ಸಿಬ್ಬಂದಿಗಳು, ನಮ್ಮ ಸರ್ಟಿಫಿಕೆಟ್ ಸಿಗುತ್ತಾ ಇಲ್ವಾ ಅಂತಾ ಆತಂಕ ದಲ್ಲಿರುವ ಅಭ್ಯರ್ಥಿಗಳು, ಅಂದಹಾಗೆ ಗುಲಬರ್ಗಾ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಲ್ಲಿ ಕಳೆದ 10 ದಿನಗಳಿಂದ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತಿವೆ. ಯಾಕಂದ್ರೆ ರಾಜ್ಯ ಸರ್ಕಾರ ಇತ್ತೀಚೆಗೆ 15 ಸಾವಿರ ಶಿಕ್ಷಕರ ನೇಮಕಾತಿ ಮಾಡಿ ಆದೇಶ ಹೊರಡಿಸಿದ್ದು, ಆ ಪಟ್ಟಯಲ್ಲಿ ಆಯ್ಕೇಯಾದ ಅಭ್ಯರ್ಥಿಗಳಿಗೆ ವಿವಿಯಿಂದ ನೀಡುವ ಕಾನ್ವೊಕೇಶನ್ ಸರ್ಟಿಫಿಕೆಟ್ ಅನ್ನು ಕಡ್ಡಾಯವಾಗಿ ದಾಖಲಾತಿಗಳ ಪರಿಶೀಲನೆಗೆ ತರಬೇಕು ಅಂತಾ ಇದೇ ಮೊದಲ ಬಾರಿಗೆ ಆದೇಶಿಸಿದೆ. ಹೀಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಲಿತು ನೇಮಕವಾದ ಅಭ್ಯರ್ಥಿಗಳು ಕಾನ್ವಿಕೇಶನ್ ಸರ್ಟಿಫಿಕೆಟ್ ಅರ್ಜಿ ಹಾಕಿ ಹಲವು ದಿನಗಳು ಕಳೆದ್ದರು ಸಹ ಸರ್ಟಿಫಿಕೆಟ್ ಮಾತ್ರ ಸಿಗ್ತಿಲ್ಲ, ಇನ್ನು ಕೆಲ ಅಭ್ಯರ್ಥಿಗಳ ಸರ್ಟಿಫಿಕೆಟ್ ರೆಡಿಯಾದ್ರು ಅಭ್ಯರ್ಥಿಗಳಿಗೆ ತಲುಪಿಸಲು ವಿವಿ ಸಿಬ್ಬಂದಿಗಳು ಎಡವಿದ್ದಾರೆ. ಆದರೆ ವಿದ್ಯಾರ್ಥಿಗಳ ಸಮಸ್ಯೆಗೆ ಮುಕ್ತಿ ನೀಡಲು ಇದೀಗ ವಿವಿ ಮುಂದಾಗಿದ್ದು, ನಮ್ಮ ಸಲುವಾಗಿ ಹಗಲಿರುಳು ಕೆಲಸ ಮಾಡ್ತಾ ಕಾನ್ವೋಕೇಶನ್ ಸರ್ಟಿಫಿಕೇಟ್ ವಿತರಣೆಗೆ ಕ್ರಮ ಕೈಗೊಂಡಿದ್ದು, ಕೊಂಚ ನೆಮ್ಮದಿ ತಂದಿದೆ ಅಂತಾರೆ ವಿದ್ಯಾರ್ಥಿಗಳು.
ಇನ್ನು 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 5 ಸಾವಿರ ಹುದ್ದೆಗಳು ಕಲ್ಯಾಣ ಕರ್ನಾಟಕ ಭಾಗದ ಖೋಟಾದಡಿ ಆಯ್ಕೇಯಾಗಿದ್ದು, ಹೀಗೆ ಸೆಲೆಕ್ಟ್ ಆದ ಎಲ್ಲಾ ಅಭ್ಯರ್ಥಿಗಳು ಒಮ್ಮೆಲೆ ಕಾನ್ವೋಕೇಶನ್ ಸರ್ಟಿಫಿಕೆಟ್‌ಗೇ ಅರ್ಜಿ ಸಲ್ಲಿಸಿರುವದರಿಂದ ವಿವಿ ಅಧಿಕಾರಿಗಳಿಗೆ ಸಮರ್ಪಕವಾಗಿ ಸರ್ಟಿಫಿಕೆಟ್ ವಿತರಿಸಲು ಆಗದೇ ಪರದಾಡುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆಗಳನ್ನ ಅರಿತ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರಾದ ಡಾ ಮೇಧಾವಿನಿ ಕಟ್ಟಿಯವರು, ಪ್ರತಿನಿತ್ಯ ಕಾನ್ವೋಕೇಶನ್ ಸರ್ಟಿಫಿಕೇಟ್‌ಗಾಗಿ 700 ರಿಂದ 800 ಅರ್ಜಿಗಳು ಬರುತ್ತಿದ್ದು, ಅದರಲ್ಲಿ ದಿನನಿತ್ಯ 500 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ ನೀಡಲು ಕ್ರಮ ಕೈಗೊಂಡಿದ್ದಾರೆ. ಅದಕ್ಕಾಗಿ ಸಿಬ್ಬಂದಿಗಳ ಕೊರತೆ ಮಧ್ಯೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಸಿಬ್ಬಂದಿಗಳನ್ನ ತಾತ್ಕಾಲಿಕವಾಗಿ ನೇಮಕ ಮಾಡಿಕೊಂಡು, ಕಾನ್ವೋಕೇಶನ್ ಸರ್ಟಿಫಿಕೇಟ್ ವಿತರಿಸಲು ವಿವಿ ಮೌಲ್ಯಮಾಪನ ಕುಲಸಚಿವರಾದ ಡಾ ಮೇಧಾವಿನಿ ಕಟ್ಟಿ ಡೇ ನೈಟ್ ವರ್ಕ್ ಮಾಡ್ತಿದಾರೆ.
ಅದೆನೇ ಇರಲಿ ಸರ್ಕಾರ ಏಕಾಏಕಿ ಕೈಗೊಂಡ ನಿರ್ಧಾರದಿಂದ ಕಲ್ಯಾಣ ಕರ್ನಾಟಕ ಭಾಗದ ಸಾವಿರಾರು ಅಭ್ಯರ್ಥಿಗಳು ಇದೀಗ ಇಕ್ಕಟ್ಟಿಗೆ ಸಿಲುಕಿದ್ದು, ಶತಾಯಗತಾಯ ವಿದ್ಯಾರ್ಥಿಗಳಿಗೆ ಕಾನ್ವೋಕೇಶನ್ ಸರ್ಟಿಫಿಕೇಟ್ ನೀಡಲು ವಿವಿ ಮೌಲ್ಯಮಾಪನ ಕುಲಸಚಿವರಾದ ಡಾ ಮೇಧಾವಿ ಕಟ್ಟಿ ಅಗತ್ಯ ಕ್ರಮಗಳನ್ನ ಕೈಗೊಂಡಿರೊದು ಭಾವಿ ಶಿಕ್ಷಕರಲ್ಲಿ ಕೊಂಚ ನೆಮ್ಮದಿ ಮೂಡಿಸಿದೆ.
ಅನಿಲ್‌ಸ್ವಾಮಿ ಪವರ್ ಟಿವಿ ಕಲಬುರಗಿ