Monday, December 23, 2024

LPG ನಷ್ಟವನ್ನು ಸರಿದೂಗಿಸಲು ಕೇಂದ್ರದ ಪ್ಲ್ಯಾನ್

ಬೆಂಗಳೂರು : ಒಂದ್ಕೆಡೆ, ಅಡುಗೆ ಅನಿಲದ ಬೆಲೆ ಜಾಸ್ತಿ ಮಾಡಿದೆ ಕೇಂದ್ರ ಸರ್ಕಾರದ ಅಂತ ಗೃಹಿಣಿಯರು ಹಿಡಿ ಶಾಪ ಹಾಕ್ತಿದ್ದಾರೆ.. ಹಾಗಾಗಿ, ನಾವೆಲ್ಲಾ ಅಂದ್ಕೊಂಡಿದ್ದು, ಗ್ರಾಹಕರಿಗೆ ಬರೆ ಅಂತ.. ಆದ್ರೆ, ಎಲ್‌ಪಿಜಿ ಕಂಪನಿಗಳಿಗೆ ಸಿಕ್ಕಾಪಟ್ಟೆ ಲಾಸ್‌ ಆಗಿದೆಯಂತೆ.. ಹೌದು, ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡಿದ್ರಿಂದ ನಷ್ಟ ಉಂಟಾಗಿದ್ದು, ಸರ್ಕಾರಿ ಒಡೆತನದ ಮೂರು ಇಂಧನ ವ್ಯಾಪಾರಿಗಳಿಗೆ 22,000 ಕೋಟಿ ರೂಪಾಯಿಗಳ ಅನುದಾನ ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ಹೌದು, ಕಳೆದ ಎರಡು ವರ್ಷಗಳಲ್ಲಿ ಗೃಹಬಳಕೆಯ ಅಡುಗೆ ಅನಿಲ ಎಲ್ಪಿಜಿಯನ್ನು ಕಡಿಮೆ ವೆಚ್ಚದಲ್ಲಿ ಮಾರಾಟ ಮಾಡುವುದರಿಂದ ಉಂಟಾದ ನಷ್ಟ ಉಂಟಾಗಿತ್ತು.. ಇದನ್ನು ಸರಿದೂಗಿಸಲು ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ.

ಇಂದು ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ , ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಗೆ ಒಂದೇ ಬಾರಿ 22,000 ಕೋಟಿ ರೂ. ಅನುದಾನವನ್ನು ಅನುಮೋದಿಸಿತು.

ಇನ್ನು, ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ರೈಲ್ವೆ ನೌಕರರಿಗೆ ದೀಪಾವಳಿ ಗಿಫ್ಟ್‌ ಘೋಷಿಸಲಾಗಿದೆ.. ಹೌದು, ರೈಲ್ವೆ ಉದ್ಯೋಗಿಗಳಿಗೆ 78 ದಿನಗಳ ವೇತನವನ್ನು ಬೋನಸ್‌ ಆಗಿ ನೀಡಲು ನಿರ್ಣಯ ಮಾಡಲಾಗಿದೆ.
ರೈಲ್ವೆ ಇಲಾಖೆ ಸುಮಾರು 11.27 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದ್ದು, ಬೋನಸ್​ಗಾಗಿ 1,823 ಕೋಟಿ ವೆಚ್ಚ ಮಾಡಲು ಸಂಪುಟ ಒಪ್ಪಿಗೆ ಸೂಚಿಸಿದೆ.

2022-23 ರಿಂದ 2025-26 ರವರೆಗೆ 15 ನೇ ಹಣಕಾಸು ಆಯೋಗದ ಉಳಿದ ನಾಲ್ಕು ವರ್ಷಗಳವರೆಗೆ ಈಶಾನ್ಯ ಪ್ರದೇಶಕ್ಕಾಗಿ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ ಹೊಸ ಯೋಜನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿದೆ. ಇದ್ರ ಜೊತೆಗೆ, ಬಹು-ರಾಜ್ಯ ಸಹಕಾರ ಸಂಘಗಳ ಕಾಯಿದೆ 2002 ಅನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಬಹು-ರಾಜ್ಯ ಸಹಕಾರ ಸಂಘಗಳ ಮಸೂದೆ, 2022 ಅನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದು 97 ನೇ ಸಾಂವಿಧಾನಿಕ ತಿದ್ದುಪಡಿಯ ನಿಬಂಧನೆಗಳನ್ನು ಒಳಗೊಂಡಿರುತ್ತದೆ.

RELATED ARTICLES

Related Articles

TRENDING ARTICLES